ಸಿನಿವಾಣಿ

ಬೆತ್ತಲೆ ಫೋಟೋ ಕೇಳಿದ ನೆಟ್ಟಿಗನಿಗೆ ನಟಿ ಕಳುಹಿಸಿದ ಫೋಟೋಗೆ ಅಭಿಮಾನಿಗಳು ಫಿದಾ!

ಹೈದರಾಬಾದ್​: ನಟಿಯರ ಜತೆ ಕೆಲ ನೆಟ್ಟಿಗರ ಅತಿರೇಕದ ವರ್ತನೆ ಬಗ್ಗೆ ಆಗಾಗ ವರದಿಯಾಗುತ್ತಲೇ ಇರುತ್ತವೆ. ಬಹುಶಃ ಸಾಮಾಜಿಕ ಜಾಲತಾಣಗಳ ಮೇಲೆ ಕಠಿಣ ನಿಯಮ ಜಾರಿಯಾಗುವವರೆಗೂ ಇದು ತಪ್ಪಿದ್ದಲ್ಲ ಅನಿಸುತ್ತದೆ. ಈ ತಿಂಗಳ ಆರಂಭದಲ್ಲಿ ನೆಟ್ಟಿಗನೊಬ್ಬ ಖ್ಯಾತ ನಟಿ ಪೂಜಾ ಹೆಗ್ಡೆ ಅವರ ಬೆತ್ತಲೆ ಫೋಟೋ ಕೇಳಿದ್ದ. ಇದೀಗ ಮತ್ತೊಬ್ಬ ನಟಿಯು ಸಹ ಅದೇ ಕಹಿ ಅನುಭವ ಎದುರಿಸಿದ್ದಾರೆ.

ಹೌದು. ನಟಿ ಶ್ರೀಮುಖಿ ಟಾಲಿವುಡ್​ನಲ್ಲೇ ಪ್ರಮುಖ ಆ್ಯಂಕರ್​ಗಳಲ್ಲಿ ಒಬ್ಬರು. ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವ ಈ ನಟಿ ಆಗಾಗ ನಿರೂಪಣೆ ಮೂಲಕವೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಶ್ರೀಮುಖಿ, ತಮ್ಮ ಅಭಿಮಾನಿಗಳಿಗೆ ಕಾಲಕಾಲಕ್ಕೆ ಮಾಹಿತಿಗಳನ್ನು ನೀಡುತ್ತಿರುತ್ತಾರೆ.

ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಲೈವ್​ ಚಾಟ್​ ನಡೆಸುವಾಗ ನೆಟ್ಟಿಗನೊಬ್ಬ ಶ್ರೀಮುಖಿ ಬಳಿ ತುಂಟತನದ ಪ್ರಶ್ನೆಯೊಂದನ್ನು ಕೇಳಿದ್ದ. ಅದಕ್ಕೆ ಶ್ರೀಮುಖಿ ಕೊಟ್ಟ ಉತ್ತರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಬೆತ್ತಲೆ ಫೋಟೋ ಕಳುಹಿಸುವಂತೆ ಕೇಳಿದ ನೆಟ್ಟಿಗನಿಗೆ ರಾಮ್​ ಗೋಪಾಲ್​ ವರ್ಮಾ ನಿರ್ದೇಶನದ ನೇಕೆಡ್​ ಚಿತ್ರದ ಪೋಸ್ಟರ್​ ಕಳುಹಿಸಿ ತಕ್ಕ ಉತ್ತರ ನೀಡಿದ್ದಾರೆ.

ಇನ್ನು ಶ್ರೀಮುಖಿ ಅವರು ಕೇವಲ ನಟಿ ಮಾತ್ರವಲ್ಲದೆ ಉದ್ಯಮಿಯು ಹೌದು. ಇತ್ತೀಚೆಗಷ್ಟೇ ಉದ್ಯಮ ಲೋಕಕ್ಕೆ ಕಾಲಿಟ್ಟ ಅವರು ಲೂಯಿ ಹೆಸರಿನ ಸೌಂದರ್ಯ ಉತ್ಪನ್ನವನ್ನು ಬಿಡುಗಡೆ ಮಾಡಿದ್ದಾರೆ. (ಏಜೆನ್ಸೀಸ್​) ಇದನ್ನೂ ಓದಿರಿ: VIDEO| ಮಗುವನ್ನು ಮಂಚದ ಕೆಳಗೆ ಎಳೆದುಕೊಂಡ ದೆವ್ವ: ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ! ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