ಬೆಂಗಳೂರು: ಅಂದು ಬಾಲ್ಯದಲ್ಲಿ ಫಿಲಂಫೇರ್ ನೋಡಲು ಬೇರೆಯವರ ಪಾಸ್‌ನಲ್ಲಿ ಹೋಗಿದ್ದಾಕೆ ಇಂದು ದೊಡ್ಡ ನಟಿ. ಹಾಗಂತ ಇದ್ಯಾವುದೋ ಗಾಸಿಪ್ ಅಲ್ಲ. ಏಕೆಂದರೆ ಈ ವಿಷಯವನ್ನು ಸ್ವತಃ ಆ ನಟಿಯೇ ಹೇಳಿಕೊಂಡಿದ್ದಾರೆ. ಅಂದಹಾಗೆ, ಬಾಲ್ಯದ ತಮ್ಮ ಆ ಅನುಭವ ಹಂಚಿಕೊಂಡವರು ಬೇರಾರೂ ಅಲ್ಲ, ನಟಿ ಪೂಜಾ ಹೆಗ್ಡೆ.
ನಾನು ಚಿಕ್ಕವಳಿದ್ದಾಗ ಫಿಲಂಫೇರ್ ಪ್ರಶಸ್ತಿ ಪ್ರದಾನದ ಕಾರ್ಯಕ್ರಮ ನೋಡಲು ಉತ್ಸುಕಳಾಗಿದ್ದೆ. ಆದರೆ, ಪಾಸ್ ಸಿಕ್ಕಿರಲಿಲ್ಲ. ಬೇರೆಯವರ ಪಾಸ್‌ನಲ್ಲಿ ಹೋಗಿ ನೋಡಿದ್ದೆ ಎಂದು ತೆಲುಗು ನಟಿ, ಕನ್ನಡತಿ ಪೂಜಾ ಹೆಗ್ಡೆ ತಾವು ಫಿಲಂಫೇರ್ ಕಾರ್ಯಕ್ರಮಕ್ಕೆ ಹೋಗಲು ಪಟ್ಟ ಕಷ್ಟವನ್ನು ಬಿಚ್ಚಿಟ್ಟರು.
ಕೆಎಫ್ಎಫ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಎಂದರೆ ತುಂಬಾ ಇಷ್ಟ. ಚಿಕ್ಕವಳಿದ್ದಾಗ ಒಮ್ಮೆ ಫಿಲಂಫೇರ್ ನಡೆಯುತ್ತಿತ್ತು. ಇದನ್ನು ನೋಡಲು ನಮ್ಮ ಮನೆಯವರ ಬಳಿ ಪಾಸ್ ಇರಲಿಲ್ಲ. ಹೇಗೋ ಬೇರೆಯವ ಪಾಸ್ ಪಡೆದು ಒಂದೇ ಸೀಟಿನಲ್ಲಿ ಇಬ್ಬರು ಕುಳಿತು ಫಿಲಂಫೇರ್ ನೋಡಿದ್ದೆ. ಆದರೆ, ಇಂದು ನಾನು ಸಿನಿಮಾ ಕ್ಷೇತ್ರದಲ್ಲಿರುವುದು ಖುಷಿ ತಂದಿದೆ ಎಂದರು.