ಹರ್ಷವರ್ಧನ್ ಬ್ಯಾಡನೂರು
‘ಶಿವಾಜಿ ಸುರತ್ಕಲ್ 2’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯ ಮೇ ಕೊನೆಯವರೆಗೂ ನಾಲ್ಕು ವಾರಗಳ ಕಾಲ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ನಡೆಸಿಕೊಡಲಿದ್ದೇನೆ. ಕರೋನಾ ಸಮಯದಲ್ಲಿ ಮನೆಯಲ್ಲಿರುವಾಗ ಮೂರು ಕಥೆಗಳನ್ನು ಮಾಡಿಕೊಂಡಿದ್ದೇನೆ. ಅವುಗಳಲ್ಲೇ ಒಂದು ಸಿನಿಮಾ ಪ್ರಾರಂಭಿಸುವ ಆಲೋಚನೆಯಿದೆ.
ಸದ್ಯಕ್ಕೆ ಆ ಬಗ್ಗೆ ಏನೂ ನಿರ್ಧರಿಸಿಲ್ಲ. ನಾನು ಕೇವಲ ನಟಿಸಬಹುದು, ಅಥವಾ ನಿರ್ದೇಶಿಸಬಹುದು ಅಥವಾ ನಟಿಸಿ, ನಿರ್ದೇಶಿಸಬಹುದು. ಅದಕ್ಕೂ ಮೊದಲು ನಿರ್ಮಾಣ ಸಂಸ್ಥೆ ಜತೆ ರ್ಚಚಿಸಿ ಆ ಬಳಿಕ ನಿರ್ಧರಿಸಲಿದ್ದೇನೆ.
ಬದಲಾವಣೆ ಅಗತ್ಯ. ನಮ್ಮನ್ನು ನಾವೇ ರಿಫ್ರೆಷ್ ಮಾಡಿಕೊಳ್ಳಬೇಕು. ನಮ್ಮನ್ನು ನಾವೇ ಆಗಾಗ ಹುಡುಕಿಕೊಳ್ಳುತ್ತಿರಬೇಕು. ಅದು ಹೊಸ ಜಾನರ್ನಲ್ಲಿ, ಹೊಸ ಬಗೆಯ ಪಾತ್ರಗಳಲ್ಲಿ ನಟಿಸುವುದರಿಂದ ಸಾಧ್ಯ. ನಾನು 100 ಚಿತ್ರಗಳಲ್ಲಿ ನಟಿಸಿದ್ದರೂ, ‘ಶಿವಾಜಿ ಸುರತ್ಕಲ್’ ರೀತಿಯ ಸಿನಿಮಾ ಮಾಡಿರಲಿಲ್ಲ. ಹೊಸ ಬಗೆಯ ಜಾನರ್, ವಿಭಿನ್ನ ರೀತಿಯ ಪಾತ್ರದಲ್ಲಿ ನಟಿಸಲು ನನಗೂ ಉತ್ಸಾಹ ಸಿಗುತ್ತಿತ್ತು. ಪ್ರೇಕ್ಷಕರೂ ನನ್ನನ್ನು ವಿಭಿನ್ನ ರೂಪದಲ್ಲಿ ನೋಡಿ ಖುಷಿಪಡುತ್ತಿದ್ದರು.
ನನಗೆ ಪ್ರಚಾರಕ್ಕೆ ಬನ್ನಿ ಅಂತ ಹಲವರು ಕರೆದರು. ಆದರೆ, ಹೋಗಲಿಲ್ಲ. ನಾನು ರಾಜಕೀಯಕ್ಕೆ ತಲೆ ಹಾಕುವುದಿಲ್ಲ. ಬದಲಾಗಿ ತಟಸ್ಥನಾಗಿರಲು ಬಯಸುತ್ತೇನೆ. ಎಲ್ಲರೂ ನನಗೆ ಗೆಳೆಯರೇ, ಎಲ್ಲ ಪಕ್ಷದಲ್ಲೂ ಗೆಳೆಯರಿದ್ದಾರೆ. ನನ್ನ ಮಗಳ ಮದುವೆಗೆ ಆ ಪಕ್ಷ, ಈ ಪಕ್ಷ ಅಂತ ನೋಡದೇ ಎಲ್ಲ ಪಕ್ಷದ ನಾಯಕರೂ ಬಂದಿದ್ದರು.
ರಾಧಿಕಾ ಕುಮಾರಸ್ವಾಮಿ ನಟಿಸಿರುವ ‘ಭೈರಾದೇವಿ’ ಚಿತ್ರದಲ್ಲಿ ಎಸಿಪಿ ಪಾತ್ರದಲ್ಲಿ ನಟಿಸಿದ್ದೇನೆ. ಅದು ರಿಲೀಸ್ ಆಗಬೇಕಿದೆ.
(ನಗುತ್ತಾ) ಹೌದು, 100 ಸಿನಿಮಾಗಳವರೆಗೂ ನಾನು ಖಾಕಿ ಧರಿಸಿರಲಿಲ್ಲ. ಈಗ ಸತತವಾಗಿ ‘ಶಿವಾಜಿ ಸುರತ್ಕಲ್’, ‘100’, ‘ಶಿವಾಜಿ ಸುರತ್ಕಲ್ 2’ ಇದೀಗ ‘ಭೈರಾದೇವಿ’ ನಾಲ್ಕು ಚಿತ್ರಗಳಲ್ಲೂ ಪೊಲೀಸ್ ಅಧಿಕಾರಿ ಪಾತ್ರಗಳಲ್ಲಿ ನಟಿಸಿದ್ದೇನೆ.