ಸಿನಿವಾಣಿ

ಬಂಧನವಾಗಿ ತಿಂಗಳ ಬಳಿಕ ರಿಯಾ ಚಕ್ರವರ್ತಿಗೆ ಜಾಮೀನು

ಮುಂಬೈ: ಸುಶಾಂತ್ ಸಿಂಗ್ ಆತ್ಮಹತ್ಯೆ ಮತ್ತು ಬಾಲಿವುಡ್​ ಡ್ರಗ್​ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಬೆಳವಣಿಗೆಗಳು ಆಗುತ್ತಿದ್ದು, ಇದೀಗ ರಿಯಾ ಚಕ್ರವರ್ತಿಗೆ ಜಾಮೀನು ಲಭಿಸಿದ್ದು, ಕೊಂಚ ನಿರಾಳರಾಗಿದ್ದಾರೆ.

ನಿನ್ನೆಯಷ್ಟೇ ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಅಕ್ಟೋಬರ್​ 20ರ ವರೆಗೂ ರಿಯಾ ನ್ಯಾಯಾಂಗ ಬಂಧನದಲ್ಲಿರುವಂತೆ ಆದೇಶಿಸಿತ್ತು. ಇಂದು ನಡೆದ ಜಾಮೀನು ಅರ್ಜಿಯ ವಿಚಾರಣೆಯಲ್ಲಿ ಜಾಮೀನು ಲಭಿಸಿದೆ.

‘ತನ್ನ ಮಾದಕವಸ್ತು ಅಭ್ಯಾಸವನ್ನು ಉಳಿಸಿಕೊಳ್ಳಲು ತನ್ನ ಹತ್ತಿರದವರ ಲಾಭವನ್ನು ಸುಶಾಂತ್​ ಪಡೆದುಕೊಂಡಿದ್ದಾನೆ. ಇದರಿಂದಾಗಿ ನಾನು ಮತ್ತು ನನ್ನ ಸಹೋದರ ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದೇವೆ. ಎಂದು ಜಾಮೀನು ಅರ್ಜಿಯಲ್ಲಿ ರಿಯಾ ನಮೂದಿಸಿದ್ದರು.

ಸದ್ಯ ಒಂದು ಲಕ್ಷ ಮೊತ್ತದ ಬಾಂಡ್ ಪಡೆದು, ಷರತ್ತುಬದ್ಧ ಜಾಮೀನು ನೀಡಿರುವ ಕೋರ್ಟ್​, ಪಾಸ್​ಪೋರ್ಟ್​​ ವಶಕ್ಕೆ ಪಡೆದುಕೊಂಡಿದೆ. ಇದರ ಜತೆಗೆ ಸಹೋದರ ಶೋವಿಕ್​ ಜಾಮೀನು ಅರ್ಜಿಯನ್ನು ಮುಂಬೈ ಹೈಕೋರ್ಟ್​​ ತಿರಸ್ಕರಿಸಿದೆ.

ಅಂದಹಾಗೆ, ಡ್ರಗ್​ ಮಾಫಿಯಾದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ನ್ಯಾಶನಲ್​ ನಾಕ್ರೋಟಿಕ್ಸ್ ಕಂಟ್ರೋಲ್​ ಬ್ಯೂರೋ ಸೆ. 8ರಂದು ರಿಯಾ ಮತ್ತವರ ಸಹೋದರ ಶೋವಿಕ್​ರನ್ನು ಬಂಧಿಸಿತ್ತು. (ಏಜೆನ್ಸೀಸ್​)