ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಜೀವನಾಧಾರಿತ ಚಿತ್ರ ‘ಮೈ ಅಟಲ್ ಹೂ’. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರವಿ ಜಾಧವ್ ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರವಿದು. ವಿಶೇಷ ಅಂದರೆ ಎರಡು ಬಾರಿ ರಾಷ್ಟ್ರಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಈ ಚಿತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಚಿತ್ರದ ಶೂಟಿಂಗ್ ಸಮಯದಲ್ಲಿ 60 ದಿನಗಳ ಕಾಲ ತಾವೇ ಅಡುಗೆ ಮಾಡಿಕೊಂಡು ದಾಲ್ ಖಿಚ್ಡೀಯಂತಹ ಸಾತ್ವಿಕ ಆಹಾರ ಸೇವಿಸಿದ ಬಗ್ಗೆ ಪಂಕಜ್ ಈ ಹಿಂದೆ ಹೇಳಿಕೊಂಡಿದ್ದರು. ಇದೀಗ ‘ಅಟಲ್’ ಚಿತ್ರದ ಟೀಸರ್ ಮತ್ತು ಟ್ರೇಲರ್ ರಿಲೀಸ್ ಆಗಿದ್ದು, ಕುತೂಹಲ ಮೂಡಿಸುವಂತಿದೆ.
ಇದನ್ನೂ ಓದಿ : ಇಂದಿನಿಂದ ಎಕ್ಸ್ ಆ್ಯಂಡ್ ವೈ ; ‘ಒಂದಲ್ಲಾ ಎರಡಲ್ಲಾ’ ಸತ್ಯಪ್ರಕಾಶ್ ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾ
‘ಹಿಂದಿನಿಂದ ಚೂರಿ ಹಾಕುವವರೇ ಹೆಚ್ಚಿರುವ ಇಂತಹ ರಾಜಕೀಯ ನಾನು ಮಾಡುವುದಿಲ್ಲ. ಕಾಲೆಳೆಯುವವರು ಎಷ್ಟೇ ಇರಲಿ, ಅಟಲ್ ಬಿಹಾರಿ ವಾಜಪೇಯಿ ಮತ್ತೆ ಮತ್ತೆ ಎದ್ದು ನಿಲ್ಲುವುದನ್ನು ನೋಡುವುದನ್ನು ಅವರು ರೂಢಿಸಿಕೊಳ್ಳಬೇಕು’ ಎಂದಿರುವ ಡೈಲಾಗ್ ಸದ್ಯ ವೈರಲ್ ಆಗಿದೆ. ಸಿನಿಮಾ 2024ರ ಜ. 19ರಂದು ರಿಲೀಸ್ ಆಗಲಿದೆ.