ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಸಾಮಾನ್ಯವಾಗಿ ಒಂದು ಭಾಷೆಯಲ್ಲಿ ಚಿತ್ರೀಕರಣ ನಡೆಸಿ, ನಾಲ್ಕೆ$ದು ಭಾಷೆಗಳಲ್ಲಿ ಡಬ್ ಮಾಡಲಾಗುತ್ತದೆ. ಹಾಡುಗಳನ್ನೂ ಸಹ ಒಂದೇ ಸಂಗೀತಕ್ಕೆ ಬೇರೆ ಭಾಷೆಗಳಲ್ಲಿ ಸಾಹಿತ್ಯ ರಚಿಸಿ, ಆಯಾ ಭಾಷೆಗಳ ಸಿಂಗರ್ಗಳಿಂದ ಹಾಡಿಸಲಾಗುತ್ತದೆ. ಆದರೆ, "ಸಿಕಾಡಾ' ಎಂಬ ಚಿತ್ರತಂಡ ವಿಭಿನ್ನ ರೀತಿಯ ಪ್ರಯತ್ನಕ್ಕೆ ಮುಂದಾಗಿದೆ.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಆರು ಹಾಡುಗಳಿದ್ದು, ನಾಲ್ಕು ಭಾಷೆಗಳಲ್ಲು ಭಿನ್ನ, ವಿಭಿನ್ನ ಟ್ಯೂನ್ಗಳನ್ನು ಮಾಡಲಾಗಿದೆ. ಆ ಮೂಲಕ ಈ ಒಂದೇ ಚಿತ್ರ, ನಾಲ್ಕು ಭಾಷೆಗಳಲ್ಲಿ ಒಟ್ಟು 24 ಹೊಸ ಟ್ಯೂನ್ನ ಹಾಡುಗಳು ಇರಲಿವೆ. ಅಂದಹಾಗೆ ಇದು ಶ್ರೀಜಿತ್ ಎಡವನ ಚೊಚ್ಚಲ ಪ್ರಯತ್ನ. ಅವರೇ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ.
ಇದನ್ನೂ ಓದಿ : ಬಿಡುಗಡೆಯಾಯ್ತು ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಟ್ರೇಲರ್; ಫ್ಯಾನ್ಸ್ ಹೇಳಿದ್ದೇನು?
ಇತ್ತೀಚೆಗಷ್ಟೆ ಸ್ಯಾಂಡಲ್ವುಡ್ ತಾರೆಯರಾದ ಮೇನಾ ರಾಜ್ ಮತ್ತು ಪ್ರಜ್ವಲ್ ದೇವರಾಜ್ ಕನ್ನಡ ವರ್ಷನ್ನ ಮೊದಲ ಲುಕ್ ಬಿಡುಗಡೆ ಮಾಡಿದರು. ರಜಿತ್ ಸಿ.ಆರ್, ಗಾಯತ್ರಿ ಮಯೂರ, ಜೈಸ್ ಜೋಸ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಬೆಂಗಳೂರು, ಅಟ್ಟಪಾಡಿ, ವಾಗಮೋನ್, ಕೊಚ್ಚಿ ಸೇರಿ ಹಲವೆಡೆ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ನವೀನ್ ರಾಜ್ ಛಾಯಾಗ್ರಹಣ, ಶೈಜಿತ್ ಕುಮಾರನ್ ಸಂಕಲನವಿರಲಿದೆ.