More

    ಸ್ಮಾರಕ ರಕ್ಷಣೆಗೆ ವಾಟರ್ ಪ್ರೂಫ್​ ತಂತ್ರಜ್ಞಾನದ ಮೊರೆ!

    ಶ್ರೀಕಾಂತ ಅಕ್ಕಿ 

    ಬಳ್ಳಾರಿ: ಹಂಪಿಯ ಸ್ಮಾರಕಗಳನ್ನು ರಕ್ಷಿಸಲು ವಿಶ್ವ ಹಂಪಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ಪುರಾತತ್ತ್ವ ಇಲಾಖೆ ವಾಟರ್ ಪ್ರೂಫ್ ತಂತ್ರಜ್ಞಾನದ ಮೊರೆ ಹೋಗಿದೆ.ನೂತನ ತಂತ್ರಜ್ಞಾನ ಅಳವಡಿಸಿ ಸ್ಮಾರಕಗಳ ಮೇಲಿರುವ ಸವಕಳಿ, ಪಾಚಿ ಶುಚಿಗೊಳಿಸುವ ಕೆಲಸ ಮಾಡಲಾಗುತ್ತಿದೆ. ವಿಜಯನಗರ ಕಾಲದ ಹಂಪಿಗೆ 600ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ.ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿಯೂ ಸೇರಿದೆ.ಲಾಕ್‌ಡೌನ್ ರಿಲೀಫ್ ಬಳಿಕ ಜು.6ರಿಂದ ವೀಕ್ಷಣೆಗೆ ಅವಕಾಶ ನೀಡಿದ್ದರಿಂದ ದಿನನಿತ್ಯ ನೂರಕ್ಕೂ ಹೆಚ್ಚು ಪ್ರವಾಸಿಗರು ಕರೊನಾ ಹಾವಳಿಯ ಮಧ್ಯೆಯೂ ಬರುತ್ತಿದ್ದಾರೆ.

    ಆದರೆ, ಸರಿಯಾದ ಸಂರಕ್ಷಣೆಯಿಲ್ಲದೇ ಸ್ಮಾರಕಗಳು ಅಳಿವಿನ ಅಂಚಿಗೆ ಬಂದು ನಿಂತಿವೆ ಎನ್ನುವ ಆರೋಪವಿದೆ.ಮಳೆಗಾಲದಲ್ಲಿಯೂ ಸ್ಮಾರಕಗಳು ಸವಿಯುವುದಲ್ಲದೇ ಪಾಚಿ ಗಟ್ಟಿ ಶೈನಿಂಗ್ ಕಳೆದುಕೊಳ್ಳುತ್ತಿದ್ದವು.ಇದರ ಜತೆಗೆ ಪ್ರತಿ ವರ್ಷ ತುಂಗಭದ್ರಾ ಜಲಾಶಯ ತುಂಬಿದ ಬಳಿಕ ನದಿಗೆ ನೀರು ಬಿಟ್ಟಾಗ ಹಂಪಿಯ ಸ್ಮಾರಕಗಳು ಮುಳುಗಿದ್ದವು.ಕಳೆದ ವರ್ಷ ಕೋದಂಡ ರಾಮ ದೇವಸ್ಥಾನ, ಪುರಂದರ ಮಂಟಪ ಸೇರಿ ವಿರುಪಾಪೂರ ದೇವಸ್ಥಾನದ ಹತ್ತಿರಯೂ ನದಿ ನೀರು ಬಂದಿತ್ತು.ಸಾಲು ಮಂಟಪದ ಹತ್ತಿರ 3 ಪಿಲ್ಲರ್ ನೆಲಕ್ಕೆ ಉರುಳಿದ್ದವು.

    ಹೀಗಾಗಿ ಸ್ಮಾರಕಗಳನ್ನು ಯಥಾಸ್ಥಿತಿ ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ವಾಟರ್ ಪ್ರೂಪ್ ತಂತ್ರಜ್ಞಾನದ ಮೂಲಕ ಸ್ಮಾರಕಗಳ ಸಂರಕ್ಷಣೆಗೆ ಎರಡು ಇಲಾಖೆಗಳು ಮುಂದಾಗಿದ್ದು, ಜನತೆಯ ಮೆಚ್ಚುಗೆಗೆ ಕಾರಣವಾಗಿದೆ.ನದಿಗೆ ನೀರು ಬಿಟ್ಟ ಬಳಿಕ ಸ್ಮಾರಕಗಳು ಮುಳುಗುವ ಹಂತಕ್ಕೆ ಬಂದರೂ ನೂತನ ತಂತ್ರಜ್ಞಾನದ ಸಹಾಯದಿಂದ ಸವಕಳಿ ಉಂಟಾಗುವುದಿಲ್ಲ, ಪಾಚಿಯೂ ಕಟ್ಟುವುದಿಲ್ಲ.

