ಸಿನಿವಾಣಿ

ನೀವು ಹೀಗೆ ಮಾಡಿದರೆ ಕ್ರೇಜಿಸ್ಟಾರ್ ರವಿಚಂದ್ರನ್ ನಿಮ್ಮ ಮನೆಗೆ ಬರುತ್ತಾರಂತೆ! ನೀವು ರೆಡಿನಾ?

ಬೆಂಗಳೂರು: ಒಬ್ಬ ಸ್ಟಾರ್ ನಟ ನಿಮ್ಮ ಮನೆಗೆ ಬರುತ್ತಾರೆಂದರೆ ನೀವು ಏನು ಮಾಡುತ್ತೀರಿ...? ಸಹಜವಾಗಿ, ಸೂಪರ್ ಎಕ್ಸೈಟ್ ಆಗುತ್ತಾರೆ ಜನ. ಅದರಲ್ಲೂ, ಆ ನಟನ ಅಭಿಮಾನಿಗಳು ಅಂತು ಗಾಳಿಯಲ್ಲಿ ತೆಲಾಡುತ್ತಾರೆ. ಈಗ ನಾವು ಕ್ರೇಜಿಸ್ಟಾರ್ ರವಿಚಂದ್ರನ್ ನಿಮ್ಮ ಮನೆಗೆ ಬರುತ್ತಾರೆಂದರೆ ನಿಮ್ಮ ಪ್ರತಿಕ್ರಿಯೆ ಹೇಗಿರಲಿದೆ? ಅಂದಹಾಗೆ, ಇದನ್ನ ನೀವು ನಂಬಲೆ ಬೇಕು. ಹೌದು, ನಿಮ್ಮ ಅದೃಷ್ಟ ಚೆನ್ನಾಗಿ ಇದ್ದರೆ, ನಿಜಕ್ಕೂ ರವಿಚಂದ್ರನ್ ನಿಮ್ಮ ಮನೆಗೆ ಆಗಮಿಸಲಿದ್ದಾರೆ. ಆದರೆ, ಅದಕ್ಕೆ ನೀವು ಒಂದು ಸಣ್ಣ ಕೆಲಸ ಮಾಡಬೇಕು. ಅಷ್ಟೇ. ಏನದು ಅಂತೀರಾ?

ದೃಶ್ಯ-1 ಸಿನಿಮಾ ಎಷ್ಟು ಹಿಟ್ ಆಯಿತು ಎಂದು ಎಲ್ಲರಿಗೂ ತಿಳಿದಿದೆ. ಜೊತೆಗೆ, ಈಗ ದೃಶ್ಯ-2 ಸಿನಿಮಾ ಕೂಡ ಥಿಯೇಟರ್​ಗಳಿಗೆ ಲಗ್ಗೆ ಇಟ್ಟಿದೆ. ಇನ್ನು ಸಿನಿಮಾಗೆ ಒಳ್ಳೆಯ ರಿಯಾಕ್ಷನ್ ಸಹ ಲಭಿಸುತ್ತಿದೆ. ಇದೇ ಸಮಯದಲ್ಲಿ ತಮ್ಮ ಸಿನಿಮಾವನ್ನು ಹೆಚ್ಚು ಪ್ರಮೋಟ್ ಮಾಡಲು ಈ ಸಿನಿಮಾ ತಂಡ ಒಂದು ಹೊಸ ಪ್ಲಾನ್ ಮಾಡಿಕೊಂಡಿದೆ. ಅದವೇ ದೃಶ್ಯ-2 ಒಂದು ಫ್ಯಾಮೆಲಿ ಎಂಟರ್​ಟೈನ್ಮೆಂಟ್​ ಸಿನಿಮಾ ಆಗಿರುವುದರಿಂದ, ನಿಮ್ಮ ಮನೆಗೆ ರವಿಚಂದ್ರನ್ ಅವರನ್ನು ಕಳುಹಿಸುತ್ತಾರಂತೆ. ಹಾಗಾಗಿ, ರವಿಚಂದ್ರನ್ ನಿಮ್ಮ ಮನೆಗೆ ಬರಬೇಕೆಂದರೆ ನೀವು ನಿಮ್ಮ ಕುಟುಂಬದ ಜೊತೆ ಸೇರಿ ದೃಶ್ಯ-2 ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ, ನಿಮ್ಮ ಕುಟುಂಬದವರ ಒಟ್ಟಿಗೆ ಥಿಯೇಟರ್​ನಲ್ಲಿ ಒಂದು ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ದೃಶ್ಯ-2 ಚಿತ್ರತಂಡಕ್ಕೆ ಕಳುಹಿಸಿದರೆ ಸಾಕು. ಅದೃಷ್ಟ-ಸ್ಪರ್ಧೆಯಲ್ಲಿ ನೀವೆ ಅದೃಷ್ಟವಂತರಾಗಿದ್ದರೆ ರವಿಚಂದ್ರನ್ ಅವರು ನಿಮ್ಮ ಮನೆಗೆ ಬರಲಿದ್ದಾರೆ.

ಹಾಗಿದ್ದರೆ, ನೀವು ನಿಮ್ಮ ಕುಟುಂಬದ ಸೆಲ್ಫಿಯನ್ನು 'ದೃಶ್ಯ-2' ಸಿನಿಮಾತಂಡಕ್ಕೆ ತಲುಪಿಸುವುದು ಹೇಗೆ ಅಂತೀರಾ? ನಿಮ್ಮ ಕುಟುಂಬದ ಸೆಲ್ಫಿಯನ್ನು ನಿಮ್ಮ ಫೇಸ್ಬುಕ್, ಟ್ವಿಟರ್, ಇನ್​ಸ್ಟಾಗ್ರಾಂ ಖಾತೆಗಳಲ್ಲಿ ಅಪ್​​ಲೋಡ್ ಮಾಡಿ ಅದಕ್ಕೆ #Drishyam2FamilyContest ಎಂಬ ಟೈಟಲ್ ಕೊಟ್ಟರೆ ಸಾಕು. ನಿಮ್ಮ ಫೋಟೋ ಚಿತ್ರತಂಡವನ್ನು ತಲುಪುತ್ತೆ. ಈಗ ನೀವು ಈ ಅದೃಷ್ಟ-ಸ್ಪರ್ಧೆಗೆ ಟ್ರೈ ಮಾಡುವುದು ಅಥವಾ ಬಿಡುವುದು ನಿಮಗೆ ಬಿಟ್ಟಿದ್ದು. ತಮ್ಮ ಬಹಳಷ್ಟು ಸಿನಿಮಾಗಳಿಗೆ ನಟ ರವಿಚಂದ್ರನ್ ಪ್ರಚಾರ ಮಾಡಿದ್ದಾರೆ. ಆದರೆ, ನಟ ಮೊದಲ ಬಾರಿ ಒಂದು ಸಿನಿಮಾಗೆ ಇಷ್ಟೊಂದು ಪ್ರಚಾರ ಮಾಡುತ್ತಿರುವುದು. ಸಿನಿಮಾ ರಿಲೀಸ್ ಆಗೋಕೆ ಮುಂಚೆ ಮತ್ತು ಈಗ 550ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಸಿನಿಮಾ ಬಿಡುಗಡೆಯಾದ ನಂತರವೂ ರವಿಚಂದ್ರನ್ ಅವರು ದೃಶ್ಯ-2 ಸಿನಿಮಾ ಪ್ರಚಾರ ಮಾಡುತ್ತಲೆ ಇದ್ದಾರೆ.

ಇನ್ನು, ಹಿಂದೆಂದೂ ಮಾಡದ ರೀತಿಯಲ್ಲಿ ಇದೇ ಮೊದಲ ಬಾರಿ ಸಿನಿಮಾ ನೋಡಿದ ಅಭಿಮಾನಿಯ ಮನೆಗೆ ಹೋಗಲು ಸಹ ರೆಡಿಯಾಗಿದ್ದಾರೆ ಕ್ರೇಜಿಸ್ಟಾರ್. ಇದಕ್ಕೆ ಕಾರಣ ನಟ ರವಿಚಂದ್ರನ್ ಅವರು ತುಂಬಾ ಇಷ್ಟ ಪಟ್ಟು ನಟಿಸಿದ ಸಿನಿಮಾ ಇದು. ದೃಶ್ಯ, ದೃಶ್ಯ-2 ಸಿನಿಮಾಗಳು ಮಲಯಾಳಂ ಸಿನಿಮಾ ರೀಮೇಕ್ ಆದರೂ ಅದನ್ನು ಕನ್ನಡ ಸಿನಿಪ್ರೇಕ್ಷಕರಿಗೆ ತಕ್ಕಂತೆ ಮಾಡಲಾಗಿದೆ. ಹಾಗಾಗಿ, ಈ ಸಿನಿಮಾ ಅಪ್ಪಟ ಕನ್ನಡ ಚಿತ್ರ ಆಗಿಯೇ ತೆರೆ ಮೇಲೆ ಬಂದಿದೆ ಅಂತಿದೆ ಸಿನಿಮಾ ಟೀಮ್. ಚಿತ್ರ ಜನರಿಗೆ ತಲುಪಬೇಕು ಎಂಬ ಚಿತ್ರತಂಡದ ಈ ಶತಪ್ರಯತ್ನಕ್ಕೆ ನೀವು ಸಾತ್ ಕೊಡಬೇಕೆಂಬುದು ಅವರ ಆಸೆ.