ಮುಂಬೈ: ಈ ವರ್ಷ ಅಕ್ಷಯ್ ಕುಮಾರ್ ಅಭಿನಯದ ನಾಲ್ಕು ಚಿತ್ರಗಳು ಸೋತಿವೆ. 'ಬಚ್ಚನ್ ಪಾಂಡೆ', 'ಪೃಥ್ವಿರಾಜ್', 'ರಕ್ಷಾ ಬಂಧನ್' ಮತ್ತು 'ರಾಮ್ ಸೇತು' ಚಿತ್ರಗಳು ಬಿಡುಗಡೆಯಾಗಿ ಸೋತಿವೆ. ಆದರೆ, ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ಅವರಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಅವರು ಹೊಸಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಲೇ ಇದ್ದಾರೆ.
ಅಕ್ಷಯ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಒಪ್ಪಿಕೊಂಡ ಚಿತ್ರಗಳ ಪೈಕಿ 'ಬಡೆ ಮಿಯಾ ಚೋಟೇ ಮಿಯಾ' ಚಿತ್ರವೂ ಒಂದು. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಟೈಗರ್ ಶ್ರಾಫ್ ಜತೆಗೆ ನಟಿಸುತ್ತಿದ್ದಾರೆ. ಇದೊಂದು ಹೆವಿ ವೈಯ್ಟ್ ಆಕ್ಷನ್ ಚಿತ್ರವಾಗಲಿದ್ದು, ಅಂತಾರಾಷ್ಟ್ರೀಯ ಸಾಹಸ ಕಲಾವಿದರ ತಂಡವೊಂದು ಈ ಚಿತ್ರಕ್ಕೆ ಕೆಲಸ ಮಾಡಲಿದೆ.
'ಬಡೆ ಮಿಯಾ ಚೋಟೇ ಮಿಯಾ' ಚಿತ್ರದ ಚಿತ್ರೀಕರಣ 2023ರ ಜನವರಿಯಲ್ಲಿ ಪ್ರಾರಂಭವಾಗಲಿದ್ದು, ಈ ಚಿತ್ರಕ್ಕೆ ಇದೀಗ ನಾಯಕಿಯಾಗಿ ಮಾನುಷಿ ಚಿಲ್ಲರ್ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಮೂವರು ನಾಯಕಿಯರು ಇದ್ದಾರಂತೆ. ಅದರಲ್ಲಿ ಸದ್ಯ ಮಾನುಷ್ಇ ಚಿಲ್ಲರ್ ಮಾತ್ರ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಇನ್ನೂ ಇಬ್ಬರು ನಾಯಕಿಯರ ಆಯ್ಕೆ ಇನ್ನಷ್ಟೇ ಆಗಬೇಕಿದೆ.
ಈ ಹಿಂದೆ, 'ಪೃಥ್ವಿರಾಜ್' ಚಿತ್ರದಲ್ಲಿ ಮಾನುಷಿ, ಅಕ್ಷಯ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಹಾಗಾಗಿ, ಈ ಬಾರಿ ಮಾನುಷಿ ನಾಯಕಿಯಾಗುತ್ತಿರುವುದು ಅಕ್ಷಯ್ಗಾ ಅಥವಾ ಟೈಗರ್ಗಾ? ಎಂಬ ಪ್ರಶ್ನೆ ಕೇಳಿ ಬರುತ್ತಿದ್ದು, ಇದಕ್ಕೆ ಉತ್ತರ ಇನ್ನಷ್ಟೇ ಸಿಗಬೇಕಿದೆ.
ಅಂದಹಾಗೆ, 90ರ ದಶಕದಲ್ಲಿ ಬಾಲಿವುಡ್ನಲ್ಲಿ 'ಅಮಿತಾಭ್ ಬಚ್ಚನ್ ಮತ್ತು ಗೋವಿಂದ ಅಭಿನಯದಲ್ಲಿ 'ಬಡೆ ಮಿಯಾ ಚೋಟೆ ಮಿಯಾ' ಎಂಬ ಚಿತ್ರ ನಿರ್ಮಾಣವಾಗಿದ್ದು, ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಅದೇ ಹೆಸರಿನ ಇನ್ನೊಂದು ಚಿತ್ರ ಇದಾಗಿದ್ದು, ಈ ಚಿತ್ರವನ್ನು ಅಬ್ಬಾಸ್ ಅಲಿ ಜಫರ್ ನಿರ್ದೇಶನ ಮಾಡುತ್ತಿದ್ದಾರೆ.