ತುಮಕೂರು: ಅನಾರೋಗ್ಯದಿಂದಾಗಿ ನಿನ್ನೆ ನಿಧನರಾದ ಕನ್ನಡದ ಹಿರಿಯ ನಟ ಟಿ.ಎಸ್.ಲೋಹಿತಾಶ್ವ (80) ಅವರ ಅಂತ್ಯಸಂಸ್ಕಾರ ಇಂದು ಅವರ ಊರಾದ ತುಮಕೂರಿನ ತೊಂಡಗೆರೆಯ ತೋಟದಲ್ಲಿ ನೆರವೇರಿತು.
ತುಮಕೂರು ತಾಲೂಕಿನ ತೊಂಡಗೆರೆಯ ತೋಟದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನಡೆಯಿತು. ಹೊನ್ನಗವಿ ಮಠದ ಶ್ರೀ ರುದ್ರಮುನಿ ಸ್ವಾಮಿಜಿಯವರ ನೇತೃತ್ವದಲ್ಲಿ ಅಂತಿಮ ವಿಧಿ-ವಿಧಾನಗಳು ನಡೆದವು. ಮಕ್ಕಳು, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಭಾಗಿಯಾದರು.
ಇದನ್ನೂ ಓದಿ: ಹಿರಿಯ ನಟ ಟಿ.ಎಸ್.ಲೋಹಿತಾಶ್ವ ನಿಧನ
ಕಳೆದ ತಿಂಗಳು ಉಸಿರಾಟದ ತೊಂದರೆ ಮತ್ತು ಹೃದಯಾಘಾತ ಆಗಿದ್ದರಿಂದ ಅವರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗಲಿಲ್ಲ. ಮಂಗಳವಾರ ಅವರು ನಿಧನರಾದರು. ಶರತ್ ಲೋಹಿತಾಶ್ವ ಸೇರಿದಂತೆ ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ.