ಸಿನಿವಾಣಿ

ಈ ವರ್ಷ ಹಸೆಮಣೆ ಏರಲಿದ್ದಾರಾ ನಟಿ ತ್ರಿಷಾ?

chetannadiger

ಹೈದರಾಬಾದ್​: ಸ್ಯಾಂಡಲ್​ವುಡ್​ ಸೇರಿದಂತೆ ಹಲವು ವುಡ್​ಗಳಲ್ಲಿ ಕೆಲಸ ಮಾಡಿರುವ ತ್ರಿಷಾ, ಈ ವರ್ಷ ಮದುವೆಯಾಗುತ್ತಿದ್ದಾರಾ? ಇಂಥದ್ದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಮತ್ತೊಬ್ಬ ನಟಿ ಚಾರ್ಮಿ ಕೌರ್​.

ತ್ರಿಷಾ ಮದುವೆಯಾಗುವುದಕ್ಕೂ ಚಾರ್ಮಿ ಕೌರ್​ಗೂ ಏನು ಸಂಬಂಧ ಎಂಬ ಪ್ರಶ್ನೆ ಬರುವುದು ಸಹಜವೇ. ವಿಷಯವೇನೆಂದರೆ, ತ್ರಿಷಾ ಈ ವರ್ಷ ಮದುವೆಯಾಗಬಹುದೆಂದು ಹಿಂಟ್​ ಕೊಟ್ಟಿರುವುದು ಬೇರೆ ಯಾರೂ ಅಲ್ಲ, ಅದೇ ಚಾರ್ಮಿ ಕೌರ್​.

ಇತ್ತೀಚೆಗೆ ತ್ರಿಷಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತೆಲುಗು ಮತ್ತು ತಮಿಳು ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಅವರಿಗೆ ಸೋಷಿಯಲ್​ ಮೀಡಿಯಾ ಮೂಲಕ ಶುಭ ಕೋರಿದ್ದಾರೆ. ಈ ಪೈಕಿ ಚಾರ್ಮಿ ಸಹ ಒಬ್ಬರು. ತ್ರಿಷಾಗೆ ಶುಭ ಕೋರುವ ಭರದಲ್ಲಿ, ಬ್ಯಾಚಲರೇಟ್​ ಆಗಿ ಇದೇ ನಿನ್ನ ಕೊನೆಯ ವರ್ಷವಾಗಲಿದೆ ಎಂದು ನನಗೆ ಬಲವಾಗಿ ಅನಿಸುತ್ತಿದೆ ಎಂದು ಹೆಳಿದ್ದಾರೆ.

ಚಾರ್ಮಿ ಅವರ ಈ ಟ್ವೀಟ್​ ಎಲ್ಲರ ಗಮನಸೆಳೆದಿದ್ದು, ತ್ರಿಷಾ ಈ ವರ್ಷ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಡಿಬಿ್ಟ್ಟಿದೆ. ಈ ವಿಷಯವಾಗಿ ಚಾರ್ಮಿ ಹೆ್ಚ್ಚು ಬೆಳೆಸುವುದಕ್ಕೆ ಹೋಗದಿದ್ದರೂ, ತ್ರಿಷಾ ಈ ವರ್ಷ ಮದುವೆಯಾಗುವುದು ನಿಶ್ಚಿತ ಎಂಬ ಸುದ್ದಿಯನ್ನು ಹಲವರು ನಂಬಿದ್ದಾರೆ. ಈ ನಂಬಿಕೆಯನ್ನು ತ್ರಿಷಾ ನಿಜ ಮಾಡುತ್ತಾರೋ, ಸುಳ್ಳು ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.