ಸಿನಿವಾಣಿ

'ಪುಷ್ಪ' ಚಿತ್ರದ ಒಟ್ಟಾರೆ ಬಜೆಟ್​ ಬಹಿರಂಗ; ಟಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದ ಬಿಗ್ ಮೊತ್ತ...

ಹೈದರಾಬಾದ್: ಸುಕುಮಾರ್ ನಿರ್ದೇಶನದ ಪುಷ್ಪ ಬಹುಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾ. ತೆಲುಗಿನ ಜತೆಗೆ ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದರಂತೆ ಇದೀಗ ಚಿತ್ರದ ಬಜೆಟ್ ವಿಚಾರವೂ ಬಹಿರಂಗವಾಗಿದೆ.

ಹೌದು, ಮೊದಲಿಗೆ 160 ಕೋಟಿಯ ವೆಚ್ಚದ ಈ ಸಿನಿಮಾ ಇದೀಗ 250 ಕೋಟಿ ವೆಚ್ಚಕ್ಕೆ ಏರಿಕೆಯಾಗಿದೆ. ಅಂದರೆ, ಎರಡೂ ಭಾಗಗಳನ್ನು ಮುಗಿಸುವಷ್ಟರಲ್ಲಿ ಚಿತ್ರದ ನಿರ್ಮಾಪಕರು ಬರೋಬ್ಬರಿ 250 ಕೋಟಿ ಮೊತ್ತವನ್ನು ಈ ಚಿತ್ರಕ್ಕೆ ಸುರಿಯಲಿದ್ದಾರೆ. ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಬಾಕಿ ಇರುವಾಗಲೇ 100 ಕೋಟಿಗೂ ಅಧಿಕ ಖರ್ಚಾಗಿದೆ ಎನ್ನಲಾಗುತ್ತಿದೆ. ಇದರಲ್ಲಿ ಕಲಾವಿದರೆಲ್ಲರ ಸಂಭಾವನೆಯೂ ಸೇರಿಕೊಂಡಿದೆ ಎಂಬುದನ್ನೂ ಗಮನಿಸಬೇಕಾದ ಅಂಶ.

ಸದ್ಯ ಕೋವಿಡ್ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಗಿತಗೊಂಡಿದ್ದು, ಇನ್ನೂ 45 ದಿನದ ಶೂಟ್ ಮುಗಿದರೆ ಮೊದಲ ಭಾಗದ ಚಿತ್ರೀಕರಣ ಮುಕ್ತಾಯವಾದಂತೆ. ಮುಂದಿನ ವರ್ಷ ಎರಡನೇ ಭಾಗದ ಚಿತ್ರೀಕರಣಕ್ಕೆ ತಂಡ ಚಾಲನೆ ನೀಡಲಿದ್ದು, ಅಲ್ಉ ಅರ್ಜುನ್, ರಶ್ಮಿಕಾ ಮಂದಣ್ಣ ನಾಯಕ ನಾಯಕಿಯಾಗಿದ್ದಾರೆ. ಇದರ ಜತೆಗೆ ಮಲಯಾಳಂನ ಫಹಾದ್ ಫಾಸಿಲ್ ಖಳನಾಗಿ ನಟಿಸಿದ್ದಾರೆ.