ಸಿನಿವಾಣಿ

ಸುಶಾಂತ್​ ನೆನಪಲ್ಲಿ ಏಕ್ತಾ ಕಪೂರ್​ ಶುರು ಮಾಡಿದ್ರು ‘ಪವಿತ್ರಾ ರಿಶ್ತಾ ಫಂಡ್’

ಬಾಲಿವುಡ್ ನಟ ಸುಶಾಂತ್​ ಸಿಂಗ್​ ಸಾವನ್ನಪ್ಪಿ ಒಂದು ತಿಂಗಳ ಮೇಲಾಯಿತು. ಅವರ ಸಾವಿನ ಕುರಿತು ತನಿಖೆ ನಡೆಯುತ್ತಿದೆಯಾದರೂ, ಯಾವುದೂ ಸ್ಪಷ್ಟತೆ ಇಲ್ಲ. ಸಿಬಿಐಗೆ ನೀಡಿ ಎಂದು ಒಂದಷ್ಟು ಪಟ್ಟು ಹಿಡಿದರೆ, ಘಟಾನುಘಟಿಗಳ ಕೈವಾಡವಿದೆ ಎಂದೂ ಆರೋಪಿಸುತ್ತಿದ್ದಾರೆ. ಇದೆಲ್ಲದರ ನಡುವೆ ಸುಶಾಂತ್​ ಹೆಸರಲ್ಲಿ ಇದೀಗ ಪರಿಹಾರ ನಿಧಿ ತೆರೆಯಲಾಗಿದೆ.

ಹೌದು, ಬಾಲಿವುಡ್​ನ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್​ ಸುಶಾಂತ್​ ನೆನಪಲ್ಲಿ ಹೊಸದೊಂದು ಕಾರ್ಯಕ್ಕೆ ಕೈ ಹಾಕಿದ್ದಾರೆ. ಮಾನಸಿಕ ಆರೋಗ್ಯ ಜಾಗೃತಿ ಮೂಡಿಸುವುದರ ಕುರಿತು ಪವಿತ್ರ ರಿಶ್ತಾ ಫಂಡ್​ ತೆರೆದಿದ್ದಾರೆ. ಈ ನಿಧಿಯ ಮೂಲಕ ಮಾನಸಿಕ ಖಿನ್ನತೆ ಅಥವಾ ಮಾನಸಿಕವಾಗಿ ದುರ್ಬಲರಾದವರನ್ನು ಸರಿಪಡಿಸುವ ಸಲುವಾಗಿ ಪರಿಹಾರ ನಿಧಿ ತೆರೆದಿದ್ದಾರೆ.

ಸುಶಾಂತ್​ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದೆ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ. ಆ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದು ಏಕ್ತಾ ಕಪೂರ್​. ಅಂದಿನಿಂದ ಇಬ್ಬರೂ ಸ್ನೇಹಿತರು. ಇದೀಗ ಸ್ನೇಹಿತನ ಅಗಲಿಕೆ ಹಿನ್ನೆಲೆಯಲ್ಲಿ ಮಾನಸಿಕವಾಗಿ ಒತ್ತಡಕ್ಕೊಳಗಾದವರನ್ನು ಸರಿಪಡಿಸಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಕೈ ಹಾಕಿದ್ದು, ಸಿನಿಮಾ ಸಹೋದ್ಯೋಗಿಗಳಿಂದಲೂ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್​)