ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು ದಶಕಗಳು ಕಳೆದಿವೆ. ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಸಿನಿಮಾರಂಗದಲ್ಲಿ ಸುದೀಪ್ ಹೆಸರು ಮಾಡಿದ್ದಾರೆ. ಬಿಗ್ಬಿ ಅಮಿತಾಬ್ ಅವರಿಂದ ಹಿಡಿದು ಮೆಗಾಸ್ಟಾರ್ ಚಿರಂಜೀವಿ ಅವರೊಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ಬಾಲಿವುಡ್ ಸೇರಿ ದಕ್ಷಿಣದ ಖ್ಯಾತ ನಾಮ ನಿರ್ದೇಶಕರ ಜತೆ ಕೆಲಸ ಮಾಡಿದ ಅನುಭವ ಸುದೀಪ್ಗಿದೆ. 1997ರಲ್ಲಿ ತಾಯವ್ವ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಕಿಚ್ಚ, ಸಿನಿಮಾರಂಗದಲ್ಲಿ ಹೆಚ್ಚು ಕಡಿಮೆ ಎರಡೂವರೆ ದಶಕ ಪೂರೈಸಿದ್ದಾರೆ.
ಹಾಗಾದರೆ ಆ ಸುದೀರ್ಘ ಅವಧಿಯಲ್ಲಿ ಕಿಚ್ಚ ಸುದೀಪ್ ಗಳಿಸಿದ್ದಷ್ಟು? ಗಳಿಸಿದ್ದೇನು? ಈ ಪ್ರಶ್ನೆ ಸಹಜವಾಗಿ ಎಲ್ಲರ ತಲೆಯಲ್ಲಿ ಕೊರೆಯಬಹುದು. ಅದಕ್ಕೆ ಹಿಂದಿ ವೆಬ್ಸೈಟ್ವೊಂದಕ್ಕೆ ನೀಡಿದ ಸಂದರ್ಭದಲ್ಲಿ ಸುದೀಪ್ ಉತ್ತರ ನೀಡಿದ್ದಾರೆ. ‘ನಿಮ್ಮ ಅಭಿಮಾನಿಗಳ ಬಗ್ಗೆ ಏನು ಹೇಳಲು ಬಯಸುತ್ತೀರಿ?.. ಎಂದು ನಿರೂಪಕ ಕೇಳುತ್ತಿದ್ದಂತೆ, ಸುದೀಪ್ ಹೀಗೆಂದರು..
‘ಹ್ಹ ಹ್ಹ ನಾನು ಹೆಚ್ಚು ಹೊತ್ತು ನನ್ನ ಅಭಿಮಾನಿಗಳ ಜತೆ ಕಳೆಯುತ್ತೇನೆ. ಸದಾ ನನ್ನ ಜೊತೆಗಿರುತ್ತಾರೆ. ಸಂತೋಷದ ಕ್ಷಣಗಳ ಜತೆಗೆ ನನ್ನ ಕಠಿಣ ಸಂದರ್ಭದಲ್ಲೂ ನನಗೆ ಸಾಥ್ ನೀಡುತ್ತಾರೆ. ಅವರಿಂದಲೇ ನಾನೀಗ ಈ ಸ್ಥಾನದಲ್ಲಿದ್ದೇನೆ. 24 ವರ್ಷದ ಸಿನಿಮಾ ಜರ್ನಿಯಲ್ಲಿ ನಾನು ಏನನ್ನಾದರೂ ಸಂಪಾದಿಸಿದ್ದೇನೆಂದರೆ ಅದು ನನ್ನ ಅಭಿಮಾನಿಗಳು ಮಾತ್ರ’ ಎಂದು ಸುದೀಪ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಟ್ರೋಲ್ಗೆ ಆಹಾರವಾದ್ರು `ಕಾಮಿಡಿ ಕಿಲಾಡಿ’ ನಯನಾ
ಸದ್ಯ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಫ್ಯಾಂಟಮ್ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸುದೀಪ್, ಜು.17ರಿಂದ ಹೈದರಾಬಾದ್ಗೆ ತೆರಳಿ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ.