ಸಿನಿವಾಣಿ

ಹಾಟ್​ ಅವತಾರದಲ್ಲಿ ಸೊಂಟ ಬಳುಕಸಿದ ರಶ್ಮಿಕಾ: ಬಾಲಿವುಡ್​ ಬೋಲ್ಡ್​ ಸಾಂಗ್​ ವೈರಲ್​! Rashmika Mandanna

Rashmika Mandanna : ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ಕೊಡಗಿನ ಕುವರಿಯಾದ ರಶ್ಮಿಕಾ ಸ್ಯಾಂಡಲ್​​ವುಡ್​ನಲ್ಲಿ ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಗಳಿಸಿ, ಇದೀಗ ಪ್ಯಾನ್​ ಇಂಡಿಯಾ ಸ್ಟಾರ್​ ನಾಯಕಿಯಾಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲ, ಸಾಲು ಸಾಲು ಹಿಟ್​ ಸಿನಿಮಾಗಳನ್ನು ನೀಡುತ್ತಿದ್ದಾರೆ.

ಕನ್ನಡದಲ್ಲಿ ದಿವಂಗತ ನಟ ಪುನೀತ್​ ರಾಜ್​ಕುಮಾರ್​, ನಟ ದರ್ಶನ್​ ಹಾಗೂ ಗಣೇಶ್​ ಅವರಿಂದ ಹಿಡಿದು, ತಮಿಳಿನಲ್ಲಿ ವಿಜಯ್​, ಕಾರ್ತಿಕ್​, ಧನುಷ್​ ಮತ್ತು ತೆಲುಗಿನಲ್ಲಿ ವಿಜಯ್​ ದೇವರಕೊಂಡ, ಮಹೇಶ್​ ಬಾಬು, ಅಲ್ಲು ಅರ್ಜುನ್ ಹಾಗೂ ಬಾಲಿವುಡ್​ನಲ್ಲಿ ಸಲ್ಮಾನ್​ ಖಾನ್​, ವಿಕ್ಕಿ ಕುಶಾಲ್​ ಮತ್ತು ರಣಬೀರ್​ ಕಪೂರ್​ರಂತಹ ದೊಡ್ಡ ನಟರ ಜತೆಯಲ್ಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ತಾಜಾ ಸಂಗತಿ ಏನೆಂದರೆ, ಬಾಲಿವುಡ್​ ನಟ ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಅಭಿನಯದ ಹಾರರ್ ಥ್ರಿಲ್ಲರ್ ಚಿತ್ರ ಥಮ್ಮಾ ಅಕ್ಟೋಬರ್ 21 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಹಾರರ್ ಜೊತೆಗೆ, ಒಂದೊಳ್ಳೆ ಪ್ರೇಮಕಥೆಯು ಸಹ ಇದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಹಾಟ್​ ಆಗಿ ಸೊಂಟ ಬಳುಕಿಸಿದ್ದಾರೆ. ಆಯುಷ್ಮಾನ್ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಹೀಗಾಗಿ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ರಶ್ಮಿಕಾ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಥಮ್ಮಾ ಚಿತ್ರವು ಹಾರರ್ ಕಾಮಿಡಿ ಯುನಿವರ್ಸ್‌ನ ಐದನೇ ಭಾಗವಾಗಿದ್ದು, ಆದಿತ್ಯ ಸರ್ಪೋಟ್ದಾರ್ ನಿರ್ದೇಶನದಲ್ಲಿ ಅಯುಷ್ಮಾನ್ ಖುರಾನಾ, ರಶ್ಮಿಕಾ ಮಂದಣ್ಣ, ನವಾಜುದ್ದೀನ್ ಸಿದ್ದಿಕಿ, ಸುನೀಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅಭಿನಯಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಹಾರರ್-ಕಾಮಿಡಿ ಚಿತ್ರವಾಗಿದ್ದು, ವಾಂಪೈರ್ ಲವ್ ಸ್ಟೋರಿ ಆಧಾರಿತವಾಗಿದೆ. (ಏಜೆನ್ಸೀಸ್​)