    ಹಂಪಿ ಸ್ಮಾರಕ ರಕ್ಷಣೆಗೆ ವಾಟರ್ ಪ್ರೂಪ್ ತಂತ್ರಜ್ಞಾನ ಅನುಷ್ಠಾನಗೊಳಿಸಲಾಗುತ್ತಿದೆ.ಇದರಿಂದ ಮೂಲ ಸ್ಮಾರಕಗಳಿಗೆ ಯಾವುದೇ ಧಕ್ಕೆಯಾಗದೇ ನೀರಿನ ಸವಕಳಿ ಮತ್ತು ಪಾಚಿ ತಡೆಗಟ್ಟಲಾಗುತ್ತಿದೆ.ಇದು ನೂತನ ಯೋಜನೆಯಾಗಿದ್ದು, ಮೊದಲ ಬಾರಿಗೆ ಹಂಪಿಯಲ್ಲಿ ಅನುಷ್ಠಾನಗೊಳಿಸುತ್ತಿದ್ದೇವೆ.
    ಎಂ.ಕಾಳಿಮುತ್ತು, ಉಪ ಅಧೀಕ್ಷಕರು, ಭಾರತೀಯ ಸವೇಕ್ಷಣಾ ಪುರಾತತ್ತ್ವ ಇಲಾಖೆ, ಹಂಪಿ ವೃತ್ತ.

    ವಿಜಯನಗರ ಗತವೈಭವ ಸಾರುವ ಹಂಪಿಯ ಸ್ಮಾರಕಗಳ ರಕ್ಷಣೆಗೆ ವಾಟರ್ ಪ್ರೂಪ್ ತಂತ್ರಜ್ಞಾನ ಮೊರೆ ಹೋಗಿರುವ ಹವಾಮಾ ಮತ್ತು ಎಎಸ್‌ಐ ಕಾರ್ಯ ಶ್ಲಾಘನೀಯ.ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಸ್ಮಾರಕಗಳ ಉಳಿವಿಗೆ ಮುಂದಾಗಬೇಕು.
    ರಾಮಣ್ಣ, ಹಂಪಿ ನಿವಾಸಿ

    ಏನಿದು ವಾಟರ್ ಪ್ರೂಪ್ ತಂತ್ರಜ್ಞಾನ..?: ಇದೊಂದು ರೀತಿಯ ದ್ರಾವಣವಾಗಿದ್ದು, ಸ್ಮಾರಕಗಳ ಮೇಲೆ ವಿಶೇಷ ತಜ್ಞರ ತಂಡ ಸಿಂಪಡಣೆ ಮಾಡುತ್ತದೆ.ಈಗಾಗಲೇ ಪುರಂದರ ಮಂಟಪದಲ್ಲಿ ಶೇ.90ರಷ್ಟು ಸಿಂಪಡಣೆ ಕಾರ್ಯ ಮುಗಿದಿದೆ.ಅತ್ಯಂತ ಕೆಳಪದರದಂತ ದ್ರಾವಣವಾಗಿರುವುದರಿಂದ ಮೂಲ ಸ್ಮಾರಕಗಳಿಗೆ ಯಾವುದೇ ಧಕ್ಕೆಯಾಗದೇ ಪಾಚಿ ಶುಚಿಗೊಳಿಸುತ್ತದೆ. ಮುಂಬರುವ ದಿನಗಳಲ್ಲಿ ಕಲ್ಲಿನ ರಥ, ವಿಜಯ ವಿಠಲ ದೇವಸ್ಥಾನ ಮುಂತಾದ ಮುಖ್ಯ ದೇವಸ್ಥಾನ ಒಳಗೊಂಡತೆ ನಾನಾ ಸ್ಮಾರಕಗಳ ಮೇಲೆ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ.ಕಳೆದೊಂದು ವಾರದಿಂದ ಭರದಿಂದ ಕೆಲಸ ಸಾಗಿದೆ.ಇದಕ್ಕಾಗಿಯೇ ವಿಶೇಷ ತಂತ್ರಜ್ಞರ ತಂಡ ಹಂಪಿಗೆ ಆಗಮಿಸಿದೆ.

    ನೂತನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಮಲ್​ ಪಂತ್​ ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts