ಬೇಕೋ, ಬೇಡವೋ ಗೊತ್ತಿಲ್ಲ. ಒಟ್ಟಿನಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆಯ ಹಿಂದೆ ಸಲ್ಮಾನ್ ಖಾನ್ ಅವರ ಹೆಸರು ಪದೇಪದೇ ಬರುತ್ತಲೇ ಇತ್ತು. ಸುಶಾಂತ್ ಸಾವಿಗೆ ಸಲ್ಮಾನ್ ನೇರವಾಗಿ ಕಾರಣವಲ್ಲದಿದ್ದರೂ, ಅವರು ಪರೋಕ್ಷ ಕಾರಣ ಎಂದು ಹೇಳಲಾಗುತಿತ್ತು. ಆದರೆ, ಇದಕ್ಕೆ ಪೂರಕವಾದ ಸಾಕ್ಷಾಧಾರಗಳು ಸಿಕ್ಕಿರಲಿಲ್ಲ.
ಇದೀಗ ಟ್ಯಾಲೆಂಟ್ ಮ್ಯಾನೇಜರ್ ರೇಶ್ಮಾ ಶೆಟ್ಟಿ ಅವರ ವಿಚಾರಣೆಯ ನಂತರ ಸಲ್ಮಾನ್ ಹೇಗೆ ಸುಶಾಂತ್ ಸಾವಿಗೆ ಮತ್ತು ಡಿಪ್ರೆಶನ್ಗೆ ಕಾರಣವಾಗಿರಬಹುದು ಎಂಬ ಅಂಶ ಬೆಳಕಿಗೆ ಬಂದ ಹಾಗಿದೆ.
ಮೂಲಗಳ ಪ್ರಕಾರ, ಸಲ್ಮಾನ್ ಮತ್ತು ಸುಶಾಂತ್ ನಡುವೆ ಯಾವುದೇ ರೀತಿಯ ಮಾತುಕಥೆಯೂ ಇರಲಿಲ್ಲ. ಜಗಳವಂತೂ ಇರಲೇ ಇಲ್ಲ. ಆದರೂ ಸಲ್ಮಾನ್ಗೆ ಸುಶಾಂತ್ ಬಗ್ಗೆ ಅಸಮಾಧಾನವಿತ್ತಂತೆ. ಅದಕ್ಕೆ ಕಾರಣ ಸೂರಜ್ ಪಂಚೋಲಿ.
ಹಿರಿಯ ನಟ ಆದಿತ್ಯ ಪಂಚೋಲಿ ಮಗ ಸೂರಜ್ ಪಂಚೋಲಿಯನ್ನು ಬಾಲಿವುಡ್ಗೆ ಹೀರೋ ಆಗಿ ಪರಿಚಯಿಸಿದ್ದು ಇದೇ ಸಲ್ಮಾನ್. ಪಾರ್ಟಿಯೊಂದರಲ್ಲಿ ಸೂರಜ್ ಮತ್ತು ಸುಶಾಂತ್ ನಡುವೆ ಜಗಳವಾಗಿತ್ತಂತೆ. ಅದನ್ನು ಸೂರಜ್, ಸಲ್ಮಾನ್ಗೆ ಹೇಳಿಕೊಂಡಿದ್ದರಂತೆ. ಅಲ್ಲಿಂದ ಸಲ್ಮಾನ್ ಅವರ ವಕ್ರದೃಷ್ಟಿ ಸುಶಾಂತ್ ಮೇಲೆ ಬೀಳುವುದಕ್ಕೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದೆ.
ತಮ್ಮ ಹುಡುಗನ ಮೇಲೆ ಕೈ ಮಾಡಿದ ಸುಶಾಂತ್ ಅವರನ್ನ ಬಿಡಬಾರದು ಎಂದು ಹಠಕ್ಕೆ ಬಿದ್ದ ಸಲ್ಮಾನ್, ತಮ್ಮ ಪವರ್ ಉಪಯೋಗಿಸಿ, ಯಶ್ರಾಜ್ ಫಿಲಂಸ್ ಬ್ಯಾನರ್ನಿಂದ ಸುಶಾಂತ್ರನ್ನು ಕಿತ್ತು ಹಾಕಿಸಿದರಂತೆ. ಯಶ್ರಾಜ್ ಫಿಲಂಸ್ ಬ್ಯಾನರ್ನಡಿ ಸುಶಾಂತ್, 'ಡಿಟೆಕ್ಟಿವ್ ಬ್ಯೋಮಕೇಶ ಭಕ್ಷಿ' ಮತ್ತು 'ಶುದ್ಧ್ ದೇಶಿ ರೊಮ್ಯಾನ್ಸ್' ಚಿತ್ರಗಳಲ್ಲಿ ನಟಿಸಿದ್ದರು. ಶೇಖರ್ ಕಪೂರ್ ನಿರ್ದೇಶನದ 'ಪಾನಿ' ಚಿತ್ರದಲ್ಲಿ ಅವರು ನಟಿಸಬೇಕಿತ್ತು.
ಇದನ್ನೂ ಓದಿ: ಮೇಕಪ್ ಮ್ಯಾನ್ ಸಾವಿಗೆ ದರ್ಶನ್ ಕಂಬನಿ
ಆದರೆ, ಸಲ್ಮಾನ್ ತಮ್ಮ ಪವರ್ ಉಪಯೋಗಿಸಿ, 'ಪಾನಿ' ಚಿತ್ರವು ಶುರುವಾಗದಂತೆ ತಡೆದರು ಎಂದು ಹೇಳಲಾಗುತ್ತಿದೆ. ಚಿತ್ರವನ್ನು ಆದಿತ್ಯ ಚೋಪ್ರಾ ನಿಲ್ಲಿಸುವುದಕ್ಕೆ ಒಪ್ಪದಿದ್ದಾಗ, ಸಲ್ಮಾನ್ ನೇರವಶಗಿ 'ಸುಲ್ತಾನ್' ಮತ್ತು 'ಟೈಗರ್ ಜಿಂದಾ ಹೇ' ಚಿತ್ರಗಳಲ್ಲಿ ನಟಿಸುವುದಕ್ಕೆ ನಿರಾಕರಿಸಿದರಂತೆ. ಅದಾಗಲೇ, ಆ ಎರಡೂ ಚಿತ್ರಗಳ ಮೇಲೆ ಸಾಕಷ್ಟು ಹಣ ಹೂಡಿದ್ದ ಆದಿತ್ಯ, ಬೇರೆ ದಾರಿ ಇಲ್ಲದೆ 'ಪಾನಿ' ಚಿತ್ರವನ್ನು ನಿಲ್ಲಿಸಿದ್ದಾರೆ.
'ಪಾನಿ' ಚಿತ್ರದ ಬಗ್ಗೆ ಸುಶಾಂತ್ ಅದೆಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು ಎಂದರೆ, ಆ ಚಿತ್ರಗಳಿಗೆ ಅವರು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಎರಡು ಚಿತ್ರಗಳನ್ನು ಬಿಟ್ಟಿದ್ದರು. ಆದರೆ, ಈ ಕಡೆ ಈ ಚಿತ್ರವೂ ನಿಂತು ಹೋಯಿತು. ಇದೆಲ್ಲದರಿಂದ ಸಾಕಷ್ಟು ನೊಂದಿದ್ದ ಸುಶಾಂತ್, ಡಿಪ್ರೆಶನ್ಗೆ ಒಳಗಾಗಿದ್ದರಿಂದ. ಅದೇ ಅವರ ಆತ್ಮಹತ್ಯೆಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.