ಸಿನಿವಾಣಿ

ಹಲವು ಕಥೆಗಳ 'ಜುಗಲ್​ಬಂದಿ' ಚಿತ್ರದ ಟ್ರೇಲರ್​​ ಬಿಡುಗಡೆ …

chetannadiger

ಬೆಂಗಳೂರು: 'ಕಾಂತಾರ' ಚಿತ್ರದಲ್ಲಿ ಗಮನ ಸೆಳೆದ ಪಾತ್ರಗಳ ಪೈಕಿ ತಾಯಿ ಪಾತ್ರವೂ ಒಂದು. ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಾನಸಿ ಸುಧೀರ್​, ಈಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದಲ್ಲಿ ತಾಯಿಯಾಗಿ ನಟಿಸಿದ್ದಾರೆ. ಅದೇ 'ಜುಗಲ್​ಬಂದಿ'.

ಈಗಾಗಲೇ 'ಜುಗಲ್​ಬಂದಿ' ಚಿತ್ರದ ಫಸ್ಟ್​ ಲುಕ್​ ಹಾಗೂ ಹಾಡುಗಳ ಬಿಡುಗಡೆ ಆಗಿದೆ. ಈಗ ಈ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. ಇದು ಬರೀ ತಾಯಿ ಸೆಂಟಿಮೆಂಟ್​ ಚಿತ್ರವಷ್ಟೇ ಅಲ್ಲ, ಇಲ್ಲಿ ಬೇರೆ ಕಥೆಗಳು ಸಹ ಇವೆ. ಆ ಕಥೆಗಳನ್ನೆಲ್ಲ ಸೇರಿಸಿ 'ಜುಗಲ್​ಬಂದಿ' ಮಾಡಿದ್ದಾರೆ ನಿರ್ದೇಶಕ ದಿವಾಕರ್​ ಡಿಂಡಿಮ.

ನಿರ್ದೇಶನದ ಜೊತೆಗೆ ಡಿಂಡಿಮ ಪ್ರೊಡಕ್ಷನ್ಸ್ ಬ್ಯಾನರ್​ನಡಿ ಈ ಚಿತ್ರವನ್ನೂ ಅವರೇ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಮಾನಸಿ ಸುಧೀರ್, ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ, ಚಂದ್ರಪ್ರಭ, ಅರವಿಂದ್​ ರಾವ್​, ಅನಂತ ವೇಲು ಮುಂತಾದವರು ಅಭಿನಯಿಸಿದ್ದಾರೆ.

'ಜುಗಲ್​ಬಂದಿ' ಚಿತ್ರದಲ್ಲಿ ಮೂರು ಹಾಡುಗಳಿದ್ದು, ಆ ಮೂರು ಹಾಡುಗಳಿಗೂ ದಿವಾಕರ್​ ಡಿಂಡಿಮ ಸಾಹಿತ್ಯ ರಚಿಸಿದ್ದು, ಪ್ರದ್ಯೋತ್ತನ್​ ಸಂಗೀತ ಸಂಯೋಜಿಸಿದ್ದಾರೆ.