ಪರದೆ ಮೇಲೆ ತನ್ನನ್ನು ತಾನೇ ನೋಡಿಕೊಳ್ಳಲು ಇಷ್ಟವಿಲ್ಲವೆಂದ ದಿಶಾ ಪಠಾನಿ​! ಕಾರಣ ಹೀಗಿದೆ

Dishapatani
Published on

ಮುಂಬೈ: ಅತಿ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಪಡೆದ ಬಾಲಿವುಡ್ ನಟಿ ದಿಶಾ ಪಠಾನಿ ತಮ್ಮ ಸಿನಿಮಾಗಳ ಬಗ್ಗೆಯೇ ಹೇಳಿಕೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಸದ್ಯ ಏಕ್​ ವಿಲನ್​ ರಿಟರ್ನ್ಸ್​ ಚಿತ್ರ ಪ್ರಚಾರದಲ್ಲಿ ತೊಡಗಿರುವ ದಿಶಾ ಪಠಾನಿ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾಗಳನ್ನು ಪರದೇ ಮೇಲೆ ನೋಡಲು ಇಚ್ಚಿಸುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ಕೂಡ ನೀಡಿದ್ದಾರೆ.

ಪರದೆ ಮೇಲೆ ನನ್ನ ಸಿನಿಮಾ ಬಂದ ಕೂಡಲೇ ನಾನು ನನ್ನ ಕಣ್ಣಿಗೆ ಅಡ್ಡವಾಗಿ ನನ್ನ ಕೈಯನ್ನು ಇಟ್ಟುಕೊಳ್ಳುತ್ತೇನೆ ಹೊರತು ನನ್ನನ್ನು ನಾನೇ ನೋಡಿಕೊಳ್ಳುವುದಿಲ್ಲ, ಏಕೆಂದರೆ ಪರದೆಯಲ್ಲಿ ನನ್ನನ್ನು ನೋಡಿಕೊಳ್ಳುವುದು ನನಗೆ ಇಷ್ಟವಿಲ್ಲ ಎಂದು ದಿಶಾ ಹೇಳಿಕೊಂಡಿದ್ದಾರೆ.

ಸದ್ಯ ಏಕ್​ ವಿಲನ್​ ರಿಟರ್ನ್ಸ್​​ ಚಿತ್ರದಲ್ಲಿ ತೊಡಗಿಸಿಕೊಂಡಿರುವ ದಿಶಾ, ಮುಂದಿನ ವರ್ಷ ಈ ಚಿತ್ರ ತೆರೆಗೆ ಬರಲಿದೆ. ಎಂಎಸ್​ ಧೋನಿ ಅನಟೋಲ್ಡ್ ಸ್ಟೋರಿ ಚಿತ್ರದ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ ದಿಶಾ ಹಿಂತಿರುಗಿ ನೋಡಿದ್ದೇ ಇಲ್ಲ. ಬಹುಬೇಗ ಅತಿ ಕಡಿಮೆ ಸಮಯದಲ್ಲೇ ನ್ಯಾಷನಲ್​ ಕ್ರಷ್​ ಎಂಬ ಬಿರುದು ಪಡೆದದ್ದಲ್ಲದೇ, ಹಲವು ಟಾಪ್​ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net