ಸಿನಿವಾಣಿ

ಕರಣ್​, ಆದಿತ್ಯ, ಮಹೇಶ್​ ಭಟ್​ ಕೊಲೆಗಾರರು ... ಕಂಗನಾ ಆರೋಪ

ನೆಪೋಟಿಸಂ (ಸ್ವಜನಪಕ್ಷಪಾತ) ಪೋಷಿಸುತ್ತಾರೆ ಎನ್ನುವ ಕಾರಣಕ್ಕೆ ಸಾಕಷ್ಟು ಟ್ರೋಲ್​ಗೆ ಒಳಗಾಗಿದ್ದ ಸುಶಾಂತ್​ ಸಿಂಗ್ ರಜಪೂತ್​, ಒಂದು ಹಂತದಲ್ಲಿ ಸೋಷಿಯಲ್​ ಮೀಡಿಯಾದಿಂದ ದೂರವೇ ಉಳಿದಿದ್ದರು. ಇದೀಗ ಪುನಃ ವಾಪಸ್ಸಾಗಿರುವ ಅವರು ಮತ್ತೊಮ್ಮೆ ಸಾಕಷ್ಟು ಟ್ರೋಲ್​ ಆಗುತ್ತಿದ್ದಾರೆ.

ಇತ್ತೀಚೆಗೆ ಸೋಷಿಯಲ್​ ಮೀಡಿಯಾಗೆ ರೀಎಂಟ್ರಿ ಕೊಟ್ಟಿರುವ ಕರಣ್​ ಜೋಹರ್, ಮಕ್ಕಳಿಗಾಗಿ ಒಂದು ಪಿಕ್ಚರ್​ ಬುಕ್​ ಬರೆಯುತ್ತಿರುವುದಾಗಿ ಘೋಷಿಸಿದ್ದರು. ಈ ಕೆಲಸದಲ್ಲಿ ಸಾಕಷ್ಟು ಐಡಿಯಾಗಳನ್ನು ಕೊಟ್ಟು ಪ್ರೋತ್ಸಾಹಿಸಿರುವ ಟ್ವಿಂಕಲ್​ ಖನ್ನಾ ಮತ್ತಿತರರನ್ನು ಅವರು ಸ್ಮರಿಸಿದ್ದರು. ಸದ್ಯದಲ್ಲೇ ಪುಸ್ತಕ ಬಿಡುಗಡೆಯಾಗಲಿದೆ ಎಂದು ಘೋಷಿಸಿದರು. ಅಷ್ಟೇ ಅಲ್ಲ, ತಮ್ಮ ಮಕಳ ಒಂದು ವಿಡಿಯೋ ಶೇರ್​ ಮಾಡಿದದ್ದರು.

ಕರಣ್​ ಅವರ ಈ ಪೋಸ್ಟ್​ ಈಗ ಸಾಕಷ್ಟು ಟ್ರೋಲ್​ ಆಗುತ್ತಿದೆ. ಹೊರಗಿನಿಂದ ಬಂದ ಮಕ್ಕಳನ್ನು ತುಳಿಯುವುದರ ಜತೆಗೆ ತಮ್ಮ ಮಕ್ಕಳನ್ನು ಕರಣ್​ ಪ್ರಮೋಟ್​ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು, ಕರಣ್​ ತಮ್ಮ ಮಕ್ಕಳನ್ನು ಮುಂದಿಟ್ಟುಕೊಂಡು ಸಿಂಪಥಿ ಗಿಟ್ಟಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಜನರೇ ಇಷ್ಟೊಂದು ಝಾಡಿಸುತ್ತಿರುವಾಗ ಕಂಗನಾ ಸುಮ್ಮನಿರುತ್ತಾರೆಯೇ? ತಲತಲಾಂತರದಿಂದ ಕರಣ್​ ಅವರನ್ನೂ ಒಂದಲ್ಲಾ ಒಂದು ಕಾರಣಕ್ಕೆ ಧೂಷಿಸುತ್ತಲೇ ಬಂದಿರುವ ಕಂಗನಾ, ಈ ಪೋಸ್ಟ್​ ಬಳಸಿಕೊಂಡು ಕರಣ್​ ಅವರನ್ನು ಖಂಡಿಸಿದ್ದಾರೆ. ಅಷ್ಟೇ ಅಲ್ಲ, ಅವರೊಬ್ಬ ಕೊಲೆಗಾರ ಎಂದು ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಕರಣ್​ ಜೋಹರ್​, ಆದಿತ್ಯ ಚೋಪ್ರಾ, ಮಹೇಶ್​ ಭಟ್​, ರಾಜೀವ್​ ಮಸಂದ್​ ಮತ್ತು ಇನ್ನಿತರ ರಣಹದ್ದುಗಳ ಗುಂಪೊಂದು ಸುಶಾಂತ್​ ಅವರನ್ನು ಕೊಲೆ ಮಾಡಿತು. ಇಷ್ಟೆಲ್ಲಾ ಮಾಡಿ, ಕರಣ್​ ತಮ್ಮ ಮಕ್ಕಳನ್ನು ಪ್ರಮೋಟ್​ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ನಾಚಿಕೆ ಆಗಬೇಕು' ಎಂದು ಕಂಗನಾ ಹೇಳಿದ್ದಾರೆ.