ಹೈದರಾಬಾದ್: ವಿಚ್ಛೇದನದ ಬಳಿಕ ಸಮಂತಾ ಮತ್ತು ನಾಗಚೈತನ್ಯ ಅವರು ಏನು ಮಾಡಿದರೂ, ಏನು ಮಾತಾಡಿದರೂ ಎಲ್ಲವೂ ಸುದ್ದಿಯಾಗಿತ್ತಿದೆ. ಹೌದು, ತಮ್ಮ ವಿಚ್ಛೇದನದ ಕಾರಣ, ಸಮಂತಾ ಕಳೆದ ವರ್ಷ ಅತಿ ಹೆಚ್ಚು ಸುದ್ದಿಯಲ್ಲಿದ್ದ ಸೌತ್ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು. ನಾಗಚೈತನ್ಯ ಅಂತು ಹಲವಾರು ವಿಚಾರಗಳಿಂದ ಸಿಕ್ಕಾಪಟ್ಟೆ ಟ್ರೋಲ್ಗಳಿಗೆ ತುತ್ತಾಗಿದ್ದರು. ಇನ್ನು, ಕಳೆದ ಎರಡು ದಿನಗಳಿಂದ ನಾಗಚೈತನ್ಯ ಮತ್ತು ನಟಿ ದಕ್ಷ ನಗರ್ಕರ್ ನಡುವೆ ಲವ್ವಿ-ಡವ್ವಿ, ಡೇಟಿಂಗ್ ಎಂಬ ಸುದ್ದಿಗಳು ಕೂಡ ಕೇಳಿಬಂದವು. ಜೊತೆಗೆ, ನಾಗಚೈತನ್ಯ ಮತ್ತು ದಕ್ಷ ನಗರ್ಕರ್ ಅವರ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ, ನಟನ ಮತ್ತೊಂದು ವಿಡಿಯೋ ಇದೀಗ ನೆನ್ನೆ ಇಂದ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಸಖತ್ ರಂಜಿಸುತ್ತಿದೆ.
ಹೌದು, ಕಳೆದ ಎರಡು ದಿನಗಳ ಹಿಂದೆ 'ಬಂಗಾರ್ರಾಜು' ಸಿನಿಮಾ ಪ್ರಚಾರದ ವೇದಿಕೆ ಮೇಲೆ ಸೆರೆಹಿಡಿದಿರುವ ವಿಡಿಯೋದಲ್ಲಿ ನಾಗಚೈತನ್ಯ ಮತ್ತು ದಕ್ಷ ಅವರು ವೇದಿಕೆಯ ಮೇಲೆ ಇದ್ದಷ್ಟು ಸಮಯ ಪೂರ್ತಿ ಒಬ್ಬರನ್ನು ಮತ್ತೊಬ್ಬರು ಗಮನಿಸುತ್ತಲೇ, ನೋಡುತ್ತಲೇ ಇದ್ದರು. ಜೊತೆಗೆ, ಒಂದು ಸಮಯದಲ್ಲಿ ನಟಿ ದಕ್ಷ, ನಾಗಚೈತನ್ಯ ಅವರನ್ನು ಕಂಡು ಸ್ಮೈಲ್ ಮಾಡುತ್ತಾರೆ. ನಟಿಯ ಆ ಸುಂದರ ನಗುವನ್ನು ಕಂಡ ನಾಗಚೈತನ್ಯ ನಾಚಿ ನೀರಾಗುತ್ತಾರೆ. ಈ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡಿ, ನಟ ನಾಗಚೈತನ್ಯ ವಿಚ್ಛೇದನವಾದ 3 ತಿಂಗಳಿಗೆ ಹೊಸ ಪ್ರೇಮಾಯಣ ಆರಂಭಿಸಿದ್ದಾರೆ ಎಂಬ ಮಾತುಗಳಿಗೆ ಕಾರಣವಾಯಿತು.
ಇದೀಗ, ತೆಲುಗಿನ ಮನರಂಜನಾ ಚಾನೆಲ್ವೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಗಚೈತನ್ಯ ಅವರು 'Dont Marry, Be Happy' ಎಂಬ ಅವರ ತಂದೆ ನಾಗಾರ್ಜುನ ಅವರ 'ಮನ್ಮಧುಡು' ಚಿತ್ರದ ಹಾಡನ್ನು ಹಾಡಿದ್ದಾರೆ. ಇದೀಗ, ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರಿಂದ, 'ನಾಗಚೈತನ್ಯ ಅವರು ವಿಚ್ಛೇದನದ ಬಳಿಕ ಮತ್ತೆ ಮದುವೆಯಾಗ ಬಾರದು ಅಂತ ನಿರ್ಧರಿಸಿ, ಜೊತೆಗೆ ವಿಚ್ಛೇದನದ ಬಳಿಕ ದಿಲ್ ಖುಷ್ ಆಗಿದ್ದಾರೆ ಅನಿಸುತ್ತೆ. ಅದಿಕ್ಕೆ, ಈ ಹಾಡು ಹಾಡಿದ್ದಾರೆ ನಟ' ಅಂತ ನೆಟ್ಟಿಗರು ಭಾವಿಸ ತೊಡಗಿದ್ದಾರೆ. ವಿಡಿಯೋದಲ್ಲಿ ನಾಗಾಚೈತನ್ಯ ಅವರು 'Dont Marry, Be Happy' ಹಾಡನ್ನು ಹಾಡಿರುವ ಶೈಲಿ ಕೂಡ ಸದ್ಯ ಅವರ ಅಭಿಮಾನಿಗಳ ಗಮನ ಸೆಳೆಯುತ್ತಿದೆ.