ಬೆಂಗಳೂರು: ಪ್ರಯೋಗ್ ಸ್ಟುಡಿಯೋ ಸಂಸ್ಥೆಯ ಓನ್ಲಿ ಕನ್ನಡ (Only ಕನ್ನಡ) ಕನ್ನಡದ ಓಟಿಟಿ. ಸದ್ಯದಲ್ಲೆ ನಾಡಿನ ಜನರ ಮುಂದೆ ತರಲು ಸನ್ನದ್ಧರಾಗಿದ್ದಾರೆ ಪ್ರದೀಪ್ ಮುಳ್ಳೂರು ಹಾಗೂ ರಜನಿ ಪ್ರದೀಪ್. ಕನ್ನಡದ ಸಿನಿಮಾ ಹಾಗೂ ಕನ್ನಡದ ಕಲಾವಿದರಿಗೆ ಆರ್ಥಿಕ ಅನುಕೂಲಗಳನ್ನು, ಅವಕಾಶಗಳನ್ನು ಒದಗಿಸುವ ಮೂಲಕ ಕನ್ನಡ ರಾಜ್ಯೋತ್ಸವ ನವೆಂಬರ್ 1ರಿಂದ ಕನ್ನಡಕ್ಕಾಗಿ ಕನ್ನಡದ ಕಲಾವಿದರಿಗೆ ಕನ್ನಡದ ಕಲಾರಸಿಕರ ಮನ ಮನೆಗಳಲ್ಲಿ ರಂಜಿಸಲು ಸಿದ್ದರಾಗುತ್ತಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ಗೆ ಮತ್ತೆ ಪ್ರಭುದೇವ
ಕನ್ನಡದ ಸಿನಿಮಾ, ನಾಟಕ, ಸಂಗೀತ, ಸಾಹಿತ್ಯ ಹಾಗೂ ಕರುನಾಡಿನ ಎಲ್ಲ ಕಲಾಪ್ರಕಾರಗಳನ್ನು ಹಳ್ಳಿಯಿಂದ ದಿಲ್ಲಿವರೆಗೆ, ದೇಶದ ಹಾಗೂ ವಿದೇಶದ ಎಲ್ಲ ಕನ್ನಡ ಪ್ರೇಮಿಗಳಿಗೆ ಕನ್ನಡದ ಕಂಪನ್ನು ಮತ್ತೆ ಪಸರಿಸಲು ಮುಂದಾಗಿದ್ದಾರೆ. ಇದರ ಮೊದಲ ಕಾರ್ಯಕ್ರಮ ನವರಾತ್ರಿ ಉತ್ಸವದ ಮೂಲಕ ಚಾಲನೆ ಕೊಡುತ್ತಿದ್ದಾರೆ.
ಕನ್ನಡದ ಆಸಕ್ತ ಕಲಾವಿದರು, ಕನ್ನಡದ ಸಿನಿಮಾ ತಂಡದವರು ಪ್ರಯೋಗ್ ಸ್ಟುಡಿಯೋ ಸಂಸ್ಥೆಯ ಮೂಲಕ ಬರುತ್ತಿರುವ ಓನ್ಲಿ ಕನ್ನಡ ಓಟಿಟಿ ಮೂಲಕ ಸದುಪಯೋಗಪಡಿಸಿಕೊಳ್ಳಬಹುದು. ನವೆಂಬರ್ ತಿಂಗಳಿಂದ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಿನಿಮಾಗಳು ಓನ್ಲಿ ಕನ್ನಡದ ಓಟಿಟಿ ಮೂಲಕ ಕನ್ನಡದ ಹಾಗೂ ವಿಶ್ವದ ಜನರಿಗೆ ತಲುಪಲು ಸಿದ್ದವಾಗಿದೆ.
ಓನ್ಲಿ ಕನ್ನಡ ಓಟಿಟಿ ಮೂಲಕ ಕನ್ನಡದ ಕಲಾವಿದರಿಗೆ ಸಾಕಷ್ಟು ಪ್ರಮಾಣದಲ್ಲಿ ಅವಕಾಶಗಳನ್ನು ರೂಪಿಸುವ ಮಹದಾಸೆ ಸಂಸ್ಥೆಯ ಮುಖ್ಯಸ್ಥರಾದ ಪ್ರದೀಪ್ ಮುಳ್ಳೂರು ಹಾಗೂ ರಜನಿ ಪ್ರದೀಪ್ ಅವರದ್ದು.