ಸಿನಿವಾಣಿ

ಬಿಗ್​ಬಾಸ್​ ಸೀಸನ್-8ರಿಂದ ನಿರ್ಮಲಾ ಚನ್ನಪ್ಪ ಔಟ್!

Webdesk - Ravikanth

ಬೆಂಗಳೂರು: ಕನ್ನಡದ ‘ಬಿಗ್​ಬಾಸ್’ ಸೀಸನ್ 8ಕ್ಕೆ ಅದ್ದೂರಿ ಓಪನಿಂಗ್ ಸಿಕ್ಕು ಎರಡು ವಾರ ಕಳೆಯುತ್ತಿದ್ದಂತೆ, ನಿಯಮದ ಪ್ರಕಾರ ಎರಡನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದೆ. ಬಿಗ್​ಬಾಸ್ ಮನೆಯಲ್ಲಿ ಇನ್ನುಳಿದ ಸ್ಪರ್ಧಿಗಳಿಗಿಂತ ವಿಭಿನ್ನವಾಗಿಯೇ ಗುರುತಿಸಿಕೊಂಡಿದ್ದ ನಿರ್ಮಲಾ ಚನ್ನಪ್ಪ ಭಾನುವಾರ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ.

ನಿರ್ಮಲಾ ಚನ್ನಪ್ಪ ಜತೆ ಶುಭಾ ಪೂಂಜ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ಗೀತಾ ಭಾರತಿ ಭಟ್, ಚಂದ್ರಕಲಾ ಮೋಹನ್, ವಿಶ್ವನಾಥ್, ಪ್ರಶಾಂತ್ ಸಂಬರಗಿ ಎರಡನೇ ವಾರದ ಎಲಿಮಿನೇಷನ್ ಪಟ್ಟಿಯಲ್ಲಿದ್ದರು. ಆ ಪೈಕಿ ನಿರ್ಮಲಾ ಚನ್ನಪ್ಪ ಮನೆಯಿಂದ ಹೊರಬಂದಿದ್ದಾರೆ.