More

    ಈ ಗ್ರಾಮದಲ್ಲಿ ಆನ್​ಲೈನ್ ಕ್ಲಾಸ್​ ಫೇಲಾಯಿತು- ಶಾಲೆಯೇ ಮೊಬೈಲ್ ಆಯಿತು ನೋಡಿ!

    ಮುರ್ಷಿದಾಬಾದ್​: ದೇಶಾದ್ಯಂತ ಶಾಲಾ-ಕಾಲೇಜುಗಳು ಆನ್​ಲೈನ್ ಶಿಕ್ಷಣದ ಮೊರೆ ಹೋಗಿವೆ. ಹಲವೆಡೆ ತಾಂತ್ರಿಕ ತೊಂದರೆಗಳಿಂದಾಗಿ ಎಲ್ಲ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿ ಸಿಗುತ್ತಿಲ್ಲ. ಆದಾಗ್ಯೂ ಅವರನ್ನೆಲ್ಲ ಕಡೆಗಣಿಸಿ ಶಿಕ್ಷಣ ಸಂಸ್ಥೆಗಳು ಆನ್​ಲೈನ್ ತರಗತಿ ಮುಂದುವರಿಸಿವೆ. ಇವುಗಳ ನಡುವೆ ಪಶ್ಚಿಮ ಬಂಗಾಳದ ಗ್ರಾಮೀಣ ಶಾಲೆಯೊಂದು ದೇಶದ ಗಮನಸೆಳೆದಿದೆ.

    ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾ ಪ್ರದೇಶದಲ್ಲಿರುವ ಆಂಡಿರನ್​ ಪ್ರೈಮರಿ ಸ್ಕೂಲ್​(ಎಪಿಎಸ್​) ಕೂಡ ಎಲ್ಲ ಶಾಲೆಗಳಂತೆ ಆನ್​ಲೈನ್ ತರಗತಿಗಳನ್ನು ಆರಂಭಿಸಿತ್ತು. ಆದರೆ, 162 ವಿದ್ಯಾರ್ಥಿಗಳ ಪೈಕಿ 15 ವಿದ್ಯಾರ್ಥಿಗಳ ಪಾಲಕರ ಬಳಿ ಮಾತ್ರವೇ ಸ್ಮಾರ್ಟ್​ಫೋನ್ ಇರುವ ಕಾರಣ ಉಳಿದವರು ಅದರಿಂದ ವಂಚಿತರಾಗಿದ್ದರು. ಈ ಶಾಲೆಯ ಶಿಕ್ಷಕರ ಮುತುವರ್ಜಿ ಎಷ್ಟರಮಟ್ಟಿಗೆ ಎಂದರೆ ಮಕ್ಕಳಿಗೆ ಪಾಠ ತಪ್ಪಿ ಹೋಗಬಾರದು ಎಂದು ಎಲ್ಲ ಶಿಕ್ಷಕರೂ ಚಿಂತನೆ ನಡೆಸಿ ಶಾಲಾ ತರಗತಿಯನ್ನೇ ಮಕ್ಕಳಿರುವಲ್ಲಿ ಕೊಂಡೊಯ್ಯುವ ಸಿದ್ಧತೆ ನಡೆಸಿದ್ರು.

    ಇದನ್ನೂ ಓದಿ: ಸ್ಮಾರಕ ರಕ್ಷಣೆಗೆ ವಾಟರ್ ಪ್ರೂಫ್​ ತಂತ್ರಜ್ಞಾನದ ಮೊರೆ!

    ಎಪಿಎಸ್​ನ ಹೆಡ್​ಮಾಸ್ಟರ್​ ಬಿಸ್ವಜಿತ್ ದತ್ತ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಮ್ಮಲ್ಲಿ ಕಲಿಯುವ ಬಹುತೇಕ ವಿದ್ಯಾರ್ಥಿಗಳ ಪಾಲಕರು ಬಡವರು. ಅವರಿಗೆ ಸ್ಮಾರ್ಟ್​ಫೋನ್ ತೆಗೆದುಕೊಳ್ಳುವುಷ್ಟು ಅಥವಾ ಇಂಟರ್​ನೆಟ್ ಹೊಂದುವಷ್ಟು ಸಾಮರ್ಥ್ಯವಿಲ್ಲ. ಹೀಗಾಗಿ ನಾವೇ ಸುತ್ತಮುತ್ತಲಿನ ಪೂರ್ವಪಾರ, ದಾಸ್​ಪಾರಾ, ಸಸ್ಟಿತಲ ಮತ್ತು ಇತರೆ ಪ್ರದೇಶಗಳಿಗೆ ತೆರಳಿ ಅಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಆಯಾ ಪ್ರದೇಶದ ಮಕ್ಕಳು ಸೇರಿಸಿ ವಾರಕ್ಕೆ ಎರಡು ಅಥವಾ ಮೂರು ತರಗತಿಗಳನ್ನು ನಡೆಸುತ್ತೇವೆ. ಈ ರೀತಿ ಒಟ್ಟು ಎಂಟು ಪ್ರದೇಶಗಳಲ್ಲಿ ತರಗತಿ ನಡೆಯುತ್ತಿವೆ. ಈ ತರಗತಿಗಳು ಬೆಳಗ್ಗೆ 9ರಿಂದ ಅಪರಾಹ್ನ 2 ಗಂಟೆ ತನಕ ಮಾತ್ರ ನಡೆಯುತ್ತವೆ. ಪ್ರತಿ ತರಗತಿಯಲ್ಲಿ 25 ಮಕ್ಕಳಷ್ಟೇ ಇರುತ್ತಾರೆ. ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ. ಸ್ಥಳೀಯರ ಸಹಕಾರವೂ ಇದಕ್ಕೆ ಸಿಕ್ಕಿದೆ ಎಂದು ವಿವರಿಸಿದ್ದಾರೆ. (ಏಜೆನ್ಸೀಸ್​)

    ಸ್ಮಾರ್ಟ್​ಫೋನ್ ಕಳೆದುಕೊಂಡವರ ತುರ್ತು ಗಮನಕ್ಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts