ಸಿನಿವಾಣಿ

ಮಾರ್ಚ್​ 10ಕ್ಕೆ ಬಿಡುಗಡೆಯಾಗಲಿದೆ ಸೈನ್ಸ್​ ಫಿಕ್ಷನ್​ ಚಿತ್ರ 'ಮಂಡಲ'

ಬೆಂಗಳೂರು: ಕನ್ನಡದಲ್ಲಿ ಸೈನ್ಸ್​ ಫಿಕ್ಷನ್​ ಚಿತ್ರಗಳ ಸಂಖ್ಯೆ ಬಹಳ ಕಡಿಮೆ ಎಂದೇ ಹೇಳಬಹುದು. ಆಗೊಂದು ಈಗೊಂದು ಚಿತ್ರ ಬಿಡುಗಡೆಯಾಗುವುದು ಬಿಟ್ಟರೆ, ಮಿಕ್ಕಂತೆ ಕನ್ನಡದಲ್ಲಿ ಸೈನ್ಸ್​ ಫಿಕ್ಷನ್​ ಚಿತ್ರಗಳ ದೊಡ್ಡ ಕೊರತೆ ಇದೆ. ಈಗ ಅಜಯ್​ ಸರ್ಪೇಷ್ಕರ್​ ಎನ್ನುವವರು 'ಮಂಡಲ' ಎಂಬ ಸೈನ್ಸ್​ ಫಿಕ್ಷನ್​ ಚಿತ್ರವನ್ನು ರೆಡಿ ಮಾಡಿಟ್ಟುಕೊಂಡು, ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ.

ಮೂಲತಃ ಸಾಫ್ಟ್​ವೇರ್​ ಉದ್ಯೋಗಿಯಾಗಿದ್ದ ಅಜಯ್​ ಸರ್ಪೇಷ್ಕರ್, ಕೆಲಸಕ್ಕೆ ಗುಡ್​ಬೈ ಹೇಳಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

ತಮ್ಮ ಮೊದಲ ಚಿತ್ರದಲ್ಲೇ ಪ್ರತಿಭಾವಂತರ ದಂಡನ್ನೇ ಅವರು ಕಲೆಹಾಕಿದ್ದಾರೆ. ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು, ಕಿರಣ್ ಶ್ರೀನಿವಾಸ್​, ಸುಧಾ ಬೆಳವಾಡಿ, ನೀನಾಸಂ ಅಶ್ವಥ್, ಮನ್ ದೀಪ್ ರಾಯ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

2018ರಲ್ಲೇ ‘ಮಂಡಲ’ ಚಿತ್ರದ ಚಿತ್ರೀಕರಣ ಮುಗಿದಿತ್ತು. ಸೈನ್ಸ್ ಫಿಕ್ಷನ್ ಚಿತ್ರವಾದ್ದರಿಂದ ಗ್ರಾಫಿಕ್​​ ಕೆಲಸ ಬಹಳ ಇದ್ದ ಕಾರಣ, ಚಿತ್ರ ವಿಳಂಬವಾಗಿ ಮಾರ್ಚ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

'ಮಂಡಲ' ಚಿತ್ರವನ್ನು ಅಜಯ್​ ಅವರೇ ನಿರ್ಮಿಸಿದ್ದು, ಚಿತ್ರಕ್ಕೆ ಜೆಸ್ಸಿ ಕ್ಲಿಂಟನ್ ಸಂಗೀತ, ಮನೋಹರ್​ ಜೋಷಿ ಛಾಯಾಗ್ರಹಣವಿದೆ.