ಮುಂಬೈ: ಹಿಂದಿಯ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 14ರ ಶುರುವಿಗೆ ದಿನಗಣನೆ ಪ್ರಾರಂಭವಾಗಿದೆ. ಲಾಕ್ಡೌನ್ ಥೀಮ್ನಲ್ಲಿ ಈ ಸಲದ ಬಿಗ್ಬಾಸ್ ಮೂಡಿಬರುತ್ತಿರುವುದು ಪ್ರೇಕ್ಷಕರಲ್ಲೂ ಕುತೂಹಲಕ್ಕೆ ಕಾರಣವಾಗಿದೆ. ಅಕ್ಟೋಬರ್ 3ರಿಂದ ಆರಂಭವಾಗಲಿರುವ ಈ ಶೋದಲ್ಲಿ ನಿರೂಪಕ ಸಲ್ಮಾನ್ ಖಾನ್ ಸಹ ಪ್ರಮುಖ ಆಕರ್ಷಣೆ.
ಆದರೆ, ಇಲ್ಲೊಬ್ಬರು ಸಲ್ಮಾನ್ ಖಾನ್ ನಿರೂಪಣೆ ಬೇಕಿಲ್ಲ ಎಂದು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಈಗಾಗಲೇ ಭೋಜಪುರಿ ನಟ ಮತ್ತು ಸಿನಿಮಾ ವಿಮರ್ಶಕ ಎಂದು ಹೇಳಿಕೊಳ್ಳುವ ಕಮಾಲ್ ಕೆ ಖಾನ್ ಅಲಿಯಾಸ್ ಕೆಆರ್ಕೆ, ಸಲ್ಮಾನ್ ಖಾನ್ ಅವರ ನಿರೂಪಣೆಯ ಬಗ್ಗೆ ತಕರಾರು ತೆಗೆದಿದ್ದಾರೆ. ಸಲ್ಮಾನ್ ಬೇಡ್ವೇ ಬೇಡ, ರಿಯಾಲಿಟಿ ಶೋ ರದ್ದಾಗಲಿ ಎಂದಿದ್ದಾರೆ.
‘ಈಗಾಗಲೇ ಕಾಫಿ ವಿಥ್ ಕರಣ್ ಕಾರ್ಯಕ್ರಮವನ್ನು ನಿಷೇಧಿಸುವಂತೆ ಆಗ್ರಹಿಸಿದ್ದಕ್ಕೆ ನಿರ್ಮಾಪಕರು ಆ ಶೋವನ್ನು ಕೈಬಿಟ್ಟಿದ್ದಾರೆ. ಅದು ನಮ್ಮ ವಿಜಯವಾಗಿತ್ತು. ಇದೀಗ ಬಿಗ್ಬಾಸ್ ಸೀಸನ್ 14ನ್ನು ಬ್ಯಾನ್ ಮಾಡಬೇಕಿದೆ. ಆ ಮೂಲಕ ನಾವು ಮತ್ತೆ ಗೆಲ್ಲಬೇಕಿದೆ. ತ್ವರಿತವಾಗಿ ನಿರೂಪಕ ಸಲ್ಮಾನ್ ಖಾನ್ ಅವರನ್ನು ಕೈಬಿಡಬೇಕು. ಈ ಶೋ ನಿಷೇಧ ಆಗುವವರೆಗೂ ನಾವು ನಿರ್ಮಾಪಕರನ್ನು ಬಿಡುವುದಿಲ್ಲ’ ಎಂದಿದ್ದಾರೆ.
ಅಚ್ಚರಿ ವಿಚಾರ ಏನೆಂದರೆ, ಹೀಗೆ ಸಲ್ಮಾನ್ ಖಾನ್ ವಿರುದ್ಧ ಮತ್ತು ಬಿಗ್ಬಾಸ್ ಬ್ಯಾನ್ ಬಗ್ಗೆ ಮಾತನಾಡುತ್ತಿರುವ ಕೆಆರ್ಕೆ ಬಿಗ್ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದರು. ಆಗ ಆ ರಿಯಾಲಿಟಿ ಶೋವನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ನಿರೂಪಣೆ ಮಾಡಿದ್ದರು. (ಏಜೆನ್ಸೀಸ್)