ಮುಂಬೈ: ಕಳೆದ ಜೂನ್ನಲ್ಲಿ ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ಗೆ ರಿಯಾ ಚಕ್ರವರ್ತಿ ಜತೆ ಲಿವ್ ಇನ್ ರಿಲೇಶನ್ಶಿಪ್ ಇತ್ತು ಎಂಬ ವಿಷಯ ಈಗಾಗಲೇ ಗೊತ್ತಿದೆ. ಅದಕ್ಕೂ ಮುನ್ನವೇ ಅವರು ಅಂಕಿತಾ ಲೋಖಂಡೆ ಎಂಬ ನಟಿಯನ್ನು ಪ್ರೀತಿಸುತ್ತಿದ್ದರು ಎಂಬ ಸುದ್ದಿಯೂ ಜಗಜ್ಜಾಹೀರಾಗಿದೆ. ಅಂಕಿತಾ ಹೋದ ಮೇಲೆ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಜತೆಗೆ ಸುಶಾಂತ್ ಅಫೇರ್ ನಡೆಯುತಿತ್ತು ಎಂಬ ಸುದ್ದಿ ಕೆಲವು ದಿನಗಳ ಹಿಂದಷ್ಟೇ ಹೊರಬಿದ್ದಿದೆ.
ರಿಯಾ, ಸಾರಾ, ಅಂಕಿತಾ ಅಲ್ಲದೆ, ಮತ್ತೊಬ್ಬ ನಟಿಯ ಜತೆಗೂ ಸುಶಾಂತ್ಗೆ ಅಫೇರ್ ಇತ್ತು ಎಂಬ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಆ ನಟಿ ಯಾರು ಗೊತ್ತಾ?, ಕೃತಿ ಸನೋನ್. ಈ ವಿಷಯವನ್ನು ಮತ್ತೊಬ್ಬ ನಟಿ ಲಿಜಾ ಮಲ್ಲಿಕ್ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಡಿರುವ ಅವರು, 'ಸುಮಾರು ಎರಡೂವರೆ ವರ್ಷಗಳ ಹಿಂದೆ ಬಾಂದ್ರಾ ಕ್ಲಬ್ನಲ್ಲಿ ನಡೆದ ಕೃತಿ ಸನೋನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಸುಶಾಂತ್ ಅವರನ್ನು ಭೇಟಿ ಮಾಡಿದ್ದೆ. ಅದು ಕೃತಿ ಕೊಟ್ಟ ಪಾರ್ಟಿಯಾದ್ದರಿಂದ, ಅವರು ಬಹಳ ಬಿಜಿಯಾಗಿದ್ದರು. ಅವರ ಪರವಾಗಿ ಸುಶಾಂತ್ ಎಲ್ಲರನ್ನು ಬರಮಾಡಿಕೊಂಡು ನೋಡಿಕೊಳ್ಳುತ್ತಿದ್ದರು. ಸುಶಾಂತ್ ಯಾಕೆ ಈ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಾಗಲಿಲ್ಲ. ಆ ನಂತರ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂದು ಗೊತ್ತಾಯಿರು' ಎಂದು ಹೇಳಿದ್ದಾರೆ ಲಿಜಾ.
ಈ ಕುರಿತು ಇನ್ನಷ್ಟು ಮಾತನಾಡಿರುವ ಅವರು, 'ಅವರಿಬ್ಬರೂ ಬಹಿರಂಗವಾಗಿ ಡೇಟಿಂಗ್ ಮಾಡುತ್ತಿರುವುದಾಗಿ ಹೇಳದಿದ್ದರೂ, ಅವರಿಬ್ಬರು ಎಷ್ಟು ಹತ್ತಿರವಾಗಿದ್ದರು ಎಂದು ಅಲ್ಲಿ ನೋಡಿದವರೆಲ್ಲರಿಗೂ ಗೊತ್ತು. ಅವರಿಬ್ಬರೂ ಡೇಟಿಂಗ್ ಮಾಡುತ್ತಿಲ್ಲ ಎಂದು ಕೆಲವೊಮ್ಮೆ ಹೇಳಿಕೊಂಡರೂ, ನಮಗೆಲ್ಲಾ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂಬ ವಿಷಯ ಗೊತ್ತಿತ್ತು' ಎಂದು ಲಿಜಾ ಹೇಳಿದ್ದಾರೆ.