ಸಿನಿವಾಣಿ

ಮೃನಾಲ್​ ಠಾಕೂರ್​ ಹಳೇ ಫೋಟೋ ವೈರಲ್​! ಇವರೇನಾ ಸೀತಾಮಹಾಲಕ್ಷ್ಮೀ ಎನ್ನುತ್ತಿರುವ ನೆಟ್ಟಿಗರು

ಮುಂಬೈ: ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್​ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸೀತಾ ರಾಮಂ ಸಿನಿಮಾ ಯಶಸ್ಸಿನ ಬಳಿಕ ಮೃನಾಲ್​ ಅವರ ಅದೃಷ್ಟವೇ ಬದಲಾಗಿದ್ದು, ನಾನಿ, ವಿಜಯ್​ ದೇವರಕೊಂಡ ಸೇರಿದಂತೆ ಸ್ಟಾರ್​ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಒದಗಿ ಬರುತ್ತಿವೆ.

ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಮೃನಾಲ್​ ಮಿಂಚಿ ಹರಿಸಿದರೂ ನಿಜ ಜೀವನದಲ್ಲಿ ಮೃನಾಲ್​ ಸಿಕ್ಕಾಪಟ್ಟೆ ಹಾಟ್​ ಎಂಬುದು ಅವರ ಇನ್​ಸ್ಟಾಗ್ರಾಂ ಪೇಜ್​ ನೋಡಿದರೆ ಗೊತ್ತಾಗುತ್ತದೆ. ಸೀತಾ ಮಹಾಲಕ್ಷ್ಮೀಯನ್ನಾಗಿ ನೋಡಿದ ಅವರನ್ನು ಹಾಟ್ ಅವತಾರದಲ್ಲಿ ಕಂಡು ಅನೇಕರು ಹುಬ್ಬೇರಿಸಿದ್ದಾರೆ. ಅವರ ಹಾಟ್​ ಅವತಾರಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್​ ಆಗುತ್ತಲೇ ಇರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿರುವ ಮೃನಾಲ್​ ಆಗಾಗ ಹಾಟ್​ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಡುತ್ತಲೇ ಇರುತ್ತಾರೆ.

ಇದೀಗ ಮೃನಾಲ್​ ಅವರ ಹಳೆಯ ಫೋಟೋವೊಂದು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಬಿಳಿ ಬಣ್ಣದ ದಿರಿಸಿನಲ್ಲಿ ಆ್ಯಪಲ್​ ಫೋನ್​ ಹಿಡಿದು ಕ್ಯಾಮೆರಾಗೆ ಪೋಸ್​ ನೀಡುತ್ತಿರುವ ದೃಶ್ಯವಿದೆ. ಚಿಕ್ಕ ವಯಸ್ಸಿನ ಫೋಟೋ ಆಗಿದೆ. ಸಪೂರ ದೇಹ ಮತ್ತು ಮೇಕಪ್​ ಇಲ್ಲದ ಮುಖದೊಂದಿಗೆ ಕಿರುನಗೆ ಬೀರಿದ್ದಾರೆ. ಈ ಫೋಟೋ ನೋಡಿದವರು ಇವರೇನಾ ಸೀತಾ ಮಹಾಲಕ್ಷ್ಮೀ ಎಂದು ಹುಬ್ಬೇರಿಸುತ್ತಿದ್ದಾರೆ.

ಫಿಲ್ಮಿಫ್ರೈಡೇ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಈ ಫೋಟೋ ಜೊತೆಗೆ ಈಗಿನ ಗ್ಲಾಮರಸ್​ ಫೋಟೋ ಸೇರಿಸಿ ಪೋಸ್ಟ್​ ಮಾಡಲಾಗಿದೆ. ಫೋಟೋಗೆ 15 ಸಾವಿರಕ್ಕೂ ಅಧಿಕ ಲೈಕ್ಸ್​ ಬಂದಿದ್ದು, ತರಹೇವಾರಿ ಕಾಮೆಂಟ್​ಗಳು ಬಂದಿವೆ. (ಏಜೆನ್ಸೀಸ್​)