ಪಿರಿಯಡ್ ಡ್ರಾಮಾ ಸಿನಿಮಾಗಳಿಂದಲೇ ಖ್ಯಾತರಾದ ನಿರ್ದೇಶಕ ಆಶುತೋಷ್ ಗೋವಾರಿಕರ್, ಇದೀಗ ಆ ಶೈಲಿ ಬದಿಗಿರಿಸಿ ಪಕ್ಕಾ ಆಕ್ಷನ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ವಿಶೇಷ ಏನೆಂದರೆ, ಈ ಸಿನಿಮಾದಲ್ಲಿ ಫರ್ಹಾನ್ ಅಖ್ತರ್ ನಾಯಕನಾಗಿ ನಟಿಸಿದರೆ, ಅವರಿಗೆ ರಾಕುಲ್ ಪ್ರೀತ್ ಸಿಂಗ್ ನಾಯಕಿ. ಎಕ್ಸೆಲ್ ಎಂಟರ್ಟೇನ್ವೆುಂಟ್ ಬ್ಯಾನರ್ನಲ್ಲಿಯೇ ಸಿನಿಮಾ ಸಿದ್ಧವಾಗುತ್ತಿದ್ದು, ಮೊದಲ ಬಾರಿಗೆ ಟಾಲಿವುಡ್ನ ಜಗಪತಿಬಾಬು ಅವರನ್ನು ಬಾಲಿವುಡ್ಗೆ ಕರೆತರುತ್ತಿದ್ದಾರೆ. ಈ ಚಿತ್ರಕ್ಕೆ ‘ಪುಕಾರ್’ ಎಂಬ ಶೀರ್ಷಿಕೆಯನ್ನೂ ಇಡಲಾಗಿದೆ.
ಈಗಾಗಲೇ ಬಾಲಿವುಡ್ನಲ್ಲಿ 1939, 1983 ಮತ್ತು 2000ರಲ್ಲಿ ‘ಪುಕಾರ್’ ಹೆಸರಿನ ಸಿನಿಮಾ ಬಂದಿವೆ. ಹಾಗಂತ ಆ ಸಿನಿಮಾಗಳ ಮುಂದುವರಿದ ಭಾಗ ಇದಲ್ಲ. ಕೇವಲ ಶೀರ್ಷಿಕೆಯನ್ನಷ್ಟೇ ಇಲ್ಲಿ ಮರುಬಳಕೆ ಮಾಡಲಾಗುತ್ತಿದೆ. ಫರ್ಹಾನ್ ಫಾರೆಸ್ಟ್ ಆಫೀಸರ್ ಆಗಿ ಕಾಣಿಸಿದರೆ, ಖಳನ ಪಾತ್ರದಲ್ಲಿ ಜಗಪತಿ ಬಾಬು ನಟಿಸಲಿದ್ದಾರೆ. ಡಿಸೆಂಬರ್ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಸದ್ಯ ‘ಛತ್ರಿವಾಲಿ’ ಸಿನಿಮಾ ಶೂಟಿಂಗ್ನಲ್ಲಿ ರಾಕುಲ್ ತೊಡಗಿಸಿಕೊಂಡಿರುವುದರಿಂದ, ಆ ಸಿನಿಮಾ ಮುಗಿಸಿ ‘ಪುಕಾರ್’ ಬಳಗ ಸೇರಿಕೊಳ್ಳಲಿದ್ದಾರೆ. -ಏಜೆನ್ಸೀಸ್