More

    ಸಲಾರ್ ಸಂಭ್ರಮ ; ಮಧ್ಯರಾತ್ರಿ 1 ಗಂಟೆಗೆ ಶೋ, ಏರಿತು ಟಿಕೆಟ್ ದರ

    ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಾಯಕನಾಗಿರುವ ಬಹುನಿರೀಕ್ಷಿತ ಚಿತ್ರ ‘ಸಲಾರ್’. ನಾಳೆ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್ ಮತ್ತು ರಿಲೀಸ್ ಟ್ರೇಲರ್ ಎರಡೂ ಯೂಟ್ಯೂಬ್‌ನಲ್ಲಿ ದಾಖಲೆ ಸೃಷ್ಟಿಸಿವೆ. ಜತೆಗೆ ‘ಸಲಾರ್ 1: ದಿ ಸೀಸ್‌ೈರ್’ ಖನ್ಸಾರ್ ಎಂಬ ಮಾಫಿಯಾ ಸಾಮ್ರಾಜ್ಯದ ಚುಕ್ಕಾಣಿ ಹಿಡಿಯಲು ಪ್ರಾಣ ಸ್ನೇಹಿತರು, ಬದ್ಧವೈರಿಗಳಾಗುವ ಕಥೆ ‘ಸಲಾರ್’. ‘ಬಾಹುಬಲಿ 2’ ಬಳಿಕ ಪ್ರಭಾಸ್ ನಟಿಸಿರುವ ‘ಸಾಹೋ’, ‘ರಾಧೇಶ್ಯಾಮ್’ ಮತ್ತು ‘ಆದಿಪುರುಷ್’ ಚಿತ್ರಗಳು ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದ್ದು, ‘ಸಲಾರ್’ ಮೇಲೆ ಎಲ್ಲಿಲ್ಲದ ಕುತೂಹಲ, ನಿರೀಕ್ಷೆಗಳಿವೆ. ಅದಕ್ಕೆ ತಕ್ಕಂತೆ ಆನ್‌ಲೈನ್ ಬುಕ್ಕಿಂಗ್, ಮಧ್ಯರಾತ್ರಿ ವಿಶೇಷ ಪ್ರದರ್ಶನಗಳ ಮೂಲಕ ಚಿತ್ರಕ್ಕೆ ಹೈಪ್ ಸೃಷ್ಟಿಯಾಗಿದ್ದು, ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ.

    ಇದನ್ನೂ ಓದಿ : DUNKI TWITTER REVIEWS: ಚಿತ್ರ ಬಿಡುಗಡೆಯಾದ ತಕ್ಷಣ ಶಾರುಖ್ ಹೊರತಾಗಿ ಈ ನಟನ ನಟನೆಗೂ ಭಾರೀ ಮೆಚ್ಚುಗೆ

    ಸಲಾರ್ ಸಂಭ್ರಮ ; ಮಧ್ಯರಾತ್ರಿ 1 ಗಂಟೆಗೆ ಶೋ, ಏರಿತು ಟಿಕೆಟ್ ದರ

    ಏರಿಕೆಯಾಗಿದೆ ಟಿಕೆಟ್ ದರ
    ಕರ್ನಾಟಕಕ್ಕೆ ಹೋಲಿಸಿದರೆ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಟಿಕೆಟ್ ದರ ಕಡಿಮೆ. ಆದರೆ, ‘ಸಲಾರ್’ ಚಿತ್ರಕ್ಕೆ ರಾಜ್ಯ ಸರ್ಕಾರ ರಿಯಾಯಿತಿ ನೀಡಿದೆ. ಡಿ. 22ರಿಂದ ಡಿ.28ರವರೆಗೆ ಒಂದು ವಾರ ಮಲ್ಟಿಪ್ಲೆಕ್ಸ್‌ಗಳಲ್ಲಿ 100 ರೂ. ಹಾಗೂ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 65 ರೂ. ಟಿಕೆಟ್ ದರ ಹೆಚ್ಚಿಸಲು ಅನುಮತಿ ನೀಡಿದೆ. ಇನ್ನು ಕರ್ನಾಟಕದಲ್ಲೂ ಸಿಂಗಲ್ ಸ್ಕ್ರೀನ್‌ಗಳಲ್ಲಿ 150ರಿಂದ 200 ರೂ. ಟಿಕೆಟ್ ದರವಿದ್ದರೆ, ಮಲ್ಟಿಪ್ಲೆಕ್ಸ್‌ಗಳಲ್ಲಿ 400 ರೂ.ನಿಂದ 2200 ರೂ.ವರೆಗೂ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ.

