ಸಿನಿವಾಣಿ

ಥಿಯೇಟರ್​ಗೆ ಜತೆಯಾಗಿಯೇ ಎಂಟ್ರಿ ಕೊಡಲಿದ್ದಾರೆ ಕಿಚ್ಚ ದಚ್ಚು; ಮತ್ತೆ ಶುರುವಾಗುತ್ತಾ ಸ್ಯಾಂಡಲ್​ವುಡ್​ ಫ್ಯಾನ್ಸ್​ ವಾರ್​?

Mandara

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ದರ್ಶನ್​ ಮತ್ತು ಕಿಚ್ಚ ಸುದೀಪ್ ಫ್ಯಾನ್ಸ್​ಗಳ ನಡುವೆ ಇರುವ ಭಿನ್ನಾಭಿಪ್ರಾಯಗಳು ಇಂದು ನಿನ್ನೆಯದಲ್ಲ. ಇದೀಗ ಈ ಎರಡೂ ನಟರ ಫ್ಯಾನ್ಸ್​ಗೆ ಒಂದು ಗುಡ್​ ನ್ಯೂಸ್​ ಇದ್ದರೆ ಇನ್ನೊಂದು ಬ್ಯಾಡ್​ ನ್ಯೂಸ್​ ಎದುರಾಗಿದೆ.

ಸುದೀಪ್​ ಅಭಿನಯದ ಕೋಟಿಗೊಬ್ಬ 3 ಸಿನಿಮಾವನ್ನು ಏಪ್ರಿಲ್​ 23ಕ್ಕೆ ಬಿಡುಗಡೆ ಮಾಡುವುದಾಗಿ ತಿಳಿಸಲಾಗಿದೆ. ಇದೀಗ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾವನ್ನೂ ಅದೇ ದಿನದಂದು ರಿಲೀಸ್​ ಮಾಡುವುದಾಗಿ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್​ ದಿಗ್ವಿಜಯ ನ್ಯೂಸ್​ಗೆ ತಿಳಿಸಿದ್ದಾರೆ. ಮೊದಲೇ ಸದಾ ಹೊಯ್ದಾಡಿಕೊಳ್ಳುವ ಫ್ಯಾನ್ಸ್​ ಇರುವಾಗ ಈ ಇಬ್ಬರು ನಟರ ಸಿನಿಮಾಗಳು ಒಟ್ಟಿಗೇ ತೆರೆ ಕಾಣುತ್ತಿರುವುದು ಅನೇಕರಿಗೆ ಕುತೂಹಲ ಮೂಡಿಸಿದೆ.

ಈ ಎರಡೂ ಸಿನಿಮಾಗಳು ಹೇಗಿರಲಿವೆ? ಸಿನಿಮಾ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನಸ್ಸು ಗೆಲ್ಲಲಿದೆ ಎನ್ನುವುದರ ಜತೆ ಈ ಸಿನಿಮಾ ಬಿಡುಗಡೆ ವೇಳೆಯಲ್ಲಿ ಅಭಿಮಾನಿಗಳು ಯಾವ ರೀತಿ ಸಿನಿಮಾವನ್ನು ಬರ ಮಾಡಿಕೊಳ್ಳಲಿದ್ದಾರೆ ಎನ್ನುವುದು ದೊಡ್ಡ ಪ್ರಶ್ನೆಯಾಗಿ ಕಾಡಲಾರಂಭಿಸಿದೆ. ಈ ಹಿಂದೆ ಮದಕರಿ ನಾಯಕ ಸಿನಿಮಾ ವಿಚಾರದಲ್ಲಿ ದೊಡ್ಡ ವಾರ್​ ಮಾಡಿಕೊಂಡಿದ್ದ ಕಿಚ್ಚ ದಚ್ಚು ಅಭಿಮಾನಿಗಳು ಈ ಬಾರಿ ಹೇಗೆ ವರ್ತಿಸಲಿದ್ದಾರೆ ಎನ್ನುವುದು ಸದ್ಯದ ಪ್ರಶ್ನೆ. (ದಿಗ್ವಿಜಯ ನ್ಯೂಸ್​)