ಸಿನಿವಾಣಿ

ಅವರಿಗಾದ್ರೆ ಅಪ್ಪಿಕೊಂಡು ಮುತ್ತು ಕೊಡ್ತಾರೆ ಆದ್ರೆ ಅಭಿಮಾನಿಗಳಿಗೆ... ನಿತ್ಯಾ ವರ್ತನೆಗೆ ನೆಟ್ಟಿಗರ ಕಿಡಿ! Nithya Menen

Nithya Menen : ಬಹುಭಾಷ ನಟಿ ನಿತ್ಯಾ ಮೆನನ್ ಅವರು ಪ್ರಸ್ತುತ ಧನುಷ್​ ನಟನೆಯ ಇಡ್ಲಿ ಕಡೈ ಹೆಸರಿನ ಕಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಇಬ್ಬರ ತಿರುಚಿತ್ರಂಬಲಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಅಭಿನಯಕ್ಕಾಗಿ ನಿತ್ಯಾ ಅವರಿಗೆ ಅತ್ಯುತ್ತಮ ನಟಿ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಸಹ ಸಿಕ್ಕಿತು. ಇದೀಗ ಜಯಂ ರವಿ ನಟನೆಯ 'ಕಾದಲಿಕ್ಕ ನೆರಮಿಲೈ' ಚಿತ್ರದಲ್ಲಿ ನಿತ್ಯಾ ನಟಿಸಿದ್ದಾರೆ. ಜನವರಿ 14ರ ಸಂಕ್ರಾಂತಿಯಂದು ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುವ ನಿರೀಕ್ಷೆಯಿದೆ.

ಕಾದಲಿಕ್ಕ ನೇರಮಿಲೈ ಸಿನಿಮಾವನ್ನು ತಮಿಳುನಾಡು ಉಪಮುಖ್ಯಮಂತ್ರಿ ಹಾಗೂ ನಟ ಉದಯನಿಧಿ ಸ್ಟಾಲಿನ್ ನಿರ್ಮಾಣ ಮಾಡಿದ್ದು, ಚಿತ್ರವನ್ನು ಅವರ ಪತ್ನಿ ಕಿರುತಿಗ ಉದಯನಿಧಿ ನಿರ್ದೇಶಿಸಿದ್ದಾರೆ. ನಿರ್ದೇಶಕಿಯಾಗಿ ಕಿರುತಿಗ ಅವರಿಗೆ ಇದು ಮೂರನೇ ಚಿತ್ರ. ಈ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಂಕ್ರಾಂತಿ ಉಡುಗೊರೆಯಾಗಿ ಈ ಸಿನಿಮಾ ಬಿಡುಗಡೆಯಾಗಲಿದೆ.

ಬಿಡುಗಡೆ ದಿನ ಹತ್ತಿರ ಬರುತ್ತಿದ್ದಂತೆ ಸಿನಿ ತಂಡ ಪ್ರಚಾರದಲ್ಲಿ ಬಿಜಿಯಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚಿತ್ರದ ನಾಯಕಿ ನಿತ್ಯಾ ಮೆನನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ವರ್ತಿಸಿದ ರೀತಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ನಿತ್ಯಾ ಅವರು ಮಾತನಾಡಲು ವೇದಿಕೆ ಮೇಲೆ ಬಂದಾಗ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ನಿತ್ಯಾ ಅವರ ಕೈಕುಲುಕಲು ಪ್ರಯತ್ನಿಸಿದರು. ಆದರೆ, ನಿತ್ಯಾ ಕೈಕುಲಕದೇ ಏನೋ ಒಂದು ಹೇಳಿ ಅವರನ್ನು ನಿರ್ಲಕ್ಷಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ನಿತ್ಯಾ ಅವರ ನಡವಳಿಕೆಯನ್ನು ನೋಡಿ ಅನೇಕರು ಟೀಕಿಸುತ್ತಿದ್ದಾರೆ. ನಿತ್ಯಾ ಅವರು ನಡೆದುಕೊಂಡ ರೀತಿ ಸರಿಯಲ್ಲ ಎಂದು ಕಿಡಿಕಾರುತ್ತಿದ್ದಾರೆ.

ಅದೇ ಕಾರ್ಯಕ್ರಮದಲ್ಲಿ ವೇದಿಕೆಗೆ ಬರುವ ಮುಂಚೆಯೇ ನಿತ್ಯಾ ಅವರು ವರ್ತಿಸಿದ ರೀತಿ ಎಲ್ಲರಿಗೂ ಆಘಾತವನ್ನುಂಟುಮಾಡಿದೆ. ನಿರ್ದೇಶಕ ಮೈಸ್ಕಿನ್‌ ಕೆನ್ನೆಗೆ ನಿತ್ಯಾ ಮುತ್ತಿಟ್ಟರು. ಅಲ್ಲದೆ, ನಾಯಕ ಜಯಂ ರವಿ ಅವರನ್ನು ಅಪ್ಪಿಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅವರು ಮುತ್ತಿಟ್ಟಿದ್ದಲ್ಲಿ ಮತ್ತು ಅಪ್ಪಿಕೊಂಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಅಭಿಮಾನಿಯೊಬ್ಬ ಕೈಕುಲುಕಲು ಬಂದಾಗ ಅವರು ನಡೆದುಕೊಂಡ ರೀತಿ ಸರಿಯಲ್ಲ ಎಂದು ನಿತ್ಯಾ ವಿರುದ್ಧ ನೆಟ್ಟಿಗರು ಬೇಸರ ಹೊರಹಾಕುತ್ತಿದ್ದಾರೆ. ನಿತ್ಯಾ ಅವರು ತಮ್ಮ ಬೇಕಾದವರಿಗೆ ಮಾತ್ರ ಮುತ್ತಿಡುತ್ತಾರೆ ಮತ್ತು ಅಪ್ಪಿಕೊಳ್ಳುತ್ತಾರೆ. ಆದರೆ, ತಮ್ಮ ಬೆಳವಣಿಗೆಗೆ ಕಾರಣರಾದ ಅಭಿಮಾನಿಗಳನ್ನು ಟಚ್​ ಕೂಡ ಮಾಡಲ್ಲ ಎಂದು ಟೀಕಿಸುತ್ತಿದ್ದಾರೆ.

ಅಂದಹಾಗೆ ಕಾದಲಿಕ್ಕ ನೇರಮಿಲೈ ಚಿತ್ರದಲ್ಲಿ ಜಯಂ ರವಿ ಮತ್ತು ನಿತ್ಯಾ ಮೆನನ್​ ಜೊತೆಗೆ ಯೋಗಿ ಬಾಬು, ವಿನಯ್, ಲಾಲ್, ಲಕ್ಷ್ಮಿ ರಾಮಕೃಷ್ಣನ್, ವಿನೋದಿನಿ, ಗಾಯಕಿ ಮನೋ, ಟಿಜೆ ಬಾನು ಮತ್ತು ಜಾನ್ ಕೋಗನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೆಡ್ ಜೈಂಟ್ ಮೂವೀಸ್ ನಿರ್ಮಿಸಲಿರುವ ಈ ಚಿತ್ರಕ್ಕೆ ಎ.ಆರ್ ರೆಹಮಾನ್​ ಸಂಗೀತ ಸಂಯೋಜಿಸಿದ್ದಾರೆ. (ಏಜೆನ್ಸೀಸ್​)