ಸಿನಿವಾಣಿ

ಅಬ್ಬಾ ಇಷ್ಟೊಂದಾ? ಈ ಯುವತಿ ಬಿಡಿಸಿದ NTR​ ಚಿತ್ರ​ ಮಾರಾಟವಾದ ಬೆಲೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

NTR : ಜೂನಿಯರ್​ ಎನ್​ಟಿಆರ್​ ಟಾಲಿವುಡ್​ನ ಸ್ಟಾರ್​ ಹೀರೋಗಳಲ್ಲಿ ಒಬ್ಬರು. ಅಷ್ಟೇ ಅಲ್ಲದೆ, ಪ್ಯಾನ್​​ ಇಂಡಿಯಾ ಸ್ಟಾರ್​ ಕೂಡ ಹೌದು. ಆರ್​ಆರ್​ಆರ್​ ಸಿನಿಮಾ ಬಳಿಕ ಅವರ ಖ್ಯಾತಿ ತುಂಬಾ ಹೆಚ್ಚಿದೆ. ಇತ್ತೀಚೆಗೆ ವಾರ್ 2 ಹೆಸರಿನ ಅವರ ಸಿನಿಮಾ ಬಿಡುಗಡೆಯಾಯಿತು. ಇದು ಬಾಲಿವುಡ್​ ಸಿನಿಮಾ. ಇದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಈ ಸಿನಿಮಾ ಸಂದರ್ಭದಲ್ಲಿ ಜೂ. NTR ವಿವಿಧ ಕಾರಣಗಳಿಗೆ ಸಿಕ್ಕಾಪಟ್ಟೆ ವೈರಲ್​ ಆಗಿದ್ದರು. ಇದೀಗ ಮತ್ತೊಮ್ಮೆ ಎನ್​ಟಿಆರ್​ ಹೆಸರು ಮುನ್ನೆಲೆಗೆ ಬಂದಿದೆ. ಸ್ಕೆಚ್ ಆರ್ಟಿಸ್ಟ್ ಚಿತ್ರಿಸಿದ NTR ಫೋಟೋವನ್ನು ಅಭಿಮಾನಿಯೊಬ್ಬರು ಭಾರಿ ಬೆಲೆ ಕೊಟ್ಟು ಖರೀದಿ ಮಾಡಿದ್ದಾರೆ.

ತೆಲುಗು ಹುಡುಗಿ ಬ್ಯೂಲಾ ರೂಬಿ ಪೆನ್ಸಿಲ್‌ಗಳಿಂದ ಸ್ಕೆಚ್ ಆರ್ಟ್ ಬಿಡಿಸುತ್ತಾರೆ. ತಾವು ಬಿಡಿಸಿದ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾತಾಣದಲ್ಲಿ ಹಂಚಿಕೊಳ್ಳುತ್ತಾರೆ ಮತ್ತು ಮಾರಾಟ ಮಾಡುತ್ತಾರೆ. ಯಾರಾದರೂ ಅವರ ರೇಖಾಚಿತ್ರಗಳನ್ನು ಇಷ್ಟಪಟ್ಟರೆ, ಅವುಗಳನ್ನು ಖರೀದಿಸುತ್ತಾರೆ. ರೂಬಿ ಅವರು ಹೆಚ್ಚಾಗಿ ಚಲನಚಿತ್ರ ನಾಯಕರು ಮತ್ತು ಸೆಲೆಬ್ರಿಟಿಗಳ ರೇಖಾಚಿತ್ರಗಳನ್ನು ಬಿಡಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ.

ಇತ್ತೀಚೆಗಷ್ಟೇ ಬ್ಯೂಲಾ ರೂಬಿ ಅವರು ಜೂ. ಎನ್​ಟಿಆರ್​ ಅವರ ಚಿತ್ರವನ್ನು ಪೆನ್ಸಿಲ್ ಸ್ಕೆಚ್​ ಮಾಡಿದ್ದರು. ಈ ಫೋಟೋ ವೈರಲ್ ಆದ ನಂತರ, ಅಮೆರಿಕದ ಎನ್​ಟಿಆರ್ ಅಭಿಮಾನಿಯೊಬ್ಬರು ಅವರಿಗೆ ಸಂದೇಶ ಕಳುಹಿಸಿ, ಆ ಚಿತ್ರವನ್ನು ಖರೀದಿ ಮಾಡಿದ್ದಾರೆ. ಈ ವಿಚಾರವನ್ನು ಬ್ಯೂಲಾ ರೂಬಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

ನಾನು ಇಲ್ಲಿಯವರೆಗೆ ಚಿತ್ರಿಸಿದ ತೆಲುಗು ನಾಯಕರ ಪೆನ್ಸಿಲ್ ಕಲೆಗಳಲ್ಲಿ, ಎನ್​ಟಿಆರ್​ ಕಲೆ ಅತಿ ಹೆಚ್ಚು ಬೆಲೆಗೆ ಮಾರಾಟವಾಗಿದೆ. ಒಬ್ಬ ವ್ಯಕ್ತಿ ನನಗೆ Instagram ನಲ್ಲಿ ಸಂದೇಶ ಕಳುಹಿಸಿ ಅದನ್ನು ಖರೀದಿಸಿದರು. ಅವರು 1650 ಡಾಲರ್‌ಗಳನ್ನು ಪಾವತಿಸಿದರು, ಅಂದರೆ ಸುಮಾರು 1 ಲಕ್ಷ 45 ಸಾವಿರ ರೂಪಾಯಿಗಳು. ಇದು ನಾನು ಚಿತ್ರಿಸಿದ ಅತ್ಯಂತ ದುಬಾರಿ ವಸ್ತು. ನನ್ನ ಪೆನ್ಸಿಲ್ ಕಲೆ ಇಷ್ಟರಮಟ್ಟಿಗೆ ಮಾರಾಟವಾಗುತ್ತದೆ ಎಂದು ನಾನೆಂದಿಗೂ ಭಾವಿಸಿರಲಿಲ್ಲ ಎಂದು ರೂಬಿ ಹೇಳಿದ್ದಾರೆ.

ರೂಬಿ ಅವರ ವಿಡಿಯೋ ನೋಡಿದ ಅಭಿಮಾನಿಗಳು, ಕಲೆಗೆ ಬೆಲೆ ಕಟ್ಟಲು ಸಾಧ್ಯವೇ? ನೀವು ಬಿಡಿಸಿದ ಎನ್​ಟಿಆರ್​ ಅವರ ಸ್ಕೆಚ್ ಅದ್ಭುತವಾಗಿದೆ. ನಿಮಗೆ ಇಷ್ಟೊಂದು ಹಣ ಸಿಕ್ಕಿದ್ದಕ್ಕೆ ನಮಗೂ ಖುಷಿಯಾಗುತ್ತಿದೆ ಎಂದು ಅಭಿಮಾನಿಗಳು ಕಾಮೆಂಟ್​ಗಳ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. (ಏಜೆನ್ಸೀಸ್​)