ಸಿನಿವಾಣಿ

ಗಣಿತ ವಿಷಯದಿಂದ "ಮಂದಬುದ್ದಿ"ಯಾಗುತ್ತೆ ಎಂದ ಬಾಲಿವುಡ್​ ನಟಿ ಜಾಹ್ನವಿ ಕಪೂರ್​ಗೆ ನೆಟ್ಟಿಗರಿಂದ ತರಾಟೆ

ಮುಂಬೈ: ಬಾಲಿವುಡ್​ ನಟಿ ಜಾಹ್ನವಿ ಕಪೂರ್​ಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಗಣಿತ ವಿಷಯದ ಬಗ್ಗೆ ಮಾತನಾಡಲು ಹೋಗಿ ಜಾಹ್ನವಿ ಕೆಲವರಿಂದ ಅಪಹಾಸ್ಯಕ್ಕೀಡಾಗಿದ್ದಾರೆ.

ಹಾಗಾದರೆ ಗಣಿತ ವಿಷಯದ ಬಗ್ಗೆ ಜಾಹ್ನವಿ ಹೇಳಿದ್ದಾದರೂ ಏನು ಎಂಬುದಕ್ಕೆ ಇಲ್ಲಿದೆ ಉತ್ತರ. ಸಂದರ್ಶನವೊಂದರಲ್ಲಿ ಗಣಿತ ವಿಷಯದ ಬಗ್ಗೆ ಅಭಿಪ್ರಾಯ ಹೇಳಿ ಎಂದಿದ್ದಕ್ಕೆ ಉತ್ತರಿಸಿರುವ ಜಾಹ್ನವಿ, ಗಣಿತ ಎಂಬುದೇ ಮಂದಬುದ್ದಿ, ಅದು ವ್ಯಕ್ತಿಯನ್ನು ಹಿಂದುಳಿಯುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಆಕೆ ಬಳಸಿದ ಪದ ಹಲವರಿಗೆ ಇಷ್ಟವಾಗಲಿಲ್ಲ, ಗಣಿತದಿಂದ ಮಂದಬುದ್ದಿ ಎಂದ ಮೊದಲ ವ್ಯಕ್ತಿ ಈಕೆಯೇ ಇರಬಹುದು ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಅರೆ.. ಅಕ್ಕಾ ಗಣಿತದ ಬಗ್ಗೆ ನಿನಗೆ ತಪ್ಪು ಮಾಹಿತಿ ನೀಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ.

ನಾನು ಈವರೆಗೂ ಗಣಿತವನ್ನೇ ಕಲಿಯಲಿಲ್ಲ, ಅಷ್ಟು ಕಠಿಣವಾದದ್ದನ್ನು ಏಕೆ ಕಲಿಯಬೇಕು ಎಂದು ಜಾಹ್ನವಿ ಹೇಳಿದ್ದರು. ಗಣಿತ ವಿಷಯ ಇಷ್ಟವಿಲ್ಲ ಎಂದು ಹೇಳಬಹುದಿತ್ತು, ಅದರ ಬದಲಾಗಿ ತಪ್ಪು ಪದಗಳ ಬಳಕೆ ಮಾಡಿದ್ದು ಸರಿಯಿಲ್ಲ, ಗಣಿತ ಇಷ್ಟವಿಲ್ಲವೆಂದರರೆ ಇತಿಹಾಸ ಇಷ್ಟ ಎಂದು ಹೇಳಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)