ಮುಂಬೈ: ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಾಲಿವುಡ್ಗಿಂತ ಬೇರೆ ಭಾಷೆಗಳಲ್ಲೇ ಭಾರಿ ಆಫರ್ಗಳು ಬರುತ್ತಿವೆ. ಸ್ಟಾರ್ ನಟಿಯರ ಸಾಲಿಗೆ ಸೇರಿರುವ ಮೃನಾಲ್, ಇದೀಗ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ.
ಮೃನಾಲ್ ಠಾಕೂರ್ ಅವರು ಲವ್ ಸೋನಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಸಿನಿಮಾ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು. ಆದರೆ, ಮೃನಾಲ್ ಮಾತ್ರ ಹೆಸರು ಮಾಡಲಿಲ್ಲ. ಬಾಲಿವುಡ್ನಲ್ಲೂ ಅವಕಾಶಗಳು ಸಿಗಲಿಲ್ಲ. ಇಂತಹ ಸಂದರ್ಭದಲ್ಲಿ ಸೀತಾರಾಮಂ ಮತ್ತು ಹಾಯ್ ನಾನ್ನಾ ಸಿನಿಮಾಗಳು ಮೃನಾಲ್ಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ. ಹೀಗಾಗಿ ಈ ಸಿನಿಮಾಗಳ ಮೇಲೆ ಮೃನಾಲ್ಗೆ ತುಂಬಾ ಪ್ರೀತಿ ಇದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಮೃನಾಲ್, ತನ್ನನ್ನು ಆಯ್ಕೆ ಮಾಡುವಂತೆ ಬಾಲಿವುಡ್‌ನ ನಿರ್ಮಾಪಕರಿಗೆ ಹೇಳಿ ಹೇಳಿ ಸುಸ್ತಾಗಿದೆ. ಬಾಲಿವುಡ್ನಲ್ಲೂ ನನಗೆ ಅವಕಾಶಗಳು ಬರುತ್ತಿವೆ. ಆದರೆ, ಸೀತಾರಾಮ ಚಿತ್ರದ ಸೀತೆ ಮತ್ತು ಹಾಯ್ ನಾನ್ನಾ ಸಿನಿಮಾದ ಯಷ್ಣ ಅಥವಾ ಸೋನಿಯಾ ರೀತಿಯ ಪಾತ್ರಗಳು ಸಿಗುತ್ತಿಲ್ಲ. ಉತ್ತಮ ಪಾತ್ರಗಳು ಬೇಕಿದೆ ಎಂದಿದ್ದಾರೆ.
ಇದೇ ಸಮಯದಲ್ಲಿ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ಮೃನಾಲ್, ಆ ವ್ಯಕ್ತಿ ನನ್ನನ್ನು ಮಾದಕ ಪಾತ್ರದಲ್ಲಿ ನೋಡುವುದಿಲ್ಲವಂತೆ ಅಥವಾ ನಾನು ಸಾಕಷ್ಟು ಸೆಕ್ಸಿಯಾಗಿ ಕಾಣುವುದಿಲ್ಲ ಎಂದು ಹೇಳಿದ್ದರಿಂದ ನಿರ್ಮಾಪಕರೊಬ್ಬರು ನನಗೆ ಅವಕಾಶ ನೀಡಲಿಲ್ಲ. ನನ್ನ ಕಾಲ್ಬೆರಳಿನ ಸತ್ತ ಚರ್ಮವೂ ಕೂಡ ಸೆಕ್ಸಿಯಾಗಿದೆ ಆದರೆ, ನಿರಂತರವಾಗಿ ಆ ಪಾತ್ರಗಳಿಗೆ ನಾನು ಒಡ್ಡಿಕೊಳ್ಳುವುದಿಲ್ಲ. ನಿರ್ದೇಶಕರು ನನ್ನನ್ನು ವಿಭಿನ್ನ ಪಾತ್ರಗಳಲ್ಲಿ ರೂಪಿಸಲು ತಟಸ್ಥವಾಗಿರಲು ಬಯಸುವುದಾಗಿ ಮೃನಾಲ್ ಹೇಳಿದ್ದಾರೆ.
ನಾನು ಜೇಡಿಮಣ್ಣಾಗಲು ಬಯಸುತ್ತೇನೆ. ಏಕೆಂದರೆ, ಜೇಡಿಮಣ್ಣನ್ನು ವಿವಿಧ ಭಾಗಗಳಾಗಿ ರೂಪಿಸಬಹುದು. ಮಾದಕತೆ ಎಂಬುದು ಒಬ್ಬರ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ನನಗೆ ಒಳ್ಳೆಯ ಸಂಭಾಷಣೆಯು ಸೆಕ್ಸಿಯಾಗಿದೆ ಎಂದ ಮೃನಾಲ್, ಮೊದಲ ಬಾರಿಗೆ ಹಾಡೊಂದರಲ್ಲಿ ನಟಿಸಿದಾಗ, ತೂಕ ಇಳಿಸಿಕೊಳ್ಳಲು ಜನರು ಸಲಹೆ ನೀಡಿದ್ದನ್ನು ಮೃನಾಲ್ ನೆನೆದರು. ಅಲ್ಲದೆ, ಬಿಟ್ಟಿ ಸಲಹೆಗಳಿಗೆ ಆ ವೇಳೆ ಖಡಕ್ ಆಗಿಯೇ ತಿರುಗೇಟು ನೀಡಿದ್ದ ಮೃನಾಲ್, ನನಗೆ ದಪ್ಪ ತೊಡೆಗಳಿವೆ ಮತ್ತು ನಾನು ಅವುಗಳನ್ನು ಹೊಂದಿದ್ದೇನೆ. ನನಗೆ ಅನಾನುಕೂಲವಾಗಿಲ್ಲದಿದ್ದರೆ, ನೀವು ಯಾಕೆ ಹಾಗೆ ಫೀಲ್ ಮಾಡಿಕೊಳ್ಳುತ್ತೀರಿ ಎಂದಿದ್ದರಂತೆ.
ಮತ್ತೊಂದು ಸಂದರ್ಶನದಲ್ಲಿ, ಮೃನಾಲ್ ಅವರು ಜಿಮ್‌ಗೆ ಹೋದಾಗ ಯಾರೋ ಅವರಿಗೆ ಸಲಹೆ ನೀಡಿದ್ದನ್ನು ನೆನೆದರು. ಇವು ನಿಮ್ಮ ಸಮಸ್ಯೆಯ ಪ್ರದೇಶಗಳಾಗಿವೆ ಎಂದು ದೇಹದ ಬಗ್ಗೆ ಕಾಮೆಂಟ್ ಮಾಡಿದರಂತೆ. ಆದರೆ, ಆ ಕಾಮೆಂಟ್‌ಗೆ ಬಾಸ್ ಮಹಿಳೆಯಂತೆ ಪ್ರತಿಕ್ರಿಯಿಸಿದ ಮೃನಾಲ್, ಇಲ್ಲ ಇದು ನನ್ನ ಶಕ್ತಿ ಎಂದಿದ್ದರಂತೆ.
ಸಿನಿಮಾ ವಿಚಾರಕ್ಕೆ ಬಂದರೆ, ಮೃನಾಲ್ ಠಾಕೂರ್ ಅವರು ವಿಜಯ್ ದೇವರ ನಟನೆಯ ಫ್ಯಾಮಿಲಿ ಸ್ಟಾರ್ ಸಿನಿಮಾದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)