ಸಿನಿವಾಣಿ

12,500 ಅಡಿ ಎತ್ತರದಲ್ಲಿ ಕಂಗೊಳಿಸಿದ 'ಅಪ್ಪು'! ಅಭಿಮಾನಿಗಳ ವಿಶೇಷ ನಮನ...

ಉತ್ತರಾಖಂಡ: ಅಪ್ಪು ನಮನ್ನು ಅಗಲಿ 2 ತಿಂಗಳು ಕಳೆದಿವೆ. ಆದರೆ, 'ಜೊತೆಗಿರದ ಜೀವ ಎಂದಿಗಿಂತ ಜೀವಂತ' ಎಂಬಂತೆ ಪುನೀತ್ ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳು ಅಂತ ಎಲ್ಲರ ಮನದಲ್ಲಿ ಇಂದಿಗೂ ಜೀವಂತವಿದ್ದಾರೆ. ಇನ್ನು, ಅಪ್ಪು ಅಗಲಿಕೆಯ ನಂತರ ಹಲವರು ಅವರಿಗೆ ಬೇರೆ-ಬೇರೆ ವಿಶೇಷ ರೀತಿಗಳಲ್ಲಿ ನಮನ ಸಲ್ಲಿಸಿದ್ದಾರೆ. ಬೈಕ್ ರೈಡ್, ಸೈಕಲ್ ರೈಡ್, ಯಾತ್ರೆಗಳು ಎಂಬಂತೆ ಹಲವು ರೀತಿಗಳಲ್ಲಿ ನಮನ ಸಲ್ಲಿಸಿದ್ದಾರೆ. ಆದರೆ, ಇಲ್ಲೊಂದು ಅಪ್ಪು ಅಭಿಮಾನಿ ಬಳಗ ಸಮುದ್ರ ಮಟ್ಟದಿಂದ 12,500 ಅಡಿ ಎತ್ತರದಲ್ಲಿ ಪುನೀತ್ ರಾಜ್​ಕುಮಾರ್​ಗೆ ನಮನ ಸಲ್ಲಿಸಿದ್ದಾರೆ.  
ಹೌದು, ಪರ್ವತ ಚಾರಣಿಗರಾದ ಅಪ್ಪು ಅಭಿಮಾನಿಗಳ ಗುಂಪೊಂದು 'ಬ್ರಹ್ಮಟಲಶಿಖರ, ಉತ್ತರಾಖಂಡ' ತಲುಪಿದ್ದು, ಅಲ್ಲಿ ಅಪ್ಪು ಅವರ ಒಂದು ದೊಡ್ಡ ಬ್ಯಾನರ್ ಹಿಡಿದು ಪವರ್ ಸ್ಟಾರ್​ಗೆ ವಿಶೇಷ ನಮನ ಸಲ್ಲಿಸಿದ್ದಾರೆ. 9 ಮಂದಿಯ ಈ ಅಪ್ಪು ಅಭಿಮಾನಿಗಳ ಗುಂಪು 12,500 ಅಡಿ ಎತ್ತರದಲ್ಲಿರುವ ಬ್ರಹ್ಮಟಲಶಿಖರದಲ್ಲಿ ಅಪ್ಪುಗೆ ನಮನ ಸಲ್ಲಿಸಿರುವುದು, ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಮತ್ತು ಫೋಟೋ ಸಿಕ್ಕಾಟ್ಟೆ ವೈರಲ್ ಆಗುತ್ತಿದೆ. ಫೇಸ್ಬುಕ್​ನಲ್ಲಿ ಅಪ್ಪು ಅಭಿಮಾನಿಗಳ ಪೇಜ್ ಒಂದು ಈ ಫೋಟೋ ಹಂಚಿಕೊಂಡಿದ್ದು, ಆ ಪೋಸ್ಟ್​ಗೆ 20,000ಕ್ಕೂ ಅಧಿಕ ಲೈಕ್ಸ್​​ಗಳು ಪಡೆದಿದೆ. ಇಂತಹ ಸುದ್ದಿಗಳನ್ನು ಕಂಡರೆ ಅಪ್ಪು ತಮ್ಮ ಪ್ರೀತಿಯ ಅಭಿಮಾನಿಗಳ ಎದೆಯಲ್ಲಿ ಅಜರಾಮರ ಎನಿಸುತ್ತೆ.