ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಚಿಯಾನ್ ವಿಕ್ರಂ ನಾಯಕತ್ವದ ‘ಕೋಬ್ರಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್ ನಿಂತಿದೆ. ಆದರೂ, ಈ ಸಂದರ್ಭದಲ್ಲಿ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಸದ್ದು ಮಾಡುತ್ತಿದೆ. ಇದೀಗ ಅದೇ ಹಾಡಿನ ಒಂದಷ್ಟು ಫೋಟೋಗಳು ಲಭ್ಯವಾಗಿವೆ.
ಇಲ್ಲಿಯವರೆಗೂ ಚಿಯಾನ್ ವಿಕ್ರಂ ಜತೆ ಶ್ರೀನಿಧಿ ನಟಿಸಲಿದ್ದಾರೆ ಎಂಬುದಷ್ಟೇ ಅಧಿಕೃತವಾಗಿತ್ತು. ಆದರೆ, ಈ ಜೋಡಿಯ ಆನ್ಸ್ಕ್ರೀನ್ ಕೆಮಿಸ್ಟ್ರಿ ಹೇಗಿದೆ ಎಂಬುದಕ್ಕೆ ಸಾಕ್ಷ್ಯವಾಗಿ ಒಂದೇ ಒಂದು ಫೋಟೋ ಲಭ್ಯವಾಗಿರಲಿಲ್ಲ. ಇದೀಗ ಇಬ್ಬರು ಜತೆಗಿರುವ ಫೋಟೋಗಳೇ ಸಿಕ್ಕಿವೆ. ಇನ್ನು ಇಂದು ಸಂಜೆ 5ಕ್ಕೆ ಬಿಡುಗಡೆ ಆಗಲಿರುವ ಹಾಡು ನಾಯಕ ಮತ್ತು ನಾಯಕಿ ನಡುವಿನ ನಿಶ್ಚಿತಾರ್ಥದ ಸಂದರ್ಭದಲ್ಲಿ ಚಿತ್ರೀಕರಿಸಿದ ಹಾಡಾಗಿದೆ. ಕೆಜಿಎಫ್ನಲ್ಲಿ ಒಂದಷ್ಟು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ಶ್ರೀನಿಧಿ, ಇಲ್ಲಿ ವಧುವಿನ ಕಳೆಯಲ್ಲಿ ಮಿಂಚುತ್ತಿದ್ದಾರೆ. ಆಮಂತ್ರಣ ಪತ್ರಿಕೆ ಮೂಲಕವೇ ಗಮನ ಸೆಳೆದಿದ್ದ ಕೋಬ್ರಾ ಚಿತ್ರದ ಒಂದಷ್ಟು ಮೇಕಿಂಗ್ ಫೋಟೋಗಳು ಇಲ್ಲಿವೆ.
ಇದನ್ನೂ ಓದಿ: ಆಕೆ ದುಡ್ಡಿಗಾಗಿ ಇಷ್ಟೆಲ್ಲಾ ಮಾಡ್ತಿದ್ದಾಳೆ: ವನಿತಾ
ಫೋಟೋ ಮೇಲೆ ಕ್ಲಿಕ್ ಮಾಡಿ ಸ್ಲೈಡ್ ಸರಿಸಿ..