    ಇದನ್ನೂ ಓದಿ : ಬಿಗ್ ಬಾಸ್ ಸ್ಪರ್ಧಿಗೆ ಬಿಗ್ ಶಾಕ್; ದೊಡ್ಡ ಮನೆ ಆಟಗಾರ ಅರೆಸ್ಟ್

    ಸಲಾರ್ ಸಂಭ್ರಮ ; ಮಧ್ಯರಾತ್ರಿ 1 ಗಂಟೆಗೆ ಶೋ, ಏರಿತು ಟಿಕೆಟ್ ದರ

    ಮಧ್ಯರಾತ್ರಿ 1 ಗಂಟೆಗೆ ಶೋ ಪ್ರಾರಂಭ
    ತೆಲಂಗಾಣ ರಾಜ್ಯ ಸರ್ಕಾರ ‘ಸಲಾರ್’ ಚಿತ್ರಕ್ಕೆ ಪ್ರದರ್ಶನ ಸಮಯದ ವಿಷಯದಲ್ಲೂ ವಿಶೇಷ ರಿಯಾಯಿತಿ ನೀಡಿದೆ. ಡಿ. 22ರ ಮಧ್ಯರಾತ್ರಿ 1 ಗಂಟೆಯಿಂದಲೇ ಬರೋಬ್ಬರಿ 20 ಸ್ಕ್ರೀನ್‌ಗಳಲ್ಲಿ ಮೊದಲ ಶೋ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಹಾಗೇ ತೆಲುಗು ರಾಜ್ಯಗಳಲ್ಲಿ 50ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಮುಂಜಾನೆ 4 ಗಂಟೆಗೆ ಶೋಗಳು ಪ್ರಾರಂಭವಾಗಲಿವೆ. ಜತೆಗೆ ಕರ್ನಾಟಕದಲ್ಲೂ 30ಕ್ಕೂ ಅಧಿಕ ಸಿಂಗಲ್ ಸ್ಕ್ರೀನ್‌ಗಳಲ್ಲಿ ಬೆಳಗ್ಗೆ 5 ಗಂಟೆಗೆ ಶೋಗಳು ಶುರುವಾಗಲಿದ್ದು, 6 ಗಂಟೆಯಿಂದ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನ ಪ್ರಾರಂಭವಾಗಲಿದೆ.

    ಇದನ್ನೂ ಓದಿ : ಬಿಗ್​ಬಾಸ್​ ವಿನಯ್​ ಪರ ಬ್ಯಾಟ್​ ಬೀಸಿದ ಕಿರುತೆರೆ ನಟಿ; ಫುಲ್​ ಟ್ರೋಲ್

    ಸಲಾರ್ ಸಂಭ್ರಮ ; ಮಧ್ಯರಾತ್ರಿ 1 ಗಂಟೆಗೆ ಶೋ, ಏರಿತು ಟಿಕೆಟ್ ದರ

    ಆನ್‌ಲೈನ್‌ಗೂ ತಗುಲಿದ ಬುಕ್ಕಿಂಗ್ ಬಿಸಿ
    ಆನ್‌ಲೈನ್ ಬುಕ್ಕಿಂಗ್ ಪ್ರಾರಂಭವಾಗುತ್ತಲೇ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಬುಕ್ಕಿಂಗ್‌ಗೆ ಮುಂದಾದ ಕಾರಣ ಬುಕ್‌ಮೈಶೋ ಮತ್ತು ಪೇಟಿಎಂ ಆ್ಯಪ್‌ಗಳು ಮಂಗಳವಾರ ಕೆಲ ತಾಸುಗಳ ಕಾಲ ಕ್ರಾೃಷ್ ಆಗಿದ್ದವು. ಜತೆಗೆ ಈಗಾಗಲೇ 20 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ ಎನ್ನಲಾಗಿದೆ.

    ಇದನ್ನೂ ಓದಿ : ತನಗಿಂತ 22 ವರ್ಷ ಕಿರಿಯಳಾದ ಯುವತಿಯನ್ನು ವರಿಸಲಿದ್ದಾರೆ ಸಲ್ಮಾನ್ ಖಾನ್ ಕಿರಿಯ ಸಹೋದರ ಅರ್ಬಾಜ್ ಖಾನ್

    ಸಲಾರ್ ಸಂಭ್ರಮ ; ಮಧ್ಯರಾತ್ರಿ 1 ಗಂಟೆಗೆ ಶೋ, ಏರಿತು ಟಿಕೆಟ್ ದರ

    ಕನ್ನಡ ಶೋಗಳು ಕಡಿಮೆ, ತೆಲುಗಿಗೆ ಪ್ರಾಮುಖ್ಯ
    ಕನ್ನಡದ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ ‘ಸಲಾರ್’ ಮೂಲಕ ಟಾಲಿವುಡ್‌ಗೆ ಹಾರಿದೆ. ತೆಲುಗು ಸ್ಟಾರ್ ನಟ ಪ್ರಭಾಸ್ ಜತೆ ಕನ್ನಡದ ಹಲವು ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಬೆಂಗಳೂರಿನಲ್ಲಿ ತೆಲುಗು ಶೋಗಳಿಗೆ ಹೆಚ್ಚು ಪ್ರಾಮುಖ್ಯ ನೀಡಲಾಗಿದೆ. 15 ಸ್ಕ್ರೀನ್‌ಗಳಲ್ಲಿ ಕನ್ನಡದಲ್ಲಿ 23 ಶೋಗಳಿದ್ದು, 110 ಸ್ಕ್ರೀನ್‌ಗಳಲ್ಲಿ 620ಕ್ಕೂ ಅಧಿಕ ಶೋಗಳನ್ನು ತೆಲುಗಿಗೆ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts