ಬಾಲಿವುಡ್‌ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಲಿವುಡ್‌ನಲ್ಲಿ ಬೇಡಿಕೆಯ ನಟರಾಗಿದ್ದ ಸುಶಾಂತ್, ಯಾಕೆ ಆತ್ಮಹತ್ಯೆಗೆ ಶರಣಾರದರು ಎಂಬ ರಹಸ್ಯ ಹಾಗೆಯೇ ಉಳಿದಿದೆ.
ಸುಶಾಂತ್ ಆತ್ಮಹತ್ಯೆ ಹೊಸದಲ್ಲ ಮತ್ತು ಭಾರತೀಯ ಚಿತ್ರರಂಗವು ಇಷ್ಟು ವರ್ಷಗಳಲ್ಲಿ ಹಲವು ಆತ್ಮಹತ್ಯೆಗಳನ್ನು ಕಂಡಿದೆ. ಅದರಲ್ಲೂ ಬಾಲಿವುಡ್‌ನಲ್ಲಂತೂ ಕಲಾವಿದರು ಕಾರಣಾಂತರಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ವಿಷಯ, ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಕೆಲವು ಸಾವುಗಳು ದೊಡ್ಡ ಸುದ್ದಿಯಾದರೆ, ಇನ್ನೂ ಕೆಲವು ಸಾವುಗಳು ಸುದ್ದಿಯಾಗುವುದೇ ಇಲ್ಲ.
ಬಹುಶಃ ಬಾಲಿವುಡ್ ಅಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗವನ್ನು ಅಲುಗಾಡಿಸಿದ ಮೊದಲ ಸಾವು ಎಂದರೆ ಅದು ಗುರುದತ್ ಅವರದ್ದು. ಭಾರತೀಯ ಚಿತ್ರರಂಗಕ್ಕೆ ‘ಪ್ಯಾಸಾ’, ‘ಕಾಗಜ್ ಕೆ ಪೂಲ್’ ಮುಂತಾದ ಅಮರ ಚಿತ್ರಗಳನ್ನು ನೀಡಿದ್ದ ಗುರುದತ್, 60ರ ದಶಕದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದರು. ಅವರ ಸಾವಿನ ಕಥೆಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಗುರುದತ್ ಅವರಿಂದ ಶುರುವಾದ ಈ ಆತ್ಮಹತ್ಯೆ, ಸುಶಾಂತ್‌ವರೆಗೂ ಬಂದು ನಿಂತಿದೆ. ಈ ಮಧ್ಯೆ ಸೂಸೈಡ್‌ಗೆ ಬಲಿಯಾದವರು ಅದೆಷ್ಟು ಜನರೋ, ಲೆಕ್ಕ ಇಟ್ಟವರಿಲ್ಲ.
ಗುರುದತ್ ನಂತರ ಮಲಯಾಳಂ ನಟಿ ಶೋಭಾ, ಕನ್ನಡದ ಕಲ್ಪನಾ ಮತ್ತು ನಿವೇದಿತಾ ಜೈನ್, ತಮಿಳಿನ ಸಿಲ್ಕ್ ಸ್ಮಿತಾ, ಬಾಲಿವುಡ್ ಪೈಕಿ ಹೇಳುವುದಾದರೆ ಜಿಯಾ ಖಾನ್, ಮಾಜಿ ಮಿಸ್ ಇಂಡಿಯಾ ನಫೀಸಾ ಜೋಸ್ೆ, ಕುಲಜೀತ್ ರಾಂಧವಾ ಸೇರಿದಂತೆ ಹಲವರು ವಿಷ ಕುಡಿದು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ ಪಟ್ಟಿಗೆ ಈಗ ಹೊಸ ಸೇರ್ಪಡೆ ಸುಶಾಂತ್ ಎನ್ನುವುದು ದುರಂತ.