ಸಿನಿವಾಣಿ

ಕೃತಿ ಶೆಟ್ಟಿ ಸಂಭಾವನೆ ಎರಡು ಕೋಟಿ ರೂಪಾಯಿ!?

Webdesk - Ravikanth

ಟಾಲಿವುಡ್​ನ ಬೇಡಿಕೆಯ ನಟಿಯರ ಪೈಕಿ ಕೃತಿ ಶೆಟ್ಟಿ ಸಹ ಒಬ್ಬರು. ಇತ್ತೀಚೆಗೆ, ‘ಬಂಗಾರರಾಜು’ ಚಿತ್ರತಂಡದವರು, ತಮ್ಮ ಚಿತ್ರದಲ್ಲಿನ ನಾಯಕಿ ಪಾತ್ರಕ್ಕೆ ಕೃತಿಗೆ ಆಫರ್ ಕೊಡುವುದಕ್ಕೆ ಹೋದಾಗ, ಸಂಭಾವನೆ ಕೇಳಿ ದಂಗಾಗಿ ವಾಪಸ್ಸಾಗಿದ್ದಾರಂತೆ. ಈ ಚಿತ್ರದಲ್ಲಿ ನಟಿಸುವುದಕ್ಕೆ ಕೃತಿ ಇಟ್ಟ ಬೇಡಿಕೆ 2 ಕೋಟಿಯಂತೆ.

ರಾಮ್ ಪೋತಿನೇನಿ ಚಿತ್ರದಲ್ಲಿ ಅಭಿನಯಿಸುವುದಕ್ಕೆ 50 ಲಕ್ಷ ರೂ. ಪಡೆದಿದ್ದ ಕೃತಿ, ಅಷ್ಟು ಬೇಗ ಇಷ್ಟೊಂದು ಸಂಭಾವನೆ ಕೇಳಿದ್ದನ್ನು ನೋಡಿ ಚಿತ್ರತಂಡ ಸುಸ್ತಾಗಿದೆ. ಇದಕ್ಕೆ ಚಿತ್ರತಂಡದವರು ಓಕೆ ಅನ್ನುತ್ತಾರೋ ಅಥವಾ ಇನ್ನೊಬ್ಬ ನಟಿಯತ್ತ ಹೋಗುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. -ಏಜೆನ್ಸೀಸ್