ಹೈದರಾಬಾದ್: ಮಾಸ್ ಮಹಾರಾಜ ರವಿತೇಜ ಅವರ ಬಗ್ಗೆ ವಿಶೇಷ ಪರಿಚಯ ಬೇಕಿಲ್ಲ. ಯಾಕೆಂದರೆ, ತೆಲುಗು ಚಿತ್ರರಂಗದ ಸ್ಟಾರ್ ಹೀರೋಗಳಲ್ಲಿ ರವಿತೇಜ ಕೂಡ ಒಬ್ಬರು. ಬಹಳ ವರ್ಷಗಳಿಂದ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ವಯಸ್ಸಾದರೂ ರವಿತೇಜ ಅವರು ಮಾಸ್ ಇಮೇಜ್ ಮಾತ್ರ ಇನ್ನು ಬದಲಾಗಿಲ್ಲ.
ಸದ್ಯ ರವಿತೇಜ ಅವರು ನಿರ್ದೇಶಕ ಹರೀಶ್ ಶಂಕರ್ ನಿರ್ದೇಶನದಲ್ಲಿ ಮಿಸ್ಟರ್ ಬಚ್ಚನ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರವಿತೇಜ ಅಭಿಮಾನಿಗಳು ಕೂಡ ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಅಲ್ಲದೆ, ಈ ಚಿತ್ರದ ಟೀಸರ್ ಮತ್ತು ಟ್ರೇಲರ್‌ನ ಸರಣಿ ಅಪ್ಡೇಟ್ಗಳು ಶೀಘ್ರದಲ್ಲೇ ಬರಲಿವೆ.
ಸಿನಿಮಾ ವಿಚಾರದಲ್ಲಿ ಬಿಟ್ಟರೆ ಟಾಲಿವುಡ್ನ ಖ್ಯಾತ ಸ್ಟಾರ್ ಹೀರೋ ರವಿತೇಜ ಕುಟುಂಬದ ಬಗ್ಗೆ ಯಾರಿಗೂ ಹೆಚ್ಚು ತಿಳಿದಿಲ್ಲ. ಮೇಲಾಗಿ, ತನ್ನ ಕುಟುಂಬದ ಬಗ್ಗೆಯೂ ಎಲ್ಲಿಯೂ ಮಾತನಾಡಿಲ್ಲ. ಅಂದಹಾಗೆ ರವಿತೇಜಗೆ ಒಬ್ಬ ಮಗ ಮತ್ತು ಮಗಳಿದ್ದಾಳೆ. ಮಗನನ್ನು ಈ ಹಿಂದೆ ರಾಜಾ ದಿ ಗ್ರೇಟ್ ಚಿತ್ರದಲ್ಲಿ ಬಾಲ್ಯದ ಪಾತ್ರದಲ್ಲಿ ನೋಡಿದ್ದೇವೆ. ಮಗನ ಹೆಸರು ಮಹಾಧನ್ ಭೂಪತಿರಾಜು. ರವಿತೇಜ ಅವರ ಮಗಳ ಹೆಸರು ಮೋಕ್ಷದ ಭೂಪತಿರಾಜು. ಇತ್ತೀಚಿಗೆ ಅವರ ಇತ್ತೀಚಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇತ್ತೀಚೆಗಷ್ಟೇ ಮೋಕ್ಷದಾ ಅವರು ವಿಕ್ರಮಾರ್ಕುಡು ಸಿನಿಮಾ ರೀ ರಿಲೀಸ್ ಆದ ಸಂದರ್ಭದಲ್ಲಿ ಥಿಯೇಟರ್ನಲ್ಲಿ ಸಿನಿಮಾ ನೋಡಲು ಬಂದಿದ್ದರು. ಅಂದು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಸಿನಿಮಾ ನೋಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಯಿತು. ಇದರ ಬೆನ್ನಲ್ಲೇ ಮೋಕ್ಷದಾ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದನ್ನು ನೋಡಿದವರು ಮೋಕ್ಷದಾ ಅವರು ಯಾವುದೇ ಹೀರೋಯಿನ್ಗಿಂತಲೂ ಕಡಿಮೆ ಇಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮೋಕ್ಷದಾ ಕೂಡ ಅಪ್ಪನ ಹಾದಿಯಲ್ಲೇ ಚಿತ್ರರಂಗಕ್ಕೆ ಕಾಲಿಡುತ್ತಾರೋ ಅಥವಾ ಬೇರೆ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಕಾದು ನೋಡಬೇಕಿದೆ. ಆದರೆ ರವಿತೇಜ ಅವರ ಮಗ ಸಿನಿಮಾ ಪ್ರವೇಶಿಸುವ ಸಾಧ್ಯತೆ ಇದೆಯಂತೆ. (ಏಜೆನ್ಸೀಸ್)