ಸಿನಿವಾಣಿ

ಹಾಸ್ಯನಟ ಚಿಕ್ಕಣ್ಣ ನಾಯಕನಾಗಿ ನಟಿಸೋ ಚಿತ್ರದ ಶೀರ್ಷಿಕೆ ಏನಿರಬಹುದು?

manjunathktgns

ಬೆಂಗಳೂರು: ಹಾಸ್ಯನಟರು ನಾಯಕರಾಗಿ ಮಿಂಚಿದ್ದಾರೆ. ಕೋಮಲ್​, ಶರಣ್​ ಸೇರಿ ಹಲವರು ಆ ಸಾಲಿನಲ್ಲಿದ್ದಾರೆ. ಇದೀಗ ಅದೇ ರೀತಿ ಚಿಕ್ಕಣ್ಣ ಹೀರೋ ಆಗಿ ಎಂಟ್ರಿಕೊಡುವ ಸಿದ್ಧತೆಯಲ್ಲಿದ್ದಾರೆ.

ಈ ಮೊದಲೇ ಈ ವಿಚಾರ ಹೊರಬಿದ್ದಿತ್ತಾದರೂ, ಸಿನಿಮಾ ಶೀರ್ಷಿಕೆ ಏನು ಎಂಬಿತ್ಯಾದಿ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಆ ವಿಚಾರವನ್ನು ಹೇಳಿಕೊಳ್ಳಲೆಂದೆ ಚಿತ್ರತಂಡ, ದಿನಾಂಕವೊಂದನ್ನು ನಿಗದಿ ಮಾಡಿದೆ.

ಹೌದು, ಉಮಾಪತಿ ಶ್ರೀನಿವಾಸ್​ ನಿರ್ಮಾಣದಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ಚಿಕ್ಕಣ್ಣ ನಾಯಕನಾಗಿ ನಟಿಸಲಿದ್ದು, ಅ. 19ರಂದು ಬೆಳಗ್ಗೆ 8ಗಂಟೆಗೆ ಚಿತ್ರದ ಶೀರ್ಷಿಕೆ ಅನಾವರಣವಾಗಲಿದೆ. ಚಂದ್ರಮೋಹನ್​ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಸ್ಮಿತಾ ಉಮಾಪತಿ ಮತ್ತು ನಿರ್ಮಲಾ ಶ್ರೀನಿವಾಸ್​ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

ಉಮಾಪತಿ ಫಿಲಂಸ್​ ಅರ್ಪಿಸುತ್ತಿರುವ ಈ ಚಿತ್ರವನ್ನು ಡಿಎನ್​ ಸಿನಿಮಾಸ್​ ನಿರ್ಮಾಣದ ಹೊಣೆ ಹೊತ್ತಿದೆ. ಈ ಮೊದಲು ಇದೇ ಬ್ಯಾನರ್​ನಿಂದ ಒಂದಲ್ಲ ಎರಡಲ್ಲ ಚಿತ್ರ ನಿರ್ಮಾಣವಾಗಿತ್ತು. ಸುಧಾಕರ್​ ಎಸ್​.ರಾಜ್​ ಛಾಯಾಗ್ರಹಣ, ಅರ್ಜುನ್​ ಜನ್ಯ ಸಂಗೀತ ನೀಡಲಿದ್ದಾರೆ.