ಲಾಕ್ಡೌನ್ ಅವಧಿಯಲ್ಲಿ ಬಾಲಿವುಡ್ ನಟಿಯರು ಸಿನಿಮಾ ಕೆಲಸಗಳನ್ನು ಬದಿಗಿಟ್ಟು, ವೈಯಕ್ತಿಕವಾಗಿ ಸಾಕಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಹಾರ, ಆರೋಗ್ಯ, ಫಿಟ್ನೆಸ್, ಮೇಕಪ್, ಓದುವಿಕೆ, ಅಡುಗೆ ಹೀಗೆ ಹಲವು ಬಗೆಯ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಆ ಚಟುವಟಿಕೆಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಾರೆ. ಇದೀಗ ಅಂಥದ್ದೇ ಒಂದು ಫೋಟೋವನ್ನು ಬಾಲಿವುಡ್ ಸ್ಟಾರ್ ನಟಿ ಶೇರ್ ಮಾಡಿಕೊಂಡಿದ್ದಾರೆ. ಅರೇ ಕ್ಷಣಕ್ಕೆ ಆ ಫೋಟೋ ನೋಡಿದರೆ, ಇದರಲ್ಲಿರುವವರು ಯಾರು ಎಂಬುದನ್ನು ಹೇಳುವುದು ಕಷ್ಟಸಾಧ್ಯ ಅನಿಸದೇ ಇರದು.
ಹೌದು, ನಟಿ ದೀಪಿಕಾ ಪಡುಕೋಣೆ, ಪೇಸ್ಪ್ಯಾಕ್ ಮಾಡಿಕೊಂಡ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಚ್ಚರಿ ರೀತಿಯ ಕಮೆಂಟ್ಗಳು ಫೋಟೋಕ್ಕೆ ಸಂದಾಯವಾಗುತ್ತಿದ್ದು, ಅದರಲ್ಲಿ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಿನಿಮಾ ಖ್ಯಾತಿಯ, ದಾನಿಶ್ ಸೇಠ್ ನಕ್ಕು ನಗಿಸುತ್ತಿದೆ. ‘ಅಕ್ಕಾ, ಫೇಸ್ ಪ್ಯಾಕ್ ಮಾಡಿರೋ ಆ ಹಾಳೆಯನ್ನು ವೇಸ್ಟ್ ಮಾಡಬೇಡಿ. ಕೈಯಲ್ಲಿ ತೆಗೆದುಕೊಂಡು, ಬಾಲ್ ರೂಪದಲ್ಲಿ ಮಾಡಿ, ಬಾಟಲ್ನ್ನು ಬ್ಯಾಟ್ ಎಂದುಕೊಂಡು ಮನೆಯಲ್ಲಿಯೇ ಕ್ರಿಕೆಟ್ ಆಟವಾಡಿ’ ಎಂದಿದ್ದಾರೆ. ದಾನಿಶ್ ಅವರ ಈ ಕಮೆಂಟ್ಗೆ 4 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಆರ್ಸಿಬಿ ಇನ್ಸೈಡರ್ ಕಾಮಿಡಿಗೆ ನಗಾಡಿದ್ದಾರೆ.
ಸದ್ಯ ಮನೆಯಲ್ಲಿಯೇ ಲಾಕ್ಡೌನ್ ಆಗಿರುವ ದೀಪಿಕಾ, ಪತಿ ರಣವೀರ್ ಸಿಂಗ್ ಜತೆ ಕಾಲ ಕಳೆಯುತ್ತಿದ್ದಾರೆ. ಅಡುಗೆ, ಓದು ಸೇರಿ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಗೊಂದು ಈಗೊಂದು ಪೋಸ್ಟ್ ಹಾಕುತ್ತ ಅಭಿಮಾನಿಗಳ ಜತೆಗೂ ಸಂಪರ್ಕದಲ್ಲಿದ್ದಾರೆ. (ಏಜೆನ್ಸೀಸ್)