ಹೈದರಾಬಾದ್: ಬಾಲಿವುಡ್ ನಟಿ ಕಂಗನಾ ರಣಾವತ್ ತಿರುಪತಿ ಬಾಲಾಜಿಯ ಆಶೀರ್ವಾದ ಪಡೆಯುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು. ಶನಿವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ, ಕಂಗನಾ ಸೀರೆಯನ್ನು ಧರಿಸಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಫೋಟೋಗೆ ನಟಿ, "ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು... ತಿರುಪತಿ ಬಾಲಾಜಿಯ ಆಶೀರ್ವಾದದೊಂದಿಗೆ ನನಗೆ ಈ ವರ್ಷ ಪ್ರಾರಂಭವಾಗುತ್ತಿದೆ...'' ಎಂಬ ಕ್ಯಾಪ್ಷನ್ ನೀಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಕಂಗನಾ ತಿರುಪತಿ ಬಾಲಾಜಿಗೆ ಸಮೀಪವಿರುವ ರಾಹು-ಕೇತು ದೇವಾಲಯದೊಳಗೆ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ನು, ಈ ವರ್ಷ ತಾನು ಹೆಚ್ಚು ಪ್ರೀತಿ ಗಳಿಸಿ ಮತ್ತು ತನ್ನ ಮೇಲೆ ಪೊಲೀಸ್ ದೂರುಗಳು ಮತ್ತು ಎಫ್‌ಐಆರ್‌ಗಳು ದಾಖಲಾಗುವುದು ಕಡಿಮೆಯಾಗಬೇಕು ಎಂದು ಆಶಿಸಿದರು. ಸದ್ಯ, ನಟಿಯ ಈ ಬಯಕೆ ತಮ್ಮ ಅಭಿಮಾನಿಗಳು ಮತ್ತು ವೈರಿಗಳ ಗಮನ ಕೂಡ ಸೆಳೆದಿದೆ.