More

    ಮಾರ್ಚ್​ 18ರಂದು ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಅವರಿಂದ ಸುವರ್ಣ ಸಂಜೆ

    ಬೆಂಗಳೂರು: ಕಳೆದ 20 ವರ್ಷಗಳಿಂದ ದಕ್ಷಿಣ ಭಾರತದ ಜನಪ್ರಿಯ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿರುವ ಚಿನ್ಮಯಿ ಶ್ರೀಪಾದ, ರೇಡಿಯೋ ಜಾಕಿಯಾಗಿ, ಡಬ್ಬಿಂಗ್​ ಕಲಾವಿದೆಯಾಗಿ, ನಿರೂಪಕಿಯಾಗಿಯೂ ಹೆಸರು ಮಾಡಿದ್ದಾರೆ. ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷಗಳಾದ ಹಿನ್ನೆಲೆಯಲ್ಲಿ ಸಂಗೀತ ಸಂಜೆಯನ್ನು ಮಾರ್ಚ್​ 18ರಂದು ನಗರದ ಚೌಡಯ್ಯ ಮೆಮೋರಿಯಲ್​ ಹಾಲ್​ನಲ್ಲಿ ಆಯೋಜಿಸಲಾಗಿದೆ.

    ಇದನ್ನೂ ಓದಿ: ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ

    2002ರಲ್ಲಿ ಬಿಡುಗಡೆಯಾದ ‘ಕಣ್ಣತ್ತಿಲ್​ ಮುತ್ತಮಿಟ್ಟಾಲ್​’ ‘ಒರು ದೈವಂ ತಂದ ಪೂವೆ …’ ಹಾಡಿನಿಂದ ಜನಪ್ರಿಯರಾದ ಚಿನ್ಮಯಿ, ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯ ಚಿತ್ರಗಳಿಗೆ ನೂರಾರು ಹಾಡುಗಳನ್ನು ಹಾಡಿದ್ದಾರೆ. ‘ಹನಿಹನಿ’ ಚಿತ್ರದ ‘ಬೇಡ ಬೇಡ’ ಎಂಬ ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿನ್ಮಯಿ, ನಂತರದ ದಿನಗಳಲ್ಲಿ ‘ಮಸ್ತ್ ಮಜಾ ಮಾಡಿ’ ಚಿತ್ರದ ‘ಚೋರಿ ಚೋರಿ’, ‘ಗನ್​’ ಚಿತ್ರದ ‘ತಾಜ ತಾಜ ಕನಸುಗಳು’, ‘ವಿಕ್ರಾಂತ್​ ರೋಣ’ ಚಿತ್ರದ ‘ಹೇ ಫಕೀರಾ’, ‘ದಿಯಾ’ ಚಿತ್ರದ ‘ಸೌಲ್​ ಆಫ್​ ದಿಯಾ’ ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾರೆ.

    ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ 20 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಾಫ್ಟ್​ ಲಿಂಕ್ಸ್​ ಸಂಸ್ಥೆಯಿಂದ ‘ಸುವರ್ಣ ಸಂಜೆ’ ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಚಿನ್ಮಯಿ ಶ್ರೀಪಾದ ಅವರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ. ಅಂದು ಕನ್ನಡದ ಹಲವು ಜನಪ್ರಿಯ ಹಾಡುಗಳನ್ನು ಹಾಡಲಾಗುವುದು. ಚಿನ್ಮಯಿ ಶ್ರೀಪಾದ ಸಹ ಈ ಸಂದರ್ಭದಲ್ಲಿ ತಾವು ಹಾಡಿರುವ ಕೆಲವು ಜನಪ್ರಿಯ ಹಾಡುಗಳನ್ನು ಲೈವ್​ ಆಗಿ ಹಾಡಲಿದ್ದಾರೆ. ಅವರ ಜತೆಗೆ ಅಜಯ್​ ಕೃಷ್ಣ ಸೇರಿದಂತೆ ಹಲವು ಜನಪ್ರಿಯ ಗಾಯಕ, ಗಾಯಕಿಯರು ಧ್ವನಿಗೂಡಿಸಲಿದ್ದಾರೆ. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಲಿದ್ದಾರೆ.

    ಇದನ್ನೂ ಓದಿ: ನನಸಾಯಿತು ಪಾವನಾ ಕನಸು; 10 ವರ್ಷಗಳಿಂದ ಕಾಯುತ್ತಿದ್ದರಂತೆ ಗೌಳಿ ಚಿತ್ರದ ಗಿರಿಜಾ

    ಸಾಫ್ಟ್​ ಲಿಂಕ್ಸ್​ ಸಂಸ್ಥೆಯ ಸುರೇಶ್​ ಬಾಬು ಕಳೆದ ಕೆಲವು ವರ್ಷಗಳಿಂದ ಹಲವು ಸಂಗೀತ ಸಂಜೆಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಈಗ ಅವರು ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಅವರ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ‘ಸುವರ್ಣ ಸಂಜೆ’ ಕಾರ್ಯಕ್ರಮಕ್ಕೆ 500 ರೂ. ಹಾಗೂ 750 ರೂ.ಗಳ ಟಿಕೆಟ್​ ನಿಗದಿಪಡಿಸಲಾಗಿದ್ದು, ಈ ಸಂಗೀತ ಸಂಜೆಯಿಂದ ಬರುವ ಹಣದ ಒಂದು ಭಾಗವನ್ನು, ಕ್ಯಾನ್ಸರ್​ನಿಂದ ಬಳಲುತ್ತಿರುವ ಹಿರಿಯ ಕಲಾವಿದೆ ಶೈಲಶ್ರೀ ಸುದರ್ಶನ್​ ಅವರ ಚಿಕಿತ್ಸೆಗೆ ಭರಿಸಲಾಗುವುದು.

    ಕಾಂತಾರ ಖ್ಯಾತಿಯ ರಿಷಭ್​ ಶೆಟ್ಟಿಗೆ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts