ಸಿನಿವಾಣಿ

ಕಿಸ್​ ಕೇಳಿದ ಅಭಿಮಾನಿಗೆ ಜಾಹ್ನವಿ ಕಪೂರ್​ ಕೊಟ್ಟ ಖಡಕ್​ ಉತ್ತರ ಹೀಗಿದೆ..!

ಮುಂಬೈ: ಇನ್​ಸ್ಟಾಗ್ರಾಂ ಲೈವ್​ನಲ್ಲಿ ಸಂವಾದದ ವೇಳೆ ಅಭಿಮಾನಿಯೊರ್ವ ಕೇಳಿದ ಪ್ರಶ್ನೆಗೆ ನಟಿ ಜಾಹ್ನವಿ ಕಪೂರ್ ಕೊಟ್ಟ ಉತ್ತರ ಇದೀಗ ಭಾರಿ ಸುದ್ದಿಯಾಗಿದೆ.​

"ನಾವಿಬ್ಬರು ಕಿಸ್​" ಮಾಡಬಹುದಾ ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ "ನೋ" ಎಂದು ಪ್ರತಿಕ್ರಿಯಿಸಿದ ಪೋಸ್ಟ್​ ಅನ್ನು ಜಾಹ್ನವಿ ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ, ನೆಟ್ಟಿಗರು ಕೇಳಿದ ಅನೇಕ ಪ್ರಶ್ನೆಗಳಿಗೂ ಜಾಹ್ನವಿ ಉತ್ತರಿಸಿದ್ದಾರೆ. ನೆಟ್ಟಿಗನೊಬ್ಬ ಜಾಹ್ನವಿಯ ಆಹಾರ ದಿನಚರಿ ಬಗ್ಗೆ ಪ್ರಶ್ನಿಸಿದಾಗ ತಮ್ಮ ಕೈನಲ್ಲಿದ್ದ ಐಸ್​ಕ್ರೀಮ್​ ಅನ್ನು ಪ್ರದರ್ಶಿಸಿದರು. ಉತ್ತಮ ಪ್ರವಾಸದ ನೆನಪಿನ ಬಗ್ಗೆ ಕೇಳಿದ ಪ್ರಶ್ನೆಗೆ ಕೆಲವು ವರ್ಷಗಳ ಹಿಂದೆ ದಕ್ಷಿನ ಫ್ರಾನ್ಸ್​ಗೆ ಭೇಟಿ ನೀಡಿದ್ದನ್ನು ಜಾಹ್ನವಿ ನೆನಪಿಸಿಕೊಂಡರು.

ಉತ್ತನ ಸಹನಟನಾಗಿ ಗಂಜಾನ ಸೆಕ್ಸೆನಾ ಚಿತ್ರದ ಪಂಕಜ್​ ತ್ರಿಪಾಠಿ ಹೆಸರನ್ನು ಹೇಳಿದರು. ಆತಂಕವನ್ನು ಹೇಗೆ ನಿವಾರಿಸಿಕೊಳ್ಳಬೇಕೆಂಬ ಪ್ರಶ್ನೆಗೆ ದಿಂಬನ್ನು ತಬ್ಬಿಕೊಳ್ಳಿ ಮತ್ತು ಹಾಡನ್ನು ಹಾಡಿರಿ ಎಂದು ಸಲಹೆ ನೀಡಿದರು. ಹೀಗೆ ಅನೇಕ ಅಭಿಮಾನಿಗಳೊಂದಿಗೆ ಜಾಹ್ನವಿ ಸಂವಾದ ನಡೆಸಿದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಗುಡ್​ ಲಕ್​ ಜೆರ್ರಿ ಚಿತ್ರದಲ್ಲಿ ಜಾಹ್ನಾವಿ ನಟಿಸಿದ್ದಾರೆ. ಈ ಚಿತ್ರವನ್ನು ಆನಂದ್​ ಎಲ್​ ರಾಯ್​ ಎಂಬುವರು ನಿರ್ಮಿಸಿದ್ದಾರೆ. ಪಂಕಜ್​ ಮಟ್ಟ ಅವರು ಬರೆದಿರುವ ಕತೆಗೆ ಸಿದ್ಧಾರ್ಥ ಸೆಂಗುಪ್ತ ನಿರ್ದೇಶನ ಮಾಡಿದ್ದಾರೆ. (ಏಜೆನ್ಸೀಸ್​)