ಕರುನಾಡ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಸ್ಯಾಂಡಲ್ವುಡ್ನಲ್ಲಿ 26 ವರ್ಷ ಪೂರೈಸಿದ್ದಾರೆ. ಅವರ ಸಿನಿಮಾಗಳು, ಬಿಗ್ಬಾಸ್ ಶೋ ಅಂದರೆ ಅವರ ಅಭಿಮಾನಿಗಳಿಗೆ ಅಲ್ಲದೇ ಎಲ್ಲರಿಗೂ ಬಹಳಷ್ಟು ಇಷ್ಟ ಎಂದೇ ಹೇಳಬೇಕು. ಆದರೆ, ನಟ ಕಿಚ್ಚ ಸುದೀಪ್ ಅವರ ಸಿನಿಮಾಗಳು ಮತ್ತು ಅವರ ನಿರೂಪಣೆಯ ಜತೆಗೆ ಅವರ ವ್ಯಕ್ತಿತ್ವ ಕೂಡಾ ಅಭಿಮಾನಿಗಳಿಗೆ ತುಂಬಾನೆ ಇಷ್ಟ. ಕಾರಣ, ಜನರಿಗೆ ಸಹಾಯ ಮಾಡುವುದು ಹಾಗೂ ಮುಖ್ಯವಾದ ಸಂದರ್ಭಗಳಲ್ಲಿ ಅವರಿಗೆ ಹತ್ತಿರವಾದವರಿಗೆ ಉಡುಗೊರೆಗಳನ್ನು ನೀಡಿ ಅವರ ಮುಖದಲ್ಲಿ ಸಂತಸ ಮೂಡಿಸುವುದು ಕಿಚ್ಚ ಸುದೀಪ್ ಅವರು ಸದಾ ಮಾಡುತ್ತಾರೆ.
ಹೌದು, ಸದ್ಯ ತಮ್ಮ ಬಹುಕಾಲದ ಗೆಳೆಯ ಹಾಗೂ ಮುಂಬರುವ ಅವರ 'ವಿಕ್ರಾಂತ್ ರೋಣ' ಚಿತ್ರದ ನಿರ್ದೇಶಕ ಅನೂಪ್ ಭಂಡಾರಿಗೆ ದುಬಾರಿ ಕಾರುನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾರಣ, ಮಾ. 2 ರಂದು ನಿರ್ದೇಶಕ ಅನೂಪ್ ಭಂಡಾರಿ ಅವರು 40 ನೇ ವಸಂತಕ್ಕೆ ಕಾಲಿಟ್ಟರು. ಹಾಗಾಗಿ, ನಿರ್ದೇಶಕ ಅನೂಪ್ ಭಂಡಾರಿ ಅವರ ಹುಟ್ಟು ಹಬ್ಬಕ್ಕೆ ನಟ ಕಿಚ್ಚ ಸುದೀಪ್ ಅವರು ದುಬಾರಿ SUV ಕಾರನ್ನು ಗಿಫ್ಟ್ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಅನೂಪ್ಗೆ ಗಿಫ್ಟ್ ಕೊಟ್ಟಿರುವ ವಿಡಿಯೋವೊಂದನ್ನು ಕೆಲವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಆ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಅವರ ಅಭಿಮಾನಿಗಳ ಮನಗೆದ್ದಿದೆ. ಇನ್ನು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.