ಸಿನಿವಾಣಿ

ಏಕಕಾಲದಲ್ಲಿ ಎರಡು ರಿಮೇಕ್​ ಸಿನಿಮಾ ಶೂಟಿಂಗ್​ನಲ್ಲಿ ಮೆಗಾಸ್ಟಾರ್ ಚಿರಂಜೀವಿ

manjunathktgns

ಆಚಾರ್ಯ ಸಿನಿಮಾದ ಜತೆಯಲ್ಲಿ ಎರಡು ಹೊಸ ಪ್ರಾಜೆಕ್ಟ್​ಗಳಲ್ಲಿ ಟಾಲಿವುಡ್​ ಮೆಗಾಸ್ಟಾರ್ ಚಿರಂಜೀವಿ ತೊಡಗಿಸಿಕೊಂಡಿದ್ದಾರೆ. ಈಗಿನ್ನು ಆ ಎರಡು ಸಿನಿಮಾಗಳು ಸ್ಕ್ರಿಪ್ಟಿಂಗ್​ ಹಂತದಲ್ಲಿದ್ದು, ವಿಶೇಷ ಏನೆಂದರೆ, ಏಕಕಾಲದಲ್ಲಿಯೇ ಆ ಎರಡು ಸಿನಿಮಾಗಳ ಶೂಟಿಂಗ್​ನಲ್ಲಿ ಚಿರು ಭಾಗವಹಿಸಲಿದ್ದಾರೆ.

ಮಲಯಾಳಂ ರಿಮೇಕ್​ ಲೂಸಿಫರ್​ ಚಿತ್ರದ ತೆಲುಗು ರಿಮೇಕ್​ನಲ್ಲಿ ಚಿರು ನಟಿಸಲಿದ್ದಾರೆ. ಇದರ ಜತೆಗೆ ತಮಿಳಿನ ವೇದಾಲಂ ಸಿನಿಮಾ ರಿಮೇಕ್​ಗೂ ಚಿರು ಸಹಿ ಹಾಕಿದ್ದು, ಯುಗಾದಿ ಸಮಯದಲ್ಲಿ ಈ ಎರಡು ಸಿನಿಮಾಗಳ ಶೂಟಿಂಗ್​ನಲ್ಲಿ ಭಾಗವಹಿಸಲಿದ್ದಾರೆ.

ವಿವಿ ವಿನಾಯಕ್​ ಲೂಸಿಫರ್​ ರಿಮೇಕ್​ಗೆ ನಿರ್ದೇಶನದ ಜವಾಬ್ದಾರಿ ಹೊತ್ತರೆ, ಮೆಹೆರ್​ ರಮೇಶ್​ ವೇದಾಲಂ ಚಿತ್ರವನ್ನು ತೆಲುಗಿಗೆ ತರುತ್ತಿದ್ದಾರೆ. ಸದ್ಯ ಕೊರಟಾಲ ಶಿವ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆಚಾರ್ಯ ಚಿತ್ರದ ಕೆಲಸಗಳಲ್ಲಿ ಚಿರು ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್​)