ಮನಾಲಿ: ತೆಲುಗು ಚಿತ್ರರಂಗವು ಭಾರತದಲ್ಲಿ ನಂ.1 ಸ್ಥಾನದಲ್ಲಿದೆ ಎಂದು ಹೇಳಿದ್ದ ಕಂಗನಾ ರಣಾವತ್, ಈಗ ಅದರ ಕುರಿತಾಗಿ ಇನ್ನಷ್ಟು ಮಾತನಾಡಿದ್ದಾರೆ. ಪ್ರಮುಖವಾಗಿ ಇಂದು ಬಾಲಿವುಡ್ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದನ್ನು ಅವರು ಪಟ್ಟಿ ಮಾಡಿದ್ದಾರೆ.
ಕಂಗನಾ ಹೇಳಿರುವ ಪ್ರಕಾರ, ಹಿಂದಿ ಚಿತ್ರರಂಗವು ಈಗ ಒಟ್ಟು ಎಂಟು ರೀತಿಯ ಭಯೋತ್ರಪಾದನೆಗಳಿಂದ ತತ್ತರಿಸುತ್ತಿದೆಯಂತೆ. ಭಯೋತ್ಪಾದನೆಯಲ್ಲೂ ಎಂಟು ರೀತಿ ಇದೆಯಾ ಎಂಬುದು ಆಶ್ಚರ್ಯವಾಗಬಹುದು. ಹೌದು ಎಂದು ಸ್ವತಃ ಟ್ವೀಟ್ ಮಾಡಿಕೊಂಡಿದ್ದಾರೆ ಕಂಗನಾ.
ಬಾಲಿವುಡ್ನ ಈ ಖ್ಯಾತ ನಟಿ ನೀಡುರುವ ಎಂಟು ವಿಷಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ನೆಪೋಟಿಸಂ (ಸ್ವಜನಪಕ್ಷಪಾತ) ಭಯೋತ್ಪಾದನೆ. ನಂತರ ಡ್ರಗ್ ಮಾಫಿಯಾ, ಲೈಂಗಿಕ ಕಿರುಕುಳ, ಧಾರ್ಮಿಕ, ಪೈರಸಿ, ಅಸಂಘಟಿತ ಕಾರ್ಮಿಕರ ಶೋಷಣೆ ಮತ್ತು ಧಾರ್ಮಿಕ ಹಾಗೂ ಪ್ರಾದೇಶಿಕ ಭಯೋತ್ಪಾದನೆ ಎಂದು ಟ್ವೀಟ್ ಮಾಡಿದ್ದಾರೆ ಕಂಗನಾ.
ಭಾರತೀಯ ಚಿತ್ರರಂಗದ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಮಾತನಾಡಿರುವ ಕಂಗನಾ, 'ಬೇರೆ ಭಾಷೆಗಳಿಂದ ಡಭ್ ಆದ ಅತ್ಯುತ್ತಮ ಚಿತ್ರಗಳಿಗೆ ಸಿಗದ ಮನ್ನಣೆ, ಡಬ್ ಆದ ಹಾಲಿವುಡ್ ಚಿತ್ರಗಳಿಗೆ ಸಿಗುತ್ತಿದೆ. ಹಾಗಾಗಿ ಆ ಹಾವಳಿಯನ್ನು ತಪ್ಪಿಸಲು ಮೊದಲು ಮುಂದಾಗಬೇಕು' ಎಂದು ಸರ್ಕಾರ ಮುಂದಾಗಬೇಕು ಎಂದು ಕಂಗನಾ ಹೇಳಿದ್ದಾರೆ.