ಸಿನಿವಾಣಿ

ಕನ್ನಡತಿ ಜತೆಗೆ ಟಾಲಿವುಡ್​ ನಟ ನಾಗಶೌರ್ಯ ಮದುವೆ

chetannadiger

ಹೈದರಾಬಾದ್​: ತೆಲುಗು ಚಿತ್ರರಂಗದ ಮೋಸ್ಟ್​ ಎಲಿಜಿಬಲ್ ಬ್ಯಾಚಲರ್​ ಆಗಿದ್ದ ನಾಗಶೌರ್ಯ ಇದೀಗ ಹಸೆಮಣೆ ಏರುವುದಕ್ಕೆ ರೆಡಿಯಾಗಿದ್ದಾರೆ. ವಿಶೇಷವೆಂದರೆ, ಅವರನ್ನು ಕೈಹಿಡಿಯುತ್ತಿರುವುದು ಒಬ್ಬ ಕನ್ನಡತಿ. ಬೆಂಗಳೂರಿನ ಅನೂಷಾ ಶೆಟ್ಟಿ ಜತೆಗೆ ನಾಗಶೌರ್ಯ ಸಪ್ತಪದಿ ತುಳಿಯಲಿದ್ದು, ನ.20ರಂದು ಮದುವೆ ನಡೆಯಲಿದೆ.

ಈ ಕುರಿತು ಖುದ್ದು ನಾಗಶೌರ್ಯ ಅವರೇ ಹೇಳಿಕೊಂಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಆಹ್ವಾನ ಪತ್ರಿಕೆಯನ್ನು ಸಹ ಹಂಚಿಕೊಂಡಿದ್ದಾರೆ. ನಾಗಶೌರ್ಯ ಅವರ ಅಭಿಮಾನಿಗಳಷ್ಟೇ ಅಲ್ಲ, ತೆಲುಗು ಚಿತ್ರರಂಗದಲ್ಲಿ ಹಲವು ಸೆಲೆಬ್ರಿಟಿಗಳು ನಟನಿಗೆ ಶುಭಾಶಯಗಳನ್ನು ಕೋರಿದ್ದಾರೆ.

2011ರಲ್ಲಿ ಬಿಡುಗಡೆಯಾದ ‘ಕ್ರಿಕೆಟ್​ ಗರ್ಲ್ಸ್​​ ಆಂಡ್​ ಬೀರ್’ ಎಂಬ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಾಗಶೌರ್ಯ, ಇದುವರೆಗೂ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ‘ಚಲೋ’ ಎಂಬ ಚಿತ್ರಕ್ಕೆ ನಾಗಶೌರ್ಯ ನಾಯಕರಾಗಿದ್ದರು.

ಸದ್ಯ ‘ನಾರಿ ನಾರಿ ನಡುಮ ಮುರಾರಿ’ ಸೇರಿದಂತೆ ಮೂರು ಚಿತ್ರಗಳಲ್ಲಿ ನಾಗಶೌರ್ಯ ನಾಯಕನಾಗಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.