More

    ನನಸಾಯಿತು ಪಾವನಾ ಕನಸು; 10 ವರ್ಷಗಳಿಂದ ಕಾಯುತ್ತಿದ್ದರಂತೆ ಗೌಳಿ ಚಿತ್ರದ ಗಿರಿಜಾ

    ಬೆಂಗಳೂರು: ‘ಗೊಂಬೆಗಳ ಲವ್’ ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದ ನಟಿ ಪಾವನಾ ಗೌಡ. ಇದೀಗ ಚಿತ್ರರಂಗದಲ್ಲಿ ಹತ್ತು ವರ್ಷ ಪೂರೈಸಿದ್ದಾರೆ, ‘ಜ್ಯಾಕ್ಸನ್’, ‘ಆಟಗಾರ’, ‘ರುದ್ರಿ’, ‘ಕಲಿವೀರ’, ‘ಕನ್ನಡಿಗ’, ‘ತೂತು ಮಡಿಕೆ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿರುವ ‘ಗೌಳಿ’ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರದಲ್ಲಿ ಪಾವನಾ, ಗಿರಿಜಾ ಎಂಬ ಗೌಳಿ ಜನಾಂಗದ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ.

    ‘ಮೊದಲ ಸಿನಿಮಾ ಮಾಡಿದಾಗ ಕಂಡ ಕನಸು, ಹತ್ತು ವರ್ಷಗಳ ಬಳಿಕ ಈಗ ನನಸಾಗಿದೆ. ನನ್ನ ಸಿನಿಮಾ ನೋಡುವಾಗ ನಾನೂ ಕಿರುಚಬೇಕು, ಶಿಳ್ಳೆ ಹೊಡಿಬೇಕು, ಎಂಜಾಯ್ ಮಾಡಬೇಕೆಂಬ ಆಸೆ ಇತ್ತು. ಇವತ್ತು ಅದನ್ನು ಮಾಡಿದೆ. ಮಾಸ್ ಸಿನಿಮಾಗಳನ್ನು ಗಂಡು ಮಕ್ಕಳಷ್ಟೇ ಅಲ್ಲ, ಹೆಣ್ಣು ಮಕ್ಕಳೂ ಎಂಜಾಯ್ ಮಾಡುತ್ತೇವೆ. ಮಾಸ್ ವಿಷಯಗಳ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್ ಚೆನ್ನಾಗಿ ಮಿಶ್ರಣವಾಗಿದೆ. ಸಿನಿಮಾ ಗುಣಮಟ್ಟ, ಕಥೆ ಎರಡೂ ಚೆನ್ನಾಗಿದೆ’ ಎಂದು ಟ್ರೇಲರ್ ಬಿಡುಗಡೆಯಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ ಪಾವನಾ.

    ಅವರ ಪ್ರಕಾರ ‘ಗೌಳಿ’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜತೆ ನಿರ್ದೇಶಕ, ಛಾಯಾಗ್ರಾಹಕ, ಸಂಗೀತ ನಿರ್ದೇಶಕ, ಸಂಕಲನಕಾರ, ಪ್ರತಿ ಪಾತ್ರಧಾರಿಯೂ ಹೀರೋಗಳಂತೆ. ಗಿರಿಜಾ ಪಾತ್ರವನ್ನು ಜೀವನಪೂರ್ತಿ ನೆನಪಿನಲ್ಲಿ ಇಟ್ಟುಕೊಳ್ಳುವುದಾಗಿ ಹೇಳುವ ಪಾವನಾ, ‘ಈ ಸಿನಿಮಾ ಮಾಡಿದ ಹೆಮ್ಮೆಯಿದೆ. ನಾನು ಸಿನಿಮಾ ರಿಲೀಸ್​ಗೂ ಮುನ್ನವೇ ಹಬ್ಬದ ಮೂಡ್​ನಲ್ಲಿದ್ದೇನೆ. ಇಷ್ಟು ವರ್ಷಗಳ ಜರ್ನಿ ಮಾಡಿದ್ದೇ ‘ಗೌಳಿ’ಗಾಗಿ ಅನ್ನಿಸುವಂತಿದೆ, ಎನ್ನುತ್ತಾರೆ. ಶ್ರೀನಗರ ಕಿಟ್ಟಿ, ಪಾವನಾ ಜತೆ ರಂಗಾಯಣ ರಘು, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧಿ ಪ್ರಮುಖ ತಾರಾಗಣ ದಲ್ಲಿದ್ದಾರೆ. ಅಂದಹಾಗೆ, ‘ಗೌಳಿ’ ಇದೇ ಶುಕ್ರವಾರ ತೆರೆಗೆ ಬರಲಿದೆ.

    6 ಸೆಂ.ಮೀ. ಬಾಲದ ಜೊತೆಗೇ ಹುಟ್ಟಿದ ಹೆಣ್ಣು ಮಗು; ಶಸ್ತ್ರಚಿಕಿತ್ಸೆ ಯಶಸ್ವಿ

    ಹಠಾತ್ ಹೃದಯಾಘಾತಕ್ಕೆ ಮತ್ತೆರಡು ಬಲಿ; ಕ್ರಿಕೆಟ್​ ಆಡುತ್ತಲೇ ಕುಸಿದು ಬಿದ್ದ ಆಟಗಾರರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts