ಸಿನಿವಾಣಿ

Video: ಗಣಪತಿ ಹಬ್ಬವನ್ನ ರಾಗಿಣಿ ಹೀಗೆ ಆಚರಿಸಿದರು ನೋಡಿ ...

'ಈ ಹಿಂದೆ ನಮ್ಮ ಮನೆಯಲ್ಲಿ ಮೂರು ದಿನ ಗೌರಿ-ಗಣೇಶನನ್ನು ಕೂರಿಸುತ್ತಿದ್ದೆವು. ಈ ವರ್ಷ ಕಾರಣಾಂತರಗಳಿಂದ ಮಿಸ್ ಆಗುತ್ತಿದೆ ...'

ಹಾಗಂತ ಎರಡು ದಿನಗಳ ಹಿಂದಷ್ಟೇ ನಟಿ ರಾಗಿಣಿ ಹೇಳಿಕೊಂಡಿದ್ದರು. ಈ ಬಾರಿಯ ಗಣೇಶ ಚತುರ್ಥಿ ಹೇಗಿರುತ್ತದೆ ಎಂದು ಕೇಳಿದಾಗ ಅವರು ಹೀಗೆ ಹೇಳಿದ್ದರು. ಹಾಗಂತ ಪೂಜೆ ನಿಲ್ಲುವುದಿಲ್ಲ ಎಂದು ಸಹ ಹೇಳಿದ್ದರು.

'ಹಾಗಂತ ಪೂಜೆ ನಿಲ್ಲುವುದಿಲ್ಲ. ಅಮ್ಮ ಗಣೇಶನ ಭಕ್ತೆ. 30ಕ್ಕೂ ಹೆಚ್ಚು ಗಣೇಶನ ಮೂರ್ತಿಗಳು ಮನೆಯಲ್ಲಿವೆ. ಈ ಬಾರಿ ನಾನೇ ವಿಶೇಷ

ಪೂಜೆ ಮಾಡಲಿದ್ದೇನೆ' ಎಂದು ರಾಗಿಣಿ ಹೇಳಿಕೊಂಡಿದ್ದರು.

ಅದರಂತೆ ಶನಿವಾರ ತಮ್ಮ ಮನೆಯಲ್ಲಿ ನಡೆದ ಗಣೇಶ ಪೂಜೆಯ ವಿಡಿಯೋವೊಂದನ್ನು ರಾಗಿಣಿ ತಮ್ಮ ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಈ ಮೂಲಕ ಈ ಬಾರಿಯ ಗಣೇಶ ಚತುರ್ಥಿ ಹಬ್ಬವು ತಮ್ಮ ಮನೆಯಲ್ಲಿ ಹೇಗಿತ್ತು ಎಂದು ತೋರಿಸಿದ್ದಾರೆ